ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ(Newdelhi) : ಕರಾವಳಿಯ ಜಾನಪದ(Folk) ಮತ್ತು ದೈವಿಕ ಸಂಪ್ರದಾಯಗಳನ್ನ(Traditional) ಬಿಂಬಿಸುವಂಥ ಪ್ರಾದೇಶಿಕ ಸಿನೇಮಾ ಕಾಂತಾರ-ಚಾಪ್ಟರ್ 1(Kantara) ಈಗ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ. ಪ್ರಾದೇಶಿಕ ಸಿನಿಮಾವೂ (Regional Cinema) ಸಾರ್ವತ್ರಿಕವಾಗಬಹುದು ಎಂಬುದನ್ನ ಚಿತ್ರ ನಟ, ನಿರ್ದೇಶಕ ರಿಷಬ್ ಶೆಟ್ಟಿ(Director Rishab Shetty) ಸಾಕ್ಷಿ ಮಾಡಿದ್ದಾರೆ
ಈ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ(Rishab Shetty), 2022ರಲ್ಲಿ ಬಿಡುಗಡೆಯಾದ ಕಾಂತಾರ(Kantara) ಚಿತ್ರದಂತೆಯೇ ಈ ಚಿತ್ರವೂ ಜನರ ಮನಸಲ್ಲಿ ಬೇರೂರಿದೆ. ಜಾನಪದ(Folk) ಮತ್ತು ಕರಾವಳಿಯ(Karavali) ದೈವಿಕ ಸಂಪ್ರದಾಯಗಳ ಅನ್ವೇಷಣೆ ಸಾಂಸ್ಕೃತಿಕ ವಿದ್ಯಮಾನವಾಗಿ ಮಾರ್ಪಟ್ಟಿದೆ. ಹೊಸ ಕನ್ನಡ ಚಲನಚಿತ್ರಗಳ(Kannada Cinema) ನಿರೂಪಣೆ ಮತ್ತು ಅಭಿನಯಕ್ಕೆ ಪ್ರಶಂಸೆಗಳು ಬರುತ್ತಿವೆ ಎಂದಿದ್ದಾರೆ.
ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ, ಕಾಂತಾರ ಚಾಪ್ಟರ್ 1(Kantara Chapter 1) ಬಿಡುಗಡೆಯಾಗಿ 6 ದಿನಗಳಲ್ಲಿ 427.5 ಕೋಟಿ ರೂ.ಗಳನ್ನು ಗಳಿಸುವ ಮೂಲಕ ಭರ್ಜರಿ ಯಶಸ್ಸು ಕಂಡಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಕಾಂತಾರ ಚಿತ್ರವನ್ನು ಆರಂಭಿಸಿದ ದಿನದಿಂದಲೂ ಪ್ರಕೃತಿ(Nature) ಹಾಗೂ ಮನುಷ್ಯರ(Human) ನಡುವಿನ ಚಲನಶೀಲತೆಯನ್ನು ನಾವು ಅನ್ವೇಷಿಸುತ್ತಲೇ ಇದ್ದೆವು ಎಂದು ಶೆಟ್ಟಿ ಹೇಳಿದ್ದಾರೆ.
ಸಿನೇಮಾದ ಕಥೆಯು ಕರಾವಳಿ ಕರ್ನಾಟಕದ(Karavali Karnataka) ನಮ್ಮ ಜಾನಪದದಲ್ಲಿ ಬೇರೂರಿದೆ. ಬುಡಕಟ್ಟು ಜನಾಂಗಗಳು(Tribal Community), ಜಾನಪದ ಮತ್ತು ದೇವತೆಗಳ ಆರಾಧನೆಯ ಬಗ್ಗೆ ಈ ಚಿತ್ರದಲ್ಲಿ ತೊರಿಸಿದ್ದು, ಅಂದಿನಿಂದ ಪ್ರಾದೇಶಿಕ ಚಿತ್ರವೂ ಸಾರ್ವತ್ರಿಕವಾಗಬಹುದು ಎಂಬ ಆಲೋಚನೆ ನನ್ನಲ್ಲಿತ್ತು. ಇದೀಗ ಅದು ನನಸಾಗಿದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ(Actor, Director Rishab Shetty) ಹೇಳಿದ್ದಾರೆ.
ಇದನ್ನು ಓದಿ : ಭಟ್ಕಳ ಮೂಲದ ಆರ್ ಐ ನಾಪತ್ತೆ. ಕುಮಟಾ ಪುರಸಭೆ ಮುಖ್ಯಾಧಿಕಾರಿ ವಿರುದ್ದ ಸಿಬ್ಬಂದಿಗಳಿಂದ ಆಕ್ರೋಶ.