ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬ್ರಹ್ಮಾವರ(Brahmavara) : ತಾಲೂಕಿನ ಬಿಸಿಎಂ ಹಾಸ್ಟೆಲ್‌ನಿಂದ(BCM Hostel) ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಜೆಯ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದ ಹಾಸ್ಟೆಲ್‌ನಲ್ಲಿದ್ದ ಮೂವರು ವಿದ್ಯಾರ್ಥಿನಿಯರು ಶನಿವಾರ ಸಂಜೆ ನಾಲ್ಕು ಗಂಟೆಯಿಂದ ಕಾಣೆಯಾಗಿದ್ದರು. ಈ ಬಗ್ಗೆ ಹಾಸ್ಟೆಲ್ ವಾರ್ಡನ್(Hostel Warden) ಬ್ರಹ್ಮಾವರ ಠಾಣೆಗೆ(Brahmavar Station) ದೂರು ನೀಡಿದ್ದು, ಅದರಂತೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಅಶೋಕ್ ಮಳಬಗಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ನಾಪತ್ತೆಯಾಗಿದ್ದ ಮಕ್ಕಳನ್ನು ರಾತ್ರಿ ಸುಮಾರಿಗೆ ಮಂಗಳೂರು ಬಿ.ಸಿ.ರೋಡ್(B C Road Manglore) ಬಳಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮೂವರು 6, 7, 8ನೇ ತರಗತಿಯ ವಿದ್ಯಾರ್ಥಿನಿಯರಾಗಿದ್ದು ಉತ್ತರ ಕರ್ನಾಟಕ(Uttarkarnataka) ಮೂಲದವರಾಗಿದ್ದಾರೆ ಎನ್ನಲಾಗಿದೆ. ಹಾಸ್ಟೆಲ್ ನಿಂದ ತಪ್ಪಿಸಿಕೊಂಡ ಮೂವರು ಬೆಂಗಳೂರು(Bangalore) ಕಡೆ ತೆರಳುವ ಬಸ್ ಏರಿದರೆನ್ನಲಾಗಿದೆ. ಇದೀಗ ಮಕ್ಕಳನ್ನು ವಾಪಾಸ್ಸು ಬ್ರಹ್ಮಾವರಕ್ಕೆ(Brahmavar) ಕರೆತರಲಾಗಿದೆ. ಬಾಲಕಿಯರ ಪತ್ತೆಯಿಂದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನು ಓದಿ : ಕೈಗಾದಲ್ಲಿ ಗೇಟ್ ಮೈಮೇಲೆ ಬಿದ್ದು ಸಿಐಎಸ್ಎಪ್ ಸಿಬ್ಬಂದಿ ದುರ್ಮರಣ.
ಬೇಲೇಕೇರಿ ಕೇಸ್. ಶಾಸಕ ಸತೀಶ್ ಸೈಲ್ ಅವರ 21 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು.
ಮಾಜಾಳಿ ಗಡಿಯಲ್ಲಿ ‘ಹರಹರ ಮಹಾದೇವ’. ಹಾರಿದ ವಾಪ್ಹರ್ ಬಲೂನ್.
ಜಮೀನಿನ ಸರ್ವೆಗೆ ಬಂದಾಗ ದೈವ ಬಂದವರಂತೆ ನಟಿಸಿ ಹಲ್ಲೆ.
ಸೋನಾರಕೇರಿಯ ಕೆರೆಯಲ್ಲಿ ಮೀನು ಹಿಡಿಯಲು ಹೋದ ಬಾಲಕ ದುರ್ಮರಣ.
ಶಾಸಕ ಸತೀಶ ಸೈಲ್ ಗೆ ಮತ್ತೆ ಬೇಲೇಕೇರಿ ಪ್ರಕರಣದ ಉರುಳು. ಬಂಧನ ವಾರಂಟ್.

