ಬೆಂಗಳೂರು(BANGLORE) : ಕಾರವಾರ ಶಾಸಕ ಸತೀಶ್ ಸೈಲ್ (Karwar Mla Satish Sail) ಶನಿವಾರ ಕೆಪಿಸಿಸಿ(KPCC) ರಾಜ್ಯಾಧ್ಯಕ್ಷ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (D K Shivakumar) ಅವರ ಮನೆಗೆ ಭೇಟಿ ನೀಡಿದರು.

ಇತ್ತೀಚಿಗೆ ನಡೆದಿರುವ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ ಸತೀಶ್ ಸೈಲ್(Satish Sail), ಕ್ಷೇತ್ರದ ರಾಜಕೀಯ ಮತ್ತು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಶಿವಕುಮಾರ್ ಅವರು ಶಿರೂರು ದುರಂತದಲ್ಲಿ (Shiruru Incident) ಕಾರ್ಯ ನಿರ್ವಹಿಸಿದ ಸೈಲ್ ಅವರ ಜವಾಬ್ದಾರಿಗೆ ಪ್ರಶಂಸೆ ವ್ಯಕ್ತಪಡಿಸಿ ಮುಂದೆ ಎಲ್ಲವೂ ಒಳ್ಳೆಯದಾಗುತ್ತೆ ಎಂದಿದ್ದಾರೆ.

ಬೇಲೆಕೇರಿ ಪ್ರಕರಣದಲ್ಲಿ (Belekeri Case) ಸತೀಶ್ ಸೈಲ್ ಅವರಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಅಲ್ಲದೇ ವಿಧಿಸಿದ ಶಿಕ್ಷೆ ಅಮಾನತ್ತಿನಲ್ಲಿಡಲು ಅದೇಶಿಸಿತ್ತು. ಶಾಸಕ ಸತೀಶ್ ಸೈಲ್ ಭಾನುವಾರ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.

ಇದನ್ನು ಓದಿ : ಹೃದಯಘಾತದಿಂದ ಬಾಲಕಿ ಸಾವು

ಲಂಚ ಪಡೆಯುತ್ತಿದ್ದ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ