ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ಅಕ್ಟೋಬರ 2 ರಿಂದ 5ರವರೆಗೆ  ಕಾರವಾರದಲ್ಲಿ ಕರ್ನಾಟಕ ಪ್ರಾಂತೀಯ ಮಟ್ಟದ “ಯುವ ಜನೋತ್ಸವ” ಕಾರ್ಯಕ್ರಮ ಜರುಗಲಿದೆ.

ಗುರುವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿದ  ಕಾರವಾರ ಧರ್ಮಪ್ರಾಂತ್ಯದ ಪ್ರಮುಖರು, ಕಾರ್ಯಕ್ರಮದ ವಿವರ ನೀಡಿದರು.  ನಗರದ ಸೈಂಟ್ ಜೋಸೆಫ್ ಶಾಲಾ ಮೈದಾನದಲ್ಲಿ ಕರ್ನಾಟಕದಲ್ಲಿರುವ ಎಲ್ಲಾ ಕೆಥೊಲಿಕ್ ಧರ್ಮಪ್ರಾಂತ್ಯಗಳಿಂದ ಸಮಾರು 1200 ರಷ್ಟು ಯುವಜನರು ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಬೆಂಗಳೂರು, ಮಂಡ್ಯ, ಭದ್ರಾವತಿ, ಶಿವಮೊಗ್ಗ, ಉಡುಪಿ, ಮಂಗಳೂರು, ಪುತ್ತೂರು, ಚಿಕ್ಕಮಂಗಳೂರು, ಬೆಳಗಾವಿ, ಬಳ್ಳಾರಿ ಗುಲ್ಬರ್ಗಾ ಮತ್ತು ಕಾರವಾರ ಧರ್ಮಪ್ರಾಂತ್ಯದ ಯುವಜನರು ಈ ಮಹೋತ್ಸವದಲ್ಲಿ “ಭರವಸೆಯೊಂದಿಗೆ ಯುವಜನರ ನಡೆ” ಎಂಬ ಧ್ಯೇಯವಾಕ್ಯದಡಿಯಲ್ಲಿ ಒಂದಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.

ಅಕ್ಟೋಬರ 2 ರಂದು ಬೆಳಿಗ್ಗೆ 9.30 ರಿಂದ ನೋಂದಣಿ ಕಾರ್ಯಕ್ರಮ ಆರಂಭವಾಗಲಿದೆ. ಮಧ್ಯಾಹ್ನ 3.30 ಘಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ದುಮಿಂಗ್ ಡಯಾಸ್ ರವರ ನೇತ್ರತ್ವದಲ್ಲಿ ಹಾಗೂ ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಡಾ.ಹೆನ್ರಿ ಡಿಸೋಜಾ ರವರ ಸಹಭಾಗಿತ್ವದಲ್ಲಿ ಬಲಿಪೂಜೆಯು ನಡೆಯಲಿದೆ ಎಂದರು.

ಪ್ರತಿ ದಿನ ಬೆಳಿಗ್ಗೆ 7 ಘಂಟೆಯಿಂದ ರಾತ್ರಿ 10 ಘಂಟೆಯವರೆಗೆ ವಿವಿಧ ಆಧ್ಯಾತ್ಮಿಕ, ನಾಯಕತ್ವ ಮತ್ತು ಸಾಮಾಜಿಕ ವಿಷಯಗಳ ಮೇಲೆ ಚಿಂತನೆಗಳು, ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಖ್ಯಾತ ಚಿಂತಕರು ಮತ್ತು ಬೋಧಕರಿಂದ ಸಂವಾದ ಕಾರ್ಯಕ್ರಮಗಳು, ಸಮಾಜ ಸೇವೆ ಮತ್ತು ಸ್ನೇಹ ಸಾಮರಸ್ಯದ ಅವಕಾಶಗಳು ಎಂಬಿತ್ಯಾದಿ ವಿಷಯಗಳ ಮೇಲೆ ಚರ್ಚೆಗಳು ಹಾಗೂ ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರದ ಕುರಿತು ಸಮಾಲೋಚನೆಗಳು ನಡೆಯಲಿವೆ‌.

ಕಾರ್ಯಕ್ರಮದಲ್ಲಿ ಪಾಲ್ಗೊಳುವ ಎಲ್ಲಾ ಯುವಜನರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಸೈಂಟ್ ಜೋಸೆಫ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಮಾಡಲಾಗುತ್ತದೆ. ಅದರಂತೆಯೇ ಪಾಲ್ಗೊಳ್ಳುವ ಎಲ್ಲಾ ಗುರುಗಳು ಮತ್ತು ಕನ್ಯಾಸ್ತ್ರೀಯರಿಗೆ ಶಿರವಾಡದ ಬಿಶಪ್ ಹೌಸ್ ಮತ್ತು ಹೋಟೆಲ್ ಈಡನ್ ದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.

ಸಮಾರೋಪ ಸಮಾರಂಭವು ಅಕ್ಟೋಬರ್ 5 ರಂದು ಶಾಂತಿ ಯಾತ್ರೆ ಮತ್ತು ಬಲಿಪೂಜೆಯೊಂದಿಗೆ ನಡೆಯಲಿದೆ.  ಸಮಾರೋಪ ಸಮಾರಂಭಕ್ಕೆ ಬೆಂಗಳೂರಿನ ಮಹಾಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಆ/ವಂ/ಡಾ/ ಪೀಟರ್ ಮಜಾದೊ ರವರು ಆಗಮಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳು ಕರ್ನಾಟಕ ಪ್ರಾಂತೀಯ ಯುವ ಆಯೋಗದ ಮುಂದಾಳತ್ವದಲ್ಲಿ ಮತ್ತು ಕಾರವಾರ ಧರ್ಮಪ್ರಾಂತ್ಯ ಧರ್ಮಪ್ರಾಂತ್ಯದ ಯುವ ಆಯೋಗದ ಸಹಭಾಗಿತ್ವದಲ್ಲಿ ನಡೆಯಲಿದೆ.

ಪತ್ರಿಕಾ ಗೋಷ್ಟಿಯಲ್ಲಿ ವಿಗಾರ್ ಜನರಲ್ ಫಾ. ರಿಚರ್ಡ್ ರೊಡ್ರಿಗಿಸ್, ಸೆಂಟ್ ಜೊಸೇಪ್ ಕಾಲೇಜು ಪ್ರಾಚಾರ್ಯ ಫಾ ಸೈನಿ ಪಿಂಟೊ, ಯುವ ನಿರ್ದೇಶಕ ಫಾ ಸಿಲ್ವನ್ ರೊಡ್ರಿಗ್ರಿಸ್, ಸಿ ಆಲ್ಪಾನ್ಸೊ, ಫಾ. ವಿಲ್ಸನ್ ಡಿಸೋಜಾ, ಲಿಯೋ ಲೂಯಿಸ್, ಜೇಮ್ಸ್ ಫರ್ನಾಂಡಿಸ್, ರೊಯ್ಸಟನ್ ಡಾಯಸ್, ಮಹಿಳಾ ಪ್ರತಿನಿಧಿ ಮಾರ್ಥಾ ಲೋಬೋ ಹಾಜರಿದ್ದರು.

ಇದನ್ನು ಓದಿ : ಸಚಿವರ ಆಪ್ತ ಸಹಾಯಕ ಎಂದು ಜಿಲ್ಲಾದಿಕಾರಿಗೆ ವಂಚನೆ. ಕಾರವಾರ ವಿದ್ಯಾರ್ಥಿ ಬಂಧನ

ಸರಸ್ವತಿ ಸಮ್ಮಾನ್, ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ‌ ಎಸ್ ಎಲ್ ಭೈರಪ್ಪ ನಿಧನ.

/ ಕಾನೂರು ಪ್ರವಾಸಕ್ಕೆ ಬಂದ ವಿದ್ಯಾರ್ಥಿ ಕಾಲು ಜಾರಿ ಬಿದ್ದು ಸಾವು.

ಲವ್ ಜಿಹಾದ್ ಗೆ ಖಂಡನೆ. ಯೂಟ್ಯೂಬರ್ ಖ್ವಾಜಾ ಅಲಿಯಾಸ್ ಮುಕಳೆಪ್ಪ ಮತ್ತು ಗಾಯತ್ರಿ ಸ್ಪಷ್ಟನೆ

ಭಟ್ಕಳದಲ್ಲಿ ಗಾಂಜಾ ಸೇವನೆ. ಒಪ್ಪಿಕೊಂಡ ಯುವಕನ ಮೇಲೆ  ಪ್ರಕರಣ.

https://www.instagram.com/reel/DO-de9PgMUH/?igsh=YzljYTk1ODg3Zg==