ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಸ್ಯಾಂಡಲ್ವುಡ್ ನಲ್ಲಿ(Sandalwood) ಬಾರೀ ಸದ್ದು ಮಾಡುತ್ತಿರುವ ನಟ , ನಿರ್ಮಾಪಕ ರಿಷಬ್ ಶೆಟ್ಟಿ(Rishab Shetty) ಅವರ ಬಹು ನಿರೀಕ್ಷಿತ ಚಿತ್ರ ‘ಕಾಂತಾರ 1′(Kantara-1) ರಲ್ಲಿ ಭಟ್ಕಳದ(Bhatkal) ಬೆಡಗಿಯೊಬ್ಬಳು ರಾಣಿಯ ಪಾತ್ರ(Queen Role) ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಅವರೇ ರಮ್ಯಾ ಕೃಷ್ಣ ನಾಯ್ಕ. ಮೂಡಭಟ್ಕಳದ ಕಾಟಿಮನೆ ನಿವಾಸಿ ಕೃಷ್ಣ ಲಚ್ಚಯ್ಯ ನಾಯ್ಕ ಮತ್ತು ಪ್ರಭಾವತಿ ದಂಪತಿಯ ಪುತ್ರಿಯಾಗಿರುವ ರಮ್ಯಾ ಈಗ ಭಟ್ಕಳ ಸಿನಿಪ್ರಿಯರ ಸಂತಸಕ್ಕೆ ಕಾರಣರಾಗಿದ್ದಾಳೆ. ಭಟ್ಕಳದ ಆನಂದಾಶ್ರಮ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿದ ರಮ್ಯಾ ನಂತರ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಪಿಯು ಶಿಕ್ಷಣ ಹಾಗೂ ಬೆಂಗಳೂರಿನ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಬಿ.ಇ. ಪದವಿ ಪಡೆದಿದ್ದಾರೆ.
ಟಾಪ್ ಮಾಡೆಲ್ ಹಂಟ್‌ನಲ್ಲಿ ದ್ವಿತೀಯ ಸ್ಥಾನ: 2016 ರಲ್ಲಿ ಬೆಂಗಳೂರಿನಲ್ಲಿ ನಡೆದ ‘ಟಾಪ್ ಮಾಡಲ್ ಹಂಟ್’ ಸ್ಪರ್ಧೆಯಲ್ಲಿ ಖ್ಯಾತ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಅವರೊಂದಿಗೆ ರಮ್ಯಾ ನಾಯ್ಕ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದಿದ್ದರು. ನಂತರ ‘ಮಿಸ್ ಇಂಡಿಯಾ'(Miss India) ಸ್ಪರ್ಧೆಯ ಫೈನಲ್ ಲಿಸ್ಟ್ ವರೆಗೂ ಅರ್ಹತೆ ಪಡೆದಿರುವುದು ಗಮನಾರ್ಹವಾಗಿದೆ.
ಚಲನಚಿತ್ರ ಮತ್ತು ಜಾಹೀರಾತುಗಳಲ್ಲಿ ಅವಕಾಶ: ರಮ್ಯಾ ನಾಯ್ಕ, ಕನ್ನಡದ ‘ಧರಣಿ ಮಂಡಲ ಮಧ್ಯದೊಳಗೆ’, ‘ನೋಡಿದವರು ಏನೆಂತಾರೆ’, ‘ಲಾಸ್ಟ್ ಆರ್ಡರ್’ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ದೇಶನದ ‘ದ ಬೆಲ್’ ಕಿರುಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ತಮಿಳಿನ ‘ನಿರಮ್ ಮಾರುಮ್ ಉಳಗಿಲ್’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಟ್ಯಾಲಿ, ಎ.ವಿ.ಟಿ ಚಹಾ, ಅಮುಲ್ ಇಂಡಿಯಾ, ಹಿಮಾಲಯ, ಪೀಟರ್ ಇಂಗ್ಲೆಂಡ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಜಾಹೀರಾತುಗಳಲ್ಲೂ ಕಾಣಿಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಬಾಲ್ಯದಿಂದಲೇ ಕನ್ನಡ ಚಿತ್ರರಂಗದ ಬಗ್ಗೆ ಆಸಕ್ತಿ ಹೊಂದಿದ್ದ ರಮ್ಯಾ ಅವರು, ಹೊಂಬಾಳೆ ಫಿಲ್ಮ್ಸ್ ನಡೆಸಿದ ಸ್ಕ್ರೀನ್ ಟೆಸ್ಟ್‌ನಲ್ಲಿ ಉತ್ತೀರ್ಣರಾಗಿ ‘ಕಾಂತಾರ-1’ (Kantara) ಚಿತ್ರದಲ್ಲಿ ಯುವರಾಜನ ರಾಣಿ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚುವ ಅವಕಾಶ ಗಿಟ್ಟಿಸಿದ್ದಾರೆ. ಅವರ ಈ ಸಾಧನೆಗೆ ಭಟ್ಕಳ(Bhatkal) ಮಾತ್ರವಲ್ಲದೇ ಉತ್ತರಕನ್ನಡ(Uttarakannada) ಜಿಲ್ಲೆಯ ಸಿನಿಪ್ರಿಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನು ಓದಿ : ವಡ್ಡಿ ಘಾಟ್ ತಿರುವಿನಲ್ಲಿ ಸರ್ಕಾರಿ ಬಸ್ ಪಲ್ಟಿ. 49 ಪ್ರಯಾಣಿಕರು ಬಚಾವ್.
ಸರ್ಕಾರಿ ನೌಕರರಿಗೆ ಇನ್ನೆರಡು ತಿಂಗಳಲ್ಲಿ ಬಂಪರ್ ಯೋಜನೆ : ಸಿ ಷಡಕ್ಷರಿ.