ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಂಕೋಲಾ (Ankola): ಬಹುಕೋಟಿ ವೆಚ್ಚದ ಗ್ರೀನ್ ಫಿಲ್ಡ್ ವಾಣಿಜ್ಯ ಬಂದರು(Green Field Commercial Port) ಸರ್ವೆ ವಿರೋಧಿಸಿ ಬುಧವಾರ ಉತ್ತರಕನ್ನಡದ ಅಂಕೋಲಾ ತಾಲೂಕಿನ ಬಾವಿಕೇರಿ ಅರಬ್ಬೀ ಸಮುದ್ರದಲ್ಲಿ ಮೀನುಗಾರರು ವಿನೂತನ ರೀತಿಯಲ್ಲಿ ಪ್ರತಿಭಟನೆ (Fishermans Protest)ನಡೆಸಿ ಗಮನ ಸೆಳೆದಿದ್ದಾರೆ.
ಯೋಜನೆಯೊಂದರ ವಿರುದ್ಧ ಸಮುದ್ರದಲ್ಲಿ ನಡೆದ ಪ್ರತಿಭಟನೆ ರಾಜ್ಯದಲ್ಲಿ ಮೊದಲಾಗಿದೆ. ಕೇಣಿಯ ಕಡಲಲ್ಲಿ ಜೆ ಎಸ್ ಡಬ್ಲೂ(JSW) ಕಂಪನಿ ವಾಣಿಜ್ಯ ಬಂದರು ನಿರ್ಮಿಸಲು ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಸರ್ವೇ ಮಾಡುತ್ತಿದೆ. ಇದು ಹೆಚ್ಚಾಗಿ ಕಡಲಮಕ್ಕಳನ್ನ ಹೋರಾಟಕ್ಕೆ ಇಳಿಯುವಂತೆ ಮಾಡಿಸಿದೆ
ಬುಧವಾರ ಬೆಳಿಗ್ಗೆ ಕಡಲತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಮಾನವ ಸರಪಳಿ(Human Chain) ರಚಿಸಿ ಹಣೆಗೆ ಕಪ್ಪು ಪಟ್ಟಿ ಧರಿಸಿ ಯೋಜನೆಯನ್ನ ವಿರೋಧಿಸಿದರು. ಅರಬ್ಬೀ ಸಮುದ್ರದಲ್ಲಿಯೂ ಸಹ ಕಾರವಾರ ತಾಲೂಕಿನ ಮುದಗಾ(Mudaga), ಬೇಲೇಕೇರಿ (Belekeri), ಕೇಣಿ(Keni), ಬೆಳಂಬಾರ (Belambara) ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ನೂರಾರು ಸಂಖ್ಯೆಯ ಯಾಂತ್ರಿಕ ದೋಣಿಗಳ ಮೀನುಗಾರರು ಸರ್ವೇ ನಡೆಯುವ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ತಮ್ಮತಮ್ಮ ದೋಣಿಗಳನ್ನ ತಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬೋಟ್ ಒಂದು ಗಾಳಿಯ ಅನುಸಾರ ಕೊಂಚ ಹೊರ ಹೋಗಿದ್ದಕ್ಕೆ ಪೊಲೀಸರು ದಾಖಲೆ ಪಾತ್ರಗಳನ್ನ ವಶಕ್ಕೆ ಪಡೆದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಮುಖಂಡರ ಮಧ್ಯಸ್ಥಿಕೆ ಯಿಂದ ಗೊಂದಲ ಬಗೆಹರಿಯಿತು.
ಜೆಎಸ್ ಡಬ್ಲು ಕಂಪನಿಯಿಂದ ಕೇಣಿ ಕಡಲತೀರದಿಂದ ಸುಮಾರು ಮೂರ್ನಾಲ್ಕು ಕಿಲೋಮೀಟರ್ ದೂರದವರೆಗೆ ಬೃಹತ್ ಜಟ್ಟಿ ನಿರ್ಮಾಣವಾಗಲಿದೆ. ಹೀಗಾಗಿ ಮೀನುಗಾರಿಕೆಗೆ ತೊಂದರೆಯಾಗಲಿದೆ ಎಂಬುದು ಮೀನುಗಾರರ ಆತಂಕವಾಗಿದೆ. ಮೀನುಗಾರಿಕೆಯ ಯೋಗ್ಯ ತಾಣ ಯೋಜನೆ ಪಾಲಾದರೆ ನಮ್ಮ ಮುಂದಿನ ಪೀಳಿಗೆಗೆ ಏನು ನೀಡುವುದು ಎಂಬುದು ಪ್ರತಿಭಟನಾಕಾರರ ಪ್ರಶ್ನೆಯಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇಡೀ ಅಂಕೋಲಾವನ್ನು ಯೋಜನೆಗೆ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಯೋಜನೆ ಬೇಡ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಸಂಬಂಧಿಸಿ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ.
ವಿರೋಧದ ನಡುವೆಯೂ ಸರ್ವೆ ಕಾರ್ಯ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆ ಯಾವ ಮಟ್ಟ ತಲುಪುವುದು ಎಂಬುದು ಹೇಳಲು ಅಸಾಧ್ಯವಾಗಿದೆ.
ಇದನ್ನು ಓದಿ : ಹೊನ್ನಾವರ ಗೋ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ಆರೆಸ್ಟ್.
ಮದುವೆಯ ಮೊದಲ ರಾತ್ರಿ ವಧು ವರರ ಸಾವು.
ನಾಟಕದಲ್ಲಿ ನಡೀತು ರಿಯಲ್ ಘಟನೆ. ಮಗನ ಬಡವನ ಪಾತ್ರಕ್ಕೆ ವೇದಿಕೆಯಲ್ಲಿಯೇ ಗೋಳೋ ಎಂದ ತಂದೆ.