ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಜಿಲ್ಲೆಯ ಸಹಕಾರಿಗಳು, ರೈತರು(Farmers), ಮೀನುಗಾರರು(Fisherman’s), ಮಾರ್ಕೆಟಿಂಗ್(Marketing), ಗ್ರಾಹಕರ ಸಂಸ್ಕರಣ ಮತ್ತು ಸಹಕಾರ ಸಂಸ್ಕರಣ, ಔದ್ಯೋಗಿಕ, ಸೌಹಾರ್ದ ಮತ್ತು ಅರ್ಬನ್(Urban), ಹಾಲು ಒಕ್ಕೂಟ ಹೀಗೆ ನಾನಾ ವಲಯಗಳ ಜನರನ್ನ ತುದಿಗಾಲಲ್ಲಿ ನಿಲ್ಲಿಸಿದ ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಮದ್ಯವರ್ತಿ ಬ್ಯಾಂಕ್ ಕೆಡಿಸಿಸಿ ಚುನಾವಣೆಯಲ್ಲಿ(KDCC Election) ಮತದಾನ ಭರದಿಂದ ಸಾಗಿದೆ.
ಅಧ್ಯಕ್ಷ ಸ್ಥಾನದ ಮೇಲೆ ಮತ್ತೆ ಕಣ್ಣಿಟ್ಟಿರುವ ಶಾಸಕ ಶಿವರಾಮ ಹೆಬ್ಬಾರ್(Shivaram Hebbar) ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ(Mankal Vaidya) ಬಣಗಳ ನಡುವೆ ಬಾರೀ ಪೈಪೋಟಿ ನಡೆದಿದೆ. ಈ ಬಾರೀಯ ಚುನಾವಣೆಯಲ್ಲಿ ಮತದಾನಕ್ಕೆ ಸಾವಿರ..ಸಾವಿರ ಲೆಕ್ಕಕ್ಕಿಲ್ಲ. ಲಕ್ಷ ಲಕ್ಷ ಹಣದ ವ್ಯವಹಾರವೇ ನಡೆದು ಹೋಗಿರುವ ಸತ್ಯ ಮತದಾರರಿಂದಲೇ ಹೊರ ಬಿದ್ದಿದೆ.
ಓರ್ವರಿಗೆ ತಮ್ಮ ರಾಜಕೀಯದ ಅಸ್ತಿತ್ವದ ಪ್ರಶ್ನೆ ಎದುರಾಗಿದ್ದರೇ ಇನ್ನೋರ್ವರಿಗೆ ಪ್ರತಿಷ್ಠೆಯ ಉತ್ತರ ನೀಡಬೇಕಾದ ಅನಿವಾರ್ಯತೆ ಈ ಬಾರೀಯ ಕೆಡಿಸಿಸಿ ಬ್ಯಾಂಕ್(KDCC Bank) ಚುನಾವಣೆಯಲ್ಲಿ ಎದುರಾಗಿದೆ.
ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕೆಡಿಸಿಸಿ(Bank KDCC) ಪ್ರಮುಖ ವಿಚಾರದಲ್ಲಿ ಚರ್ಚೆಗೆ ಕಾರಣವಾಗುತ್ತದೆ. ಇಲ್ಲಿ ಹುದ್ದೆಯ ನೇಮಕಾತಿ, ಉದ್ಯಮಿಗಳ ಸಾಲದ ವಿಚಾರದಲ್ಲಿ ಸಾರ್ವಜನಿಕ ವಲಯದಲ್ಲಿ ಬಾರೀ ಚರ್ಚೆಗಳಾಗುತ್ತವೆ. ಇಂಥ ಹುದ್ದೆಗೆ ಇಷ್ಟು ಹಣದ ಬೇಡಿಕೆ ನಿರ್ದೇಶಕರಿಂದಲೇ ಬರುತ್ತದೆ. ತಮ್ಮ ಮಕ್ಕಳೋ ಮೊಮ್ಮಕ್ಕಳು , ನೆಂಟರಿಷ್ಟರು ಕೊನೆಗೆ ಹುದ್ದೆ ಗಿಟ್ಟಿಸಿಕೊಳ್ಳುತ್ತಾರೆ. ಪ್ರತಿಭೆ ಇದ್ದು ಪರೀಕ್ಷೆ, ಸಂದರ್ಶನ ಎದುರಿಸಿದ್ದ ಬಡ ಕುಟುಂಬದ ಅಭ್ಯರ್ಥಿಗೆ ಇತ್ತೀಚಿನ ದಿನಗಳಲ್ಲಿ ಕೆಡಿಸಿಸಿ ಬ್ಯಾಂಕ್ ಕನಸಿನ ಮಾತು.
ಹೌದು ಈ ಬಾರೀ ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವಿಗಾಗಿ ಕೋಟಿ ಕೋಟಿ ಖರ್ಚು ಮಾಡಿದ್ದಾರೆ. ಮತದಾರರಿಗೆ ಲಕ್ಷ ಲಕ್ಷವಂತೆ. ನಿಜವಾಗಿ ಇವರು ಬ್ಯಾಂಕ್ ಉದ್ದಾರ ಮಾಡಲಿಕ್ಕೆ ಇಷ್ಟೆಲ್ಲ ಹಣ ಖರ್ಚು ಮಾಡುತ್ತಾರಾ. ಖಂಡಿತ ಇಲ್ಲ. ಖರ್ಚು ಮಾಡಿದ ಹಣ ತಮ್ಮ ಅವಧಿಯಲ್ಲಿ ಬಡ್ಡಿ ಸಮೇತ ತೆಗೆಯುವ ಲೆಕ್ಕಾಚಾರ ಇದ್ದೆ ಇರುತ್ತದೆ.
ಅಕ್ಟೋಬರ್ 25ರಂದು ಇಂದು ನಾಲ್ಕು ಗಂಟೆಯವರೆಗೆ ಮತದಾನ ನಡೆಯುತ್ತದೆ. ಬಳಿಕ ಮತ ಎಣಿಕೆ ನಡೆಯಲಿದೆ. ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಬಣಗಳಲ್ಲಿ ಸ್ಪರ್ಧೆ. ತಾನೆ ಗೆಲ್ಲುತ್ತೇನೆಂದು ಎರಡು ಬಣಗಳ ಅಪರಿಮಿತ ವಿಶ್ವಾಸ. ಈಗಾಗಲೇ ಸಚಿವ ಮಂಕಾಳ ವೈದ್ಯ ಹಾಗೂ ಅವರ ಬಣದ ವಿ. ಕೆ. ವಿಶಾಲ ಹೊನ್ನಾವರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಹೆಬ್ಬಾರ್ ಬಣದ ಬೀರಣ್ಣ ಬೊಮ್ಮಯ್ಯ ನಾಯಕ್ ಅಂಕೋಲಾದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂ 13 ಸ್ಥಾನಕ್ಕಾಗಿ ಮತದಾನ ನಡೆದು ಕೆಲ ಹೊತ್ತಿನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಕೆಡಿಸಿಸಿ ಬ್ಯಾಂಕ್ ಗದ್ದುಗೆ ಏರುವವರು ಯಾರು ಅನ್ನೋದು ಗೊತ್ತಾಗಲಿದೆ. ಯಾರೇ ಬರಲಿ ಕೆಡಿಸಿಸಿ ಬ್ಯಾಂಕ್(KDCC Bank) ಜನಸಾಮಾನ್ಯರಿಗೆ ಮೊದಲಿಗಿಂತ ಹತ್ತಿರವಾಗಲಿ.
ಇದನ್ನು ಓದಿ : ಬಾರೀ ಮಳೆ ಹಿನ್ನಲೆ. ಕಾರವಾರದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇಂದು ರಜೆ.
ಪಡಿತರ ಅಕ್ಕಿ ಕಳ್ಳ ಮಾರ್ಗದಲ್ಲಿ ಮಾರಾಟ. ಏಳು ಮಂದಿ ಬಂಧನ.
ಅಕ್ಟೋಬರ್ 26 ರಂದು ಮೀನುಗಾರ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ.
ಮುರ್ಡೇಶ್ವರದ ಯಮುನಾ ನಾಯ್ಕ ಪ್ರಕರಣದ ನೈಜ ತನಿಖೆಗೆ ಇನ್ನೇಷ್ಟು ವರ್ಷ ಬೇಕು? ಆರೋಪಿಗಳ ಬಂಧನಕ್ಕೆ ಒತ್ತಾಯ.

