ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಸ್ಪಂದನಾ ಚಾರಿಟೇಬಲ್ ಟ್ರಸ್ಟ್ ಭಟ್ಕಳ ಹಾಗೂ ರಂಜನ್ ಇಂಡೇನ್ ಏಜೆನ್ಸಿ(Ranjan Insane Agency) ಭಟ್ಕಳ ಇವರ ಸಹಯೋಗದಲ್ಲಿ ಜುಲೈ 18ರಿಂದ 20 ರವರೆಗೆ “ಹಲಸು ಮತ್ತು ಹಣ್ಣಿನ ಮೇಳ”(Jackfruit & Fruits Mela) ಜರುಗಲಿದೆ.
ಮಣ್ಕುಳಿಯ ಮಾರುತಿ ನಗರದ ಶ್ರೀ ರಾಘವೇಂದ್ರ ಮಠದ ಸಭಾಭವನದಲ್ಲಿ(Raghavendra Math Hall) ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಗೆ ಮೇಳ ನಡೆಯಲಿದೆ ಎಂದು ಬ್ರಹ್ಮಾವರ ಹಲಸು ಮೇಳದ ಆಯೋಜಕ ಗಣೇಶ ಶೆಟ್ಟಿ ಅವರು ಹೇಳಿದರು.
ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು. “ಬ್ರಹ್ಮಾವರದಲ್ಲಿ ತಿಂಗಳ ಹಿಂದೆ ರೋಟರಿ ಕ್ಲಬ್ ವತಿಯಿಂದ ಹಲಸು ಮೇಳವನ್ನು ಆಯೋಜಿಸಿ ಉತ್ತಮ ರೀತಿಯಲ್ಲಿ ಯಶಸ್ವಿಯಾಗಿವೆ. ಹಲಸಿನ ಹಣ್ಣನ್ನು ಕಡೆಗಣಿಸುವ ಬದಲು ಅದರಿಂದ ತಯಾರಿಸುವ ಉತ್ಪನ್ನಗಳನ್ನು ಜನರಿಗೆ ತಲುಪಿಸವ ಉದ್ದೇಶ ಹೊಂದಿದ್ದೇವೆ. ಬ್ರಹ್ಮಾವರದಲ್ಲಿ ನಡೆದ ಹಲಸು ಮೇಳದಲ್ಲಿ ಅಂದಾಜು 140 ಸ್ಟಾಲ್ ಅವಕಾಶ ನೀಡಲಾಗಿದ್ದು ಭಟ್ಕಳದಲ್ಲಿ 60-70 ಸ್ಟಾಲ್ ಗಳು ಇರಲಿವೆ ಎಂದರು.
ಮುಖ್ಯವಾಗಿ ಹಲಸು ಉತ್ಪನ್ನಗಳು ವಿಶಿಷ್ಟ ಪದಾರ್ಥಗಳು ಮೇಳದಲ್ಲಿ ಲಭ್ಯ ಇರಲಿದೆ. ಮೇಳದಲ್ಲಿ ಕೆಂಪು ಹಲಸು, ಚಂದ್ರ ಹಲಸು ವಿವಿಧ ಸ್ಥಳೀಯ ಮಾವಿನ ಹಣ್ಣುಗಳು, ಹಲಸಿನ ಹಣ್ಣಿನ ಖಾದ್ಯಗಳಾದ ಹೋಳಿಗೆ, ಹಲಸಿನ ಜಿಲೇಬಿ, ಹಲಸಿನ ಸಾಟ್, ಹಲಸಿನ ಕಡಬು, ಹಲಸಿನ ಮುಳ್ಕ, ಹಲಸಿನ ಕೇಸರಿ ಬಾತ್, ಹಲಸಿನ ಪಾಯಸ, ಹಲಸಿನ ಹಪ್ಪಳ, ಹಲಸಿನ ಚಿಪ್ಸ್, ಹಲಸಿನ ಗಜ್ಜನ ಉಪ್ಪಿನಕಾಯಿ, ಹಲಸಿನ ಪೋಡಿ, ಹಲಸಿನ ಕಬಾಬ್, ಹಲಸಿನ ಐಸ್ ಕ್ರೀಮ್, ಹಲಸಿನ ಮಿಲ್ಕ್ ಶೇಕ್, ಹಲಸಿನ ಪತ್ರೋಡೆ ಸೇರಿದಂತೆ ಶೇ. 70 ರಷ್ಟು ಹಲಸು ಉತ್ಪನ್ನ ಸಿಗಲಿದೆ ಎಂದರು.
ಇನ್ನುಳಿದಂತೆ ಅಪ್ಪೆಮಿಡಿ ಉಪ್ಪಿನಕಾಯಿ, ಮಾವಿನ ಸಾಟ್, ನರ್ಸರಿ ತರಕಾರಿ ಗಡ್ಡೆ ಮತ್ತು ಬೀಜಗಳು, ಆಯುರ್ವೇದಿಕ್ ಮತ್ತು ಉತ್ಪನ್ನಗಳು, ಖಾದಿ ಬಟ್ಟೆಗಳು, ಸ್ವದೇಶಿ ಬಟ್ಟೆಗಳು, ಹೂವಿನ ಗಿಡ ಮತ್ತು ಸಸ್ಯಗಳು, ಹಲಸಿನ ಗಿಡ, ಗೃಹ ಉತ್ಪನ್ನಗಳು, ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಜರುಗಲಿದೆ ಎಂದರು.
ಈ ಮೇಳದಿಂದ ಸಣ್ಣ ಸಣ್ಣ ವ್ಯಾಪಾರಿಗಳಿಗೆ, ಸ್ಥಳೀಯ ವ್ಯಾಪಾರಿಗಳಿಗೆ ಅನೂಕೂಲವಾಗಬೇಕೆಂಬ ಮತ್ತು ಸ್ವದೇಶಿ ವಸ್ತುಗಳ ಬೇಡಿಕೆ ಹೆಚ್ಚಾಗಬೇಕೆಂಬ ಉದ್ದೇಶ ನಮ್ಮದು. ಮುಂದಿನ ದಿನದಲ್ಲಿ ಕುಮಟಾ ಶಿರಸಿಯಲ್ಲಿಯೂ ಮಾಡಲಿದ್ದೇವೆ. ಸ್ಥಳೀಯ ವಿವಿಧ ಹಣ್ಣು ಬೆಳೆಗಾರರಿಗೂ ಉಚಿತ ಸ್ಟಾಲ್ ನೀಡಲಿದ್ದೇವೆ ಎಂದು ಅವರು ಹೇಳಿದರು.
ರಂಜನ್ ಇಂಡೇನ್ ಏಜೆನ್ಸಿ ಮಾಲಕಿ ಶಿವಾನಿ ಶಾಂತಾರಾಮ ಭಟ್ಕಳ ಮಾತನಾಡಿ, ‘ ಕೃಷಿ ತೋ ನಾಸ್ತಿ ದುರ್ಬಿಕ್ಷಂ ಅನ್ನುವಂತೆ ಕೃಷಿಯನ್ನು ಸರಿಯಾಗಿ ಸಮರ್ಪಕವಾಗಿ ಯೋಜಿಸಿದರೆ ಕೃಷಿ ಲಾಭದಾಯಕ ಉದ್ಯಮ. ನಮ್ಮ ಭಟ್ಕಳದಲ್ಲಿ ಈ ಕಾರ್ಯಕ್ರಮ ಆಯೋಜನೆ ಆಗುತ್ತಿದೆ. ಹಸಿದು ಹಲಸು ಉಂಡು ಮಾವು ಅನ್ನುವಂತೆ ಬಿದ್ದು ಹಾಳಾಗಿ ಹೋಗುತ್ತಿರುವ ಹಲಸನ್ನು ಒಂದು ಬ್ರಾಂಡ್ ಆಗಿ ಮಾಡುವ ಕನಸು ಹೊತ್ತಿರುವ ನಮ್ಮ ಪಕ್ಕದ ಜಿಲ್ಲೆಯ ಬ್ರಹ್ಮಾವರದಲ್ಲಿ ಯಶಸ್ವಿ ಆಗಿರುವ ಅವರ ನೇತೃತ್ವದಲ್ಲಿ ಹಲಸಿನ ಮೇಳ ಮಾಡುತ್ತಿರುವುದು ತುಂಬಾ ಖುಷಿ ಕೊಟ್ಟಿದೆ.
ನಮ್ಮ ಜಿಲ್ಲೆಯಲ್ಲಿ ಶೇ. 95 ರಷ್ಟು ತೋಟಿಗರು, ಕೃಷಿಕರು ಇದ್ದಾರೆ. ತೋಟಗಾರಿಕಾ ಕಾಲೇಜು, ಕೃಷಿ ಸಂಶೋಧನಾ ಕೇಂದ್ರಗಳಿವೆ. ಒಂದೇ ಒಂದು ಜಿಲ್ಲಾಮಟ್ಟದ ಕೃಷಿ ಮೇಳ ನಡೆಯುತ್ತಿಲ್ಲ. ಧಾರವಾಡ, ಧರ್ಮಸ್ಥಳಗಳಲ್ಲಿ ನಡೆಯುವ ರಾಜ್ಯಮಟ್ಟದ ಕೃಷಿ ಮೇಳಗಳಿಂದ ಪ್ರಭಾವಿತವಾಗಿ ದಕ್ಷಿಣಕನ್ನಡ, ಧಾರವಾಡ ಮತ್ತು ಆಸುಪಾಸಿನ ಜಿಲ್ಲೆಗಳು ಕೃಷಿಯಲ್ಲಿ ಅದ್ಭುತ ಪ್ರಗತಿ ಸಾಧಿಸಿವೆ.
ಯುವ ಜನರನ್ನು ಕೃಷಿಯತ್ತ ಸೆಳೆಯುವ ಒಂದು ಪುಟ್ಟ ಪ್ರಯತ್ನ ಇದಾಗಿದ್ದು, ಒಕಲ್ ಪಾರ್ ಲೋಕಲ್ ಎನ್ನುವ ಉದ್ದೇಶವನ್ನು ಇಟ್ಟು ಪ್ರಚಾರಗೊಳಿಸುವ ಪುಟ್ಟ ಪ್ರಯತ್ನ ನಮ್ಮದಾಗಿದೆ ಎಂದರು.
ಸ್ಪಂದನ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿ ‘ಭಟ್ಕಳದಲ್ಲಿ ಇದು ಮೊದಲ ಬಾರಿ ನಡೆಯುತ್ತಿದೆ. 73 ಸ್ಟಾಲ್ ಗಳು ಇರಲಿವೆ. ಇಂಡೋನೇಷ್ಯಾದಿಂದ ಬರುವಂತಹ ಚಂದ್ರ ಹಲಸು ಈ ಮೇಳದ ವಿಶೇಷವಾಗಿದೆ. ಅವಶ್ಯಕ ನರ್ಸರಿ ಗಿಡಗಳು ಸಹ ಸಿಗಲಿದೆ. ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಆಗಲಿದೆ. ಮೌಲ್ಯವರ್ಧಿತ ಉತ್ಪನ್ನಗಳನ್ನಾಗಿ ನಾವುಗಳು ಖರೀದಿಸಬೇಕು. ಹಲಸಿನಿಂದ ವಿವಿಧ ಬಗೆಯ ಉತ್ಪನ್ನಗಳು ಲಭಿಸಲಿದೆ. ರಾಜ್ಯದ ವಿವಿಧ ಪ್ರದೇಶದಿಂದ ಈ ಮೇಳಕ್ಕೆ ರೈತರು ತಮ್ಮ ಬೆಳೆಯನ್ನು ತೆಗೆದುಕೊಂಡು ಬರಲಿದ್ದಾರೆ ಎಂದ ಅವರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಾಂತಾರಾಮ ಭಟ್ಕಳ, ಕೃಷಿಕ ಮುಖಂಡ ಶ್ರೀಧರ ಹೆಬ್ಬಾರ, ಸಮಾಜ ಸೇವಕ ನಜೀರ್ ಖಾಸಿಂಜೀ, ಸ್ಪಂದನ ಚಾರಿಟೇಬಲ್ ಟ್ರಸ್ಟನ ಸದಸ್ಯರಾದ ಭವಾನಿ ಶಂಕರ ನಾಯ್ಕ, ಪಾಂಡು ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಇದನ್ನು ಓದಿ : ಲಂಚ..ಲಂಚ..ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದ ಸದಸ್ಯ, ಅಧಿಕಾರಿ
ಪುಡಿ ರೌಡಿಯಿಂದ ಆಟಾಟೋಪ. ಸೊಕ್ಕು ಮುರಿಯಲು ಕಾಲಿಗೆ ಗುಂಡು .
ಭಟ್ಕಳ ಸ್ಪೋಟಿಸೋ ಬೆದರಿಕೆ ಸಂದೇಶ ಕಳಿಸಿದ್ದ ಮೋಸ್ಟ್ ವಾಂಟೆಡ್ ಆರೋಪಿ ಆರೆಸ್ಟ್.
