ಮುಂಡಗೋಡ(Mundgod) :  ಪಟ್ಟಣದ ಮನೆಯೊಂದರ  ಬೀಗ ಮುರಿದು ಕಳ್ಳತನ (Theft)ಮಾಡಲು ಕಳ್ಳರು(Theives) ವಿಫಲ ಯತ್ನ ನಡೆಸಿದ ಘಟನೆ ವರದಿಯಾಗಿದೆ.

ಪಟ್ಟಣದ ಅನ್ನಪೂರ್ಣೇಶ್ವರಿ ನಗರದ  ಮಾರುತಿ ಕುರಿಯವರ  ಮನೆಯ ಬೀಗ ಹಾಕಿದ್ದನ್ನು ನೋಡಿದ ಕಳ್ಳರು ತಮ್ಮ ಕಾರನ್ನು ಇಡಗುಂಜಿ ಗಣಪತಿ ದೇವಸ್ಥಾನದ (Idagunji Ganapati Temple) ಹತ್ತಿರ ನಿಲ್ಲಿಸಿದ್ದರು. ಕಾರಿನಿಂದ ಇಳಿದ ಮೂವರು  ಮಾರುತಿ ಕುರಿಯವರ ಮನೆಗೆ ಹಾಕಿದ್ದ ಬೀಗವನ್ನು ಮುರಿದು ಹೊಳಹೊಕ್ಕು ನಗ-ನಾಣ್ಯ   ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಇದೇ ಹೊತ್ತಿನಲ್ಲಿ ಮನೆ ಮಾಲೀಕ ತೆರೆದ ಬಾಗಿಲನ್ನು ಹಾಗೂ ಒಳಗೆ ಕಳ್ಳರು ತಮ್ಮ ಕರಾಮತ್ತು ಮಾಡುತ್ತಿರುವುದನ್ನು  ನೋಡಿ ಚೀರಾಡಿದ್ದಾನೆ ಅಷ್ಟರೋಳಗೆ ಮಾಲಿಕನ ಮಗನು ಸಹ ಆಗಮಿಸಿದ್ದನ್ನು ನೋಡಿ ತಮಗೆ ಉಳಿಗಾಲವಿಲ್ಲಾ ಎಂದು ಬ್ಯಾಗು  ಬಿಟ್ಟು ಕಂಪೌಂಡ್  ಗೋಡೆ ಜಿಗಿದು ಪರಾರಿಯಾಗಿದ್ದಾರೆ.

ತಾವೂ ತಂದಿದ್ದ ಕಾರು ಹತ್ತುತ್ತಿದ್ದಂತೆ ಕಾರು ಅತಿವೇಗನೇ ಕಾರು ಚಲಾಯಿಸಿಕೊಂಡು ಬಂಕಾಪುರ ಮಾರ್ಗವಾಗಿ (Bankapura Route) ಹೋಗುತ್ತಿರುವುದನ್ನು ಕಂಡು ಅಗ್ನಿಶಾಮಕದಳದ ಅಭಿಷೇಕ ಕುರುವಿನಕೊಪ್ಪ ತಮ್ಮ ದ್ವಿಚಕ್ರವಾಹನದಿಂದ ಬೆನ್ನು ಹತ್ತಿದ್ದಾರೆ. ಶಿವಾಜಿ ಸರ್ಕಲ್(Shivaji Circle) ಹತ್ತಿರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕಾರನ್ನು ಚೇಸ್ ಮಾಡಲು  ಬೆನ್ನು ಹತ್ತಿರುವುದನ್ನು ಕಂಡು ಕಳ್ಳರು ತಮ್ಮ ವಾಹನವನ್ನು ವೇಗದ ಗತಿ ಏರಿಸಿ ವಾಹನವನ್ನು ಓಡಿಸಿದ್ದಾರೆ.

ಸಿಪಿಐ ರಂಗನಾಥ ನಿಲಮ್ಮನವರ, ಪಿಎಸೈ ಪರಶುರಾಮ ಮಿರ್ಜಗಿ ಹಾಗೂ ಇತರೆ ಸಿಬ್ಬಂದಿಗಳು ವಾಹನವನ್ನು ಚೇಸ್ ಮಾಡಲು ಬೆಂಬಿಡದೆ ಬೆನ್ನು ಹತ್ತಿದ್ದಾರೆ. ಕಾರನ್ನು ಕಳ್ಳರು ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದಿಂದ ಹಾನಗಲ್ ಗೆ ಹೋಗುವ ಹಾದಿಯನ್ನು ಹಿಡಿದಿದ್ದಾರೆ. ಪೊಲೀಸರು ಸಹ ಹಾನಗಲ್ ತನಕ ಹೋಗಿದ್ದಾರೆ. ಆದರೆ ಕಳ್ಳರು ಹಾದಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಕಳ್ಳರ ಚಲನವಲನಗಳು ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದೆ. ಕೆಲವೆ ದಿನಗಳಲ್ಲಿ ಕಳ್ಳರನ್ನು ಬಂಧಿಸುವುದಾಗಿ ಸಿಪಿಐ ರಂಗನಾಥ ನಿಲಮ್ಮನವರ  ಹೇಳಿದ್ದಾರೆ.

ಇದನ್ನು ಓದಿ : ಕ್ರಿಯಾಶೀಲ ಪತ್ರಕರ್ತ ಜಗದೀಶ ನಾಯ್ಕ ನಿಧನ. ಗಣ್ಯರ ಕಂಬನಿ

ಮೀಟರ್ ಬಡ್ಡಿ ಕುಳಗಳಿಗೆ ಶಾಕ್ ನೀಡಿದ ಮುಂಡಗೋಡು ಪೊಲೀಸರು

ಕಾರವಾರ ಶಾಸಕ ಸತೀಶ್ ಸೈಲ್ ಗೆ ಬಾರೀ ಪ್ರಮಾಣದ ಶಿಕ್ಷೆ ವಿಧಿಸಿದ ನ್ಯಾಯಾಲಯ


.