ಅಂಕೋಲಾ(ANKOLA) : ಆಕಸ್ಮಿಕ ಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ಘಟನೆ ತಾಲೂಕಿನ ಶಿರಕುಳಿ ಗ್ರಾಮದಲ್ಲಿ ಸಂಭವಿಸಿದೆ.

ನಾಗರಾಜ್ ನಾಯ್ಕ ಎಂಬುವವರ ಮನೆಯಾಗಿದ್ದು ಇಂದು ಸಂಜೆ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪರಿಣಾಮವಾಗಿ ಮನೆ ಬಳಕೆಯ ವಸ್ತುಗಳು ಸುಟ್ಟು ಕರಕಲಾಗಿವೆ. ಮನೆಯಲ್ಲಿ  ಈ ಸಂದರ್ಭದಲ್ಲಿ ಅಜ್ಜಿಯೊಬ್ಬರಿದ್ದರು. ಅದೃಷ್ಟವಶಾತ್ ಅನಾಹುತದಿಂದ ಪಾರಾಗಿದ್ದಾರೆ.

ಘಟನೆಯಲ್ಲಿ ಸಾವಿರಾರು ವಸ್ತುಗಳು ನಾಶವಾಗಿದೆ. ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ  ಜಯಂತ್ ನಾಯ್ಕ, ಮಾರ್ಗದರ್ಶನದಲ್ಲಿ  ರಾಜೇಶ್ ನಾಯಕ್, ಚಿರಂಜೀವಿ ಆರ್,  ಗಣೇಶ್ ನಾಯ್ಕ್,  ರವಿರಾಜ್ ಭೂತೆ,  ಹರ್ಷ ನಾಯಕ್,  ಅಮಿತ್ ನಾಯ್ಕ ಬೆಂಕಿ ನಂದಿಸಲು ಸಹಕರಿಸಿದ್ದರು.