ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಳಿಯಾಳ(Haliyal) : ಹಳಿಯಾಳದ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ(Mahaganapati Temple) ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ. ದೇವಾಲಯದಲ್ಲಿ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಕಳ್ಳತನ(Silver Theft) ಮಾಡಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಸುಮಾರು 5 ಕಿಲೋಗ್ರಾಂ ತೂಕದ ಸುಮಾರು ₹6 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳ್ಳಿ ಕವಚವನ್ನು ಕದ್ದೊಯ್ದಿದ್ದಾರೆ. ದೇವಾಲಯವೂ ನೂತನ ಬಸ್ ನಿಲ್ದಾಣ(New Busstand) ಮತ್ತು ಪೋಲಿಸ್ ಠಾಣೆಯ(Police Station) ಅನತಿ ದೂರದಲ್ಲಿದ್ದು ಹೈವೇಗೆ ಹೊಂದಿಕೊಂಡಿದೆ. ವನಶ್ರೀ ವೃತ್ತ(Vanashree Circle) ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ(Chennamma Circle) ಸಮೀಪವೇ ಇರುವ ದೇವಾಲಯ ಕಳ್ಳತನ ಆಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಕಳ್ಳರು ದೇವಾಲಯದ ಬಾಗಿಲು ಮತ್ತು ಚೌಕಟ್ಟಿಗೆ ಅಳವಡಿಸಿದ ಬೆಳ್ಳಿಯನ್ನು ಕಿತ್ತು ಕದ್ದು ಪರಾರಿಯಾಗಿದ್ದಾರೆ. ಹಳಿಯಾಳ ಪೊಲೀಸ್ ಠಾಣೆ(Haliyal Police Station) ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನು ಓದಿ : ಭಟ್ಕಳ ತಾಲ್ಲೂಕು ಆಸ್ಪತ್ರೆಯಲ್ಲಿ ಯಾರ ಕೈಚಳಕ . ಇನ್ನಾದರೂ ಡೋಸ್ ನೀಡುವರೇ ಅಧಿಕಾರಿಗಳು.