ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬಿಗ್‌ ಬಾಸ್‌ನಿಂದ(Bigboss) ಹೊರಬಂದ ನಟಿ ಶೋಭಾ ಶೆಟ್ಟಿ (Shobha Shetty) ನಟ ಕಿಚ್ಚ ಸುದೀಪ್‌ಗೆ(Kichha Sudeep) ಸುದೀರ್ಘವಾಗಿ ಪತ್ರ ಬರೆದಿದ್ದಾರೆ. ನಟಿ ಬರೆದಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ (Social Media)ಬಾರೀ ಸದ್ದು ಮಾಡುತ್ತಿದೆ.

ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್(B8gboss) ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ (Health) ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ. ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ, ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ.

ನನ್ನ ಜನರಿಗೆ, ಕಲರ್ಸ್ ಕನ್ನಡ (Colours Kannada) ತಂಡಕ್ಕೆ ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್(Kichha Sudeep) ಸರ್ ನಿಮಗೆ ಧನ್ಯವಾದಗಳು. ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ಪ್ರೀತಿಯ, ಶೋಭಾ ಶೆಟ್ಟಿ(Shobha Shetty) ಎಂದು ಸುದೀರ್ಘ ಪತ್ರ ಬರೆದಿದ್ದಾರೆ.

ನಟಿ ಶೋಭಾ ಶೆಟ್ಟಿ ತೆಲುಗಿನ ಬಿಗ್‌ಬಾಸ್ ಸೀಸನ್ 7ರಲ್ಲಿ(BigBoss Season7) ಸಖತ್ ಸೌಂಡ್ ಮಾಡಿದ ಕೊನೆಯವರೆಗೂ ವೀಕ್ಷಕರ ಪ್ರೀತಿ ಗಳಿಸಿದ್ದರು. ಆದರೆ ಕನ್ನಡದಲ್ಲಿ ಅವರ ಕೊನೆತನಕ ಶೋ ದಲ್ಲಿ ಉಳಿಯಲು ಸಾಧ್ಯವಾಗಿಲ್ಲ.

ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ವೀಕ್ಷಕರು ಸಹ ಶೋಭಾ ಅವರ ನಿರ್ಧಾರಕ್ಕೆ ಕಾಮೆಂಟ್ ಮಾಡುತ್ತಿದ್ದಾರೆ. ಬಹಳಷ್ಟು ಅಭಿಮಾನಿಗಳು ಆರೋಗ್ಯ ನೋಡಿಕೊಳ್ಳಿ ಎಂದಿದ್ದರೆ, ನಿಮ್ಮನ್ನ ಮಿಸ್ ಮಾಡ್ಕೋತಿದ್ದೇವೆ ಎಂದು ಇನ್ನಷ್ಟು ಅಭಿಮಾನಿಗಳು ಹೇಳಿದ್ದಾರೆ.

ಇದನ್ನು ಓದಿ : ಆರು ಎಸೆತಕ್ಕೆ ಆರು ವಿಕೆಟ್

ಪಶ್ಚಿಮ ಘಟ್ಟದಲ್ಲಿ ಭೂಕಂಪನ

ರಾಜ್ಯದ ವಿವಿಧಡೆ ಮಳೆಯ ರುದ್ರನರ್ತನ

ಕಾಂಗ್ರೆಸ್ ಮುಖಂಡರ ಮಾರಾಮಾರಿ

ಬಾಲಕನ ಜೀವ ತೆಗೆದ ಬಲೂನ್