ಹೊನ್ನಾವರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮತ್ತೊಂದು ಗುಡ್ಡ ಕುಸಿದು (LANDSLIDE) ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ. ಸಂದರ್ಭದಲ್ಲಿ ಯಾವುದೇ ವಾಹನಗಳಿಲ್ಲದಿರುವುದರಿಂದ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ.
ಇಲ್ಲಿನ ಕರ್ನಲ್ ಹಿಲ್ (KARNAL HILL) ಸಮೀಪ ಇರುವ ಗುಡ್ಡದಿಂದ ಬಂಡೆಗಲ್ಲುಗಳು ಮತ್ತು ಮಣ್ಣು ಕುಸಿದು ಹೆದ್ದಾರಿಗೆ ಬಿದ್ದಿದೆ. ರಾತ್ರಿಯಿಂದ ಮತ್ತೆ ಬಾರೀ ಪ್ರಮಾಣದ ಮಳೆ ಸುರಿಯುತ್ತಿರುವುದರಿಂದ ಕುಸಿತ ಉಂಟಾಗಿದೆ.
ಹೀಗಾಗಿ ರಾಷ್ಟ್ರೀಯ ಹೆದ್ದಾರಿ 66 (NH66)ಕುಮಟಾದಿಂದ ಹೊನ್ನಾವರ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇನ್ನೊಂದು ಮಾರ್ಗದಿಂದ ವಾಹನ ಸಂಚರಿಸಲು ಅನುವು ಮಾಡಿಕೊಟ್ಟರು.
ಬಳಿಕ ಹೆದ್ದಾರಿ ಮೇಲೆ ಬಿದ್ದಿರುವ ಬಂಡೆಗಲ್ಲು ಮತ್ತು ಮಣ್ಣುಗಳನ್ನ ತೆರವುಗೊಳಿಸುವ ಕಾರ್ಯವನ್ನ ಐಆರ್ಬಿ (IRB) ಕಾರ್ಮಿಕರು ಮಾಡುತ್ತಿದ್ದಾರೆ. ಬಂಡೆಗಲ್ಲು ತೆರವುಗೊಳಿಸಿದ ಬಳಿಕ ಆ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ. ಕೆಲ ದಿನಗಳ ಹಿಂದೆ ಹೊನ್ನಾವರದ ವರ್ನಕೇರಿ ಬಳಿ ಹೆದ್ದಾರಿಯಲ್ಲಿ ಗುಡ್ಡ ಕುಸಿದಿತ್ತು.