ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(Social and Education Census) ನಡೆಯುತ್ತಿದೆ. ಆದರೆ ಗೋವಾ ರಾಜ್ಯದಲ್ಲಿಯೂ(Goa Syate) ಸಹ ನಮ್ಮ ರಾಜ್ಯದ ಕುಟುಂಬಗಳ ಸಮೀಕ್ಷೆ ನಡೆದಿದೆ ಅಂದ್ರೆ ನೀವು ನಂಬಲೇಬೇಕು.
ಹಲವಾರು ವರ್ಷಗಳ ಅಸಮಧಾನದ ನಡುವೆ ಕಾರವಾರ ತಾಲೂಕಿನ ಕುಗ್ರಾಮ ಕಮ್ಮಾರಗಾಂವ ನ(Kammaragaum) ನಾಗರಿಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಅಂತೂ ಅಧಿಕಾರಿಗಳು ಆ ಗ್ರಾಮದ 24 ಕುಟುಂಬಗಳ ಸಮೀಕ್ಷೆಯನ್ನು ಸೌಥ್ ಗೋವಾದ ಸಾಂಘೆಮ್(Goa Sanghem) ತಾಲೂಕಿನ ನೇತ್ರೋಲಿಂ ಗ್ರಾಮದಲ್ಲಿ(Netrolium) ಯಶಸ್ವಿಯಾಗಿ ಮಾಡಿದರು.
ಜಿಲ್ಲಾ ಕೇಂದ್ರದಿಂದ ಕಮ್ನಾರಗಾಂವ್ ಕುಗ್ರಾಮ 70 ಕಿಲೋ ಮೀಟರ್ ದಟ್ಟಾರಣ್ಯವಾಗಿರುವುದರಿಂದ ಗ್ರಾಮದಲ್ಲಿ ನೆಟ್ ವರ್ಕ್ ಇಲ್ಲ. ವಿದ್ಯುತ್ ಪೂರೈಕೆ ಕೂಡ ಸಮರ್ಪಕವಾಗಿಲ್ಲ. ಅವರ ವ್ಯಾಪ್ತಿಗೆ ಬರುವ ಗೋಟೆಗಾಳಿ ಗ್ರಾಮ ಪಂಚಾಯಿತಿ(Gotegali Village Panchayat) ಕೇಂದ್ರವಾದ ಸುಮಾರು 18 ಕಿ.ಮೀ ದೂರವಿದೆ. ಗ್ರಾಮಕ್ಕೆ ರಸ್ತೆಯಿಲ್ಲ. ಬಸ್ ವ್ಯವಸ್ಥೆಯಂತೂ ಇಲ್ಲವೆ ಇಲ್ಲ. ಗ್ರಾಮ ತಲುಪಬೇಕೆಂದರೆ ಗೋವಾ ರಾಜ್ಯದ ಮೂಲಕ ಪ್ರಯಾಣಿಸಬೇಕು. ಗ್ರಾಮದ ಕುಟುಂಬಗಳು ರೇಶನ್ ತರಬೇಕೆಂದರೆ ಕಷ್ಟ ಪಡಬೇಕು. ತಿಂಗಳ ಪಡಿತರದಿಂದ ವಂಚಿಸಿಕೊಂಡದ್ದು ಇದೆ.
ಸರ್ಕಾರದ ಮುಂದೆ ತಮ್ಮ ಸಮಸ್ಯೆಗಳ ಬಗ್ಗೆ ಹಲವು ಬಾರೀ ಹೇಳಿಕೊಂಡಿದ್ದಾರೆ. ಆದರೆ ಪರಿಹಾರ ಮಾತ್ರ ಶೂನ್ಯ. ಸರ್ಕಾರದ ವಿರುದ್ದ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ವಿರುದ್ಧ ಗ್ರಾಮದ ಜನರು ಶಪಿಸುತ್ತಲೇ ಸಮೀಕ್ಷೆಯಲ್ಲಿ ಪಾಲ್ಗೊಂಡರು.
ಗೋವಾ ರಾಜ್ಯದ ನೇತ್ರೊಲಿಂನ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸಮೀಕ್ಷೆಯ ಶಿಬಿರ ಆಯೋಜಿಸಲಾಗಿತ್ತು. ಸಮೀಕ್ಷಾ ಶಿಬಿರದಲ್ಲಿ ಕಾರವಾರ ತಹಸೀಲ್ದಾರ ನಿಶ್ಚಲ ನರೋನಾ ಸೇರಿದಂತೆ ಕಂದಾಯ ಇಲಾಖೆ, ಆರ್ಡಿಪಿಆರ್, ಸಿಡಿಪಿಓ ಸಿಬ್ಬಂದಿಗಳು ಸಮೀಕ್ಷೆ ನಡೆಸಿದರು.
ಗ್ರಾಮದ ಜನರ ಬೇಡಿಕೆಗಳು : ಕಮ್ಮಾರಗಾಂವ ಗ್ರಾಮಕ್ಕೆ ಸಮರ್ಪಕ ರಸ್ತೆ ಮಾಡಿಕೊಡಿ.
ವಿದ್ಯುತ್ ಪೂರೈಕೆಯನ್ನ ಕಲ್ಪಿಸಿ.
ಸರ್ಕಾರದ ಪಡಿತರ ವ್ಯವಸ್ಥೆಯನ್ನು ಗ್ರಾಮದಲ್ಲಿ ಮಾಡಿಸಿಕೊಡಿ. ಇಲ್ಲದಿದ್ದಲ್ಲಿ ಗೋವಾದ ನೇತ್ರೋಲಿಂ ಗ್ರಾಮದಲ್ಲಿ ತಿಂಗಳಿಗೆ ಒಮ್ಮೆಯಾದರೂ ಬಂದು ನೀಡುವ ವ್ಯವಸ್ಥೆ ಮಾಡಿ.
ಇಲ್ಲದಿದ್ದಲ್ಲಿ ನಮ್ಮೂರಿಗೆ ಯಾರು ಬರಬೇಡಿ. ನಾವು ಗೋವಾವನ್ನ ಕಂಡುಕೊಳ್ಳುತ್ತೇವೆ ಎಂದು ಗ್ರಾಮಸ್ಥರು ಅಸಮಧಾನ ತೋಡಿಕೊಂಡಿದ್ದಾರೆ.
ಇದನ್ನು ಓದಿ : ಭಾರತದ ರೋಚಕ ಗೆಲುವು. 9ನೇ ಬಾರಿಯೂ ಏಷ್ಯಾ ಕಪ್ ಮಡಿಲಿಗೆ ಹಾಕಿಕೊಂಡ ಟೀಮ್ ಇಂಡಿಯಾ.