ಇ ಸಮಾಚಾರ ಡಿಜಿಟಲ್ ನ್ಯೂಸ್ (esamacharadigital news) ಕಾರವಾರ(Karwar) : ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ(District Jail) ಮತ್ತೆ ಖೈದಿಗಳು ಗಲಾಟೆ ಮಾಡಿದ್ದಾರೆ. ಮಂಗಳೂರು ಮೂಲದ ಆರು ಜನ ವಿಚಾರಣಾಧೀನ ಖೈದಿಗಳು(Prisoners) ಜೈಲಿನ ಹಾಲ್ ನಲ್ಲಿರುವ ಟಿವಿ ಒಡೆದು ಹಾನಿ(TV Loss) ಮಾಡಿದ್ದಾರೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.ಜೈಲಿನಲ್ಲಿ ತಮ್ಮನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನಮ್ಮ ಸಮಸ್ಯೆ ಕೇಳೋದಿಲ್ಲ ಎಂದು ತಗಾದೆ ತೆಗೆದು ಗಲಾಟೆ ಮಾಡಿದ್ದಾರೆ. ಬಳಿಕ ವಸ್ತುಗಳನ್ನ ಹಾನಿಗೊಳಿಸಿದ್ದಾರೆ.
ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಾರವಾರ ನಗರ ಠಾಣೆ ಪೊಲೀಸರು(Karwar Town Police) ಜೈಲಿಗೆ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿತರು ಕೂಗಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಿ ಪೊಲೀಸರು ವಾಪಾಸ್ ಬಂದಿದ್ದಾರೆ.
ಡಿಸೆಂಬರ್ ಆರರಂದು ಮಂಗಳೂರಿನ ಮೂಲದ(Mangalore Native) ಮೊಹಮ್ಮದ್ ಅಬ್ದುಲ್ ಫಯಾನ್ ಹಾಗೂ ಕೌಶಿಕ್ ನಿಹಾಲ್ ಎಂಬುವವರು ಗಲಾಟೆ ಮಾಡಿ ಜೈಲರ್ ಕಲ್ಲಪ್ಪ ಗಸ್ತಿ ಹಾಗೂ ಮೂವರು ವಾರ್ಡರ್‌ಗಳ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಅದೇ ತಂಡದ ಇತರ ಆರು ಜನ ಖೈದಿಗಳು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ರೌಡಿಶೀಟರ್‌ಗಳನ್ನು (Rowdysheeters) ಕೆಲ ದಿನಗಳ ಹಿಂದೆ ಮಂಗಳೂರು ಜೈಲಿನಿಂದ ಹೆಚ್ಚುವರಿ ಭದ್ರತಾ ಕ್ರಮವಾಗಿ ಕಾರವಾರ ಜೈಲಿಗೆ ಶಿಫ್ಟ್(Karwar Jail Shifted) ಮಾಡಲಾಗಿತ್ತು. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನು ಓದಿ : ಮಲ್ಪೆಯಲ್ಲಿ ಸಿಕ್ಕಿ ಬಿದ್ದಿದ್ದ ಅಕ್ರಮ ಬಾಂಗ್ಲಾ ವಲಸಿಗರಿಗೆ ಶಿಕ್ಷೆ.
ಗೋವಾದ ನೈಟ್ ಕ್ಲಬ್ ಮಾಲೀಕರು ವಿದೇಶಕ್ಕೆ ಎಸ್ಕೇಪ್. ಮತ್ತೊಂದು ಕ್ಲಬ್ ಉಡೀಸ್ದ ಮಾಡಿದ ಸರ್ಕಾರ.
ಮದ್ಯ ಸಾಗಿಸುತ್ತಿದ್ದ ಆಸಾಮಿ ಬೈಕ್ ಬಿಟ್ಟು ಪರಾರಿ. ಅಬಕಾರಿ ಕಾರ್ಯಾಚರಣೆ
.
