ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಾರವಾರದಲ್ಲಿ ನಿರ್ಮಾಣವಾಗಿರುವ   ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮೊದಲು ಎಂಆರ್ ಐ  ಸ್ಕ್ಯಾನಿಂಗ್(MRI Scanning) ಕೊಡಿಸಿ, ಆಸ್ಪತ್ರೆಗೆ ಬೇಕಾದ ಉಪಕರಣಗಳನ್ನು (Instruments) ಒದಗಿಸಿ ನಂತರ ಉದ್ಘಾಟನೆಗೆ ಬನ್ನಿ ಎಂದು ರಾಜ್ಯ ಬಿಜೆಪಿ ಮಹಿಳಾ ಉಪಾಧ್ಯಕ್ಷೆ ರೂಪಾಲಿ ನಾಯ್ಕ(Roopali Naik) ಕಿಡಿ ಕಾರಿದ್ದಾರೆ.

ಕಾರವಾರದ ಜಿಲ್ಲಾಧಿಕಾರಿ ಕಚೇರಿ(Karwar DC Office) ಎದುರು ಬಿಜೆಪಿ ಪಕ್ಷದ ಪ್ರತಿಭಟನೆ(BJP Party Protest) ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ(Congress Government) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನು ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಬೇಕು(Super Specialty Hospital ) ಎಂದು ಹಲವು ಬಾರಿ ಮನವಿ ಮಾಡಿದಾಗ ಹಿಂದಿನ ನಮ್ಮ ಯಡಿಯೂರಪ್ಪ ಸರ್ಕಾರದಲ್ಲಿ (Yadiyurappa Government) 150 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದರು. ಆಸ್ಪತ್ರೆಯ ಕಟ್ಟಡವೂ ನಿರ್ಮಾಣವಾಗಿದೆ. ಆದರೆ ಆಸ್ಪತ್ರೆಯಲ್ಲಿ ಮುಖ್ಯವಾಗಿ ಇರಬೇಕಾದ ಒಂದೇ ಒಂದು ಉಪಕರಣವನ್ನೂ ಇಂದಿನ  ಸರ್ಕಾರ ಒದಗಿಸಿಲ್ಲ. ಏನು ಮಾಡದೇ ನಮ್ಮ ಅವಧಿಯಲ್ಲಿ ನಿರ್ಮಾಣವಾದ ಕಟ್ಟಡವನ್ನೇ ಉದ್ಘಾಟನೆ ಮಾಡಲು ಸಿಎಂ(CM) ಬರ್ತಿದ್ದಾರೆ.

ಮುಖ್ಯಮಂತ್ರಿಗಳೇ, ನೀವು ನಮ್ಮ ಕಾರವಾರ ಆಸ್ಪತ್ರೆ ಉದ್ಘಾಟನೆ(Karwar Hospital Inauguration) ಮಾಡಲು ಬರುವ ಮೊದಲು ರೋಗಿಗಳ ತಪಾಸಣೆಗೆ ಬೇಕಾದ ಉಪಕರಣಗಳನ್ನು ಮೊದಲು ಒದಗಿಸಿ, ನಂತರ ಉದ್ಘಾಟನೆ ಮಾಡಲು ಬನ್ನಿ. ಇದರ ನಡುವೆಯೂ ಹಾಗೆಯೇ ಉದ್ಘಾಟನೆ ಮಾಡಲು ಬಂದರೆ ನಾವು ಸುಮ್ಮನಿರುವುದಿಲ್ಲ. ಇಲ್ಲಿ ಸರಿಯಾದ ವ್ಯವಸ್ಥೆಗಳು ಇಲ್ಲದ ಕಾರಣಕ್ಕೆ ರೋಗಿಗಳು ಮಂಗಳೂರು(Mangalore), ಗೋವಾ(Goa), ಹುಬ್ಬಳ್ಳಿ(Hubli) ಆಸ್ಪತ್ರೆಗಳಿಗೆ ಅಲೆದಾಟ ಮಾಡಬೇಕಾಗಿದೆ.

ನಮ್ಮ ಸರ್ಕಾರದಲ್ಲಿ ಬಿಡುಗಡೆಯಾದ ಹಣವನ್ನೇ ಬೇರೆ ಯೋಜನೆಗಳಿಗೆ ಬಳಸಿಕೊಂಡಿರುವ  ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು” ಎಂದು ರೂಪಾಲಿ ನಾಯ್ಕ(Roopali Naik) ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನು ಓದಿ : ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ. ನೌಕಾ ಸಿಬ್ಬಂದಿಗಳಿಂದ ಆಕರ್ಷಕ ಬೀಟಿಂಗ್ ರಿಟ್ರೀಟ್.

ಶಾಲೆಗೆ ಕಳಪೆ ತೊಗರಿಬೇಳೆ ಪೂರೈಕೆ. ಆಕ್ರೋಶಗೊಂಡ ಎಸ್ಡಿಎಂಸಿ, ಪಾಲಕರು.