ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳನ್ನು ಟಾರ್ಗೆಟ್ (Government Office Target) ಮಾಡಿ ಹುಸಿ ಬಾಂಬ್ ಬೆದರಿಕೆ(Fake Bomb Threat) ಸಂದೇಶಗಳು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಭಟ್ಕಳ ತಹಶಿಲ್ದಾರ್ ಕಚೇರಿಗೆ(Bhatkal Tahasildar Office) ಬಂದಿದ್ದ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಳಿಕ, ಕೆಲ ಗಂಟೆಗಳ ಹಿಂದೆ ಕಾರವಾರ ತಹಶೀಲ್ದಾರ ಕಚೇರಿಗೂ ಇದೇ ಮಾದರಿಯ ಬೆದರಿಕೆ ಇಮೇಲ್(Threat Email) ಬಂದಿರುವುದು ಬೆಳಕಿಗೆ ಬಂದಿದೆ.
ಭಟ್ಕಳ ಮತ್ತು ಕಾರವಾರ ತಹಶಿಲ್ದಾರ್ ಕಚೇರಿಗಳಿಗೆ(Karwar Tahasildar Office) ಒಂದೇ ರೀತಿಯ ಇಮೇಲ್ ಸಂದೇಶ(Email Message) ಬಂದಿದ್ದು, ಕಚೇರಿ ಸಿಬ್ಬಂದಿಗಳಲ್ಲಿ ಕೆಲಕಾಲ ಗೊಂದಲ ಹಾಗೂ ಭಯದ ವಾತಾವರಣ ನಿರ್ಮಾಣವಾಯಿತು. ಮಾಹಿತಿ ಪಡೆದ ತಕ್ಷಣ ಕಾರವಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಹುಸಿ ಬೆದರಿಕೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ.
ಹುಸಿ ಬಾಂಬ್ ಬೆದರಿಕೆ ಕುರಿತು ಕಾರವಾರ ಪೊಲೀಸ್ ಠಾಣೆಯಲ್ಲಿ(Karwar Police Station) ಪ್ರಕರಣ ದಾಖಲಾಗಿದ್ದು, ಇಮೇಲ್ ಮೂಲಕ ಬೆದರಿಕೆ ಕಳುಹಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕವಾಗಿ ಮಾನಸಿಕ ಅಸ್ವಸ್ಥ ವ್ಯಕ್ತಿಯಿಂದ ಈ ರೀತಿಯ ಇಮೇಲ್ ಕಳುಹಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ , “ಇ ಮೇಲ್ ಸಂದೇಶದ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಬೆದರಿಕೆ ಕಳುಹಿಸಿದವರನ್ನು ಪತ್ತೆಹಚ್ಚಲಾಗುವುದು. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ” ಎಂದು ಭರವಸೆ ನೀಡಿದರು.
ಉತ್ತರಕನ್ನಡ ಜಿಲ್ಲೆಯಲ್ಲಿ ಪದೆ ಪದೆ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ಜುಲೈ 10ರಂದು ಭಟ್ಕಳ ಪೊಲೀಸ್ ಠಾಣೆಗೆ ಹುಸಿ ಬಾಂಬ್ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.
ಇದನ್ನು ಓದಿ : ಭಟ್ಕಳ ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ: ಪೊಲೀಸ್ ಕಟ್ಟೆಚ್ಚರ
ಕಾರವಾರದಲ್ಲಿ ಅಗ್ನಿ ಅವಘಢ. ಆಟೋರಿಕ್ಷಾ ಸ್ಪೋಟ. ಕಾರುಗಳು ಭಸ್ಮ
ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಒಂಟಿಸಲಗ. ಅರ್ಧಗಂಟೆ ಸಂಚಾರ ಸ್ಥಗಿತ
ಜಿಲ್ಲಾ ಕಾರಾಗೃಹದಲ್ಲಿ ದಿಡೀರ್ ತಪಾಸಣೆ. ಕೈದಿಗಳ ಬಳಿ ಮತ್ತೆ ಮೊಬೈಲ್ ಪತ್ತೆ.
