ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಗಗನಕ್ಕೇರಿದ ಚಿನ್ನದ ದರ(Gold Rate) ಕಳೆದ ನಾಲ್ಕು ದಿನಗಳಿಂದ ಇಳಿಕೆ ಕಂಡಿದ್ದು ಚಿನ್ನಪ್ರಿಯರು ಲಕ್ಷ್ಯ ಹರಿಸುವಂತಾಗಿದೆ.
ಮಂಗಳವಾರ ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 10,140 ರೂಪಾಯಿ ಆಗಿದ್ದು, 88 ರುಪಾಯಿ ಕಡಿಮೆ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 80 ರೂಪಾಯಿ ಇಳಿಕೆ ಕಂಡಿದ್ದು, 9,295 ರುಪಾಯಿ ಆಗಿದೆ. ವಾರದ ಹಿಂದೆ ಭಾರೀ ಏರಿಕೆಯತ್ತ ಸಾಗಿದ್ದ ಬಂಗಾರದ ದರ(Gold Rate) ಇದೀಗ ಗಣನೀಯವಾಗಿ ಇಳಿಕೆ ಕಾಣುತ್ತಿರುವುದು ಬಂಗಾರ ಪ್ರಿಯರು ಹಳದಿ ಲೋಹದ ಮೇಲೆ ಗಮನ ಹರಿಸುವಂತಾಗಿದೆ.
ಅಗಸ್ಟ್ 12ರಂದು ಮಂಗಳವಾರ ಬೆಳಗಿನ ವೇಳೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 880 ರೂ. ಕುಸಿದಿದೆ. ಇನ್ನು 22 ಕ್ಯಾರೆಟ್ ಚಿನ್ನ 800 ರೂ. ಕಡಿಮೆಯಾಗಿದೆ. ಹೀಗಾಗಿ ಕಳೆದ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 2 ಸಾವಿರ ರೂ. ಇಳಿಕೆ ಕಂಡಂತಾಗಿದೆ.
ರಷ್ಯಾ-ಯುಕ್ರೇನ್(Russai – Ukraine) ನಡುವೆ ಉಂಟಾದ ಯುದ್ಧ ಕೊನೆ ಹಂತಕ್ಕೆ ತಲುಪಿರುವುದು ಚಿನ್ನದ ಬೇಡಿಕೆ(Gold Demand) ಕುಸಿತಕ್ಕೆ ಪರೋಕ್ಷವಾಗಿ ಕಾರಣ ಎಂದು ಹೇಳಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತು ರಷ್ಯಾದ ಅಧ್ಯಕ್ಷ ಪುಟಿನ್(Putin) ಬರುವ ಆಗಸ್ಟ್ 15ರಂದು ಅಮೆರಿಕಾದಲ್ಲಿ ಮುಖಾಮುಖಿಯಾಗಲಿದ್ದು, ಯುದ್ಧವನ್ನು ಕೊನೆಗೊಳಿಸುವ(War End) ಬಗ್ಗೆ ಇಬ್ಬರೂ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.
ಒಂದು ವೇಳೆ ಮಾತುಕತೆಗಳು ಯಶಸ್ವಿಯಾದರೆ, ಚಿನ್ನದ ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ, ಟ್ರಂಪ್ ಭಾರತದ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವ ಸಾಧ್ಯತೆಯೂ ಹೆಚ್ಚಾಗಿದೆ. ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಮೀನು ಹಿಡಿಯಲು ತೆರಳಿದ್ದ ಓರ್ವನ ಮೃದೇಹ ಪತ್ತೆ. ಇನ್ನೋರ್ವನಿಗಾಗಿ ಮುಂದುವರಿದ ಶೋಧ.

