ಇ ಸಮಾಚಾರ ಡಿಜಿಟಲ್ ನ್ಯೂಸ್ (esamacharadigital news) ಬೆಂಗಳೂರು(Bangalore) : ರಾಜ್ಯ ಸರ್ಕಾರಿ ನೌಕರರು ಖಾದಿ ಬಟ್ಟೆಗಳನ್ನು(Khadi Clothes) ಧರಿಸಬೇಕೆಂದು ಸರ್ಕಾರ ಆದೇಶ ಮಾಡಿದೆ.

ಖಾದಿ ಉತ್ಪನ್ನಗಳನ್ನು(Khadi Products) ಹೆಚ್ಚಾಗಿ ಬಳಸಬೇಕೆಂಬ  ಉದ್ದೇಶದಿಂದ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಅನುದಾನಿತ ಸಂಸ್ಥೆಗಳ ಅಧಿಕಾರಿ-ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸುವ ಸಂಬಂಧ ಗುರುವಾರ  ಕರ್ನಾಟಕ ರಾಜ್ಯ ಸರ್ಕಾರದ(Karnataka State Government) ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್(Shalini Rajanish) ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರು(State Government Employees) ಪ್ರತಿ ತಿಂಗಳ ಮೊದಲ ಶನಿವಾರ(First Saturday)  ಖಾದಿ ಬಟ್ಟೆಯನ್ನು(Khadi Clothes) ಕಡ್ಡಾಯವಾಗಿ ಧರಿಸಬೇಕೆಂಬ  ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪುರುಷರು ನೌಕರರು ಖಾದಿ ಬಟ್ಟೆ ಪ್ಯಾಂಟ್, ಶರ್ಟ್, ಓವರ್ ಕೋಟ್ ಧರಿಸಬೇಕು. ಮಹಿಳೆಯರು ರೇಷ್ಮೆ ಸೀರೆ, ಚೂಡಿದಾರ್ ಧರಿಸುವಂತೆ ಸೂಚನೆ ನೀಡಲಾಗಿದೆ.

ಬರುವ ಏಪ್ರಿಲ್ 24ರಂದು ಈ ಯೋಜನೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಖಾದಿ ಬಟ್ಟೆಗಳನ್ನು(Khadi Clothes) ನೌಕರರು ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಳಿಗೆಗಳಲ್ಲಿಯೇ ಖರೀದಿ ಮಾಡಬೇಕು. ಇದಕ್ಕೆ ಖಾದಿ ಗ್ರಾಮೋದ್ಯೋಗ ಮಂಡಳಿ ಈಗ ನೀಡುತ್ತಿರುವ ರಿಯಾಯಿತಿಗಿಂತ ಶೇ.5ರಷ್ಟು ಹೆಚ್ಚು ರಿಯಾಯಿತಿ ನೀಡಬೇಕು ಎಂದು ತೀರ್ಮಾನಿಸಲಾಗಿದೆ.

ಇದನ್ನು ಓದಿ : ಕಾರುಗಳ ನಡುವೆ ಭೀಕರ ಅಪಘಾತ, ಇಬ್ಬರ ದುರ್ಮರಣ. ಇನ್ನಿಬ್ಬರು ಗಂಭೀರ.

ಸಾಧನೆಯ ಹಾದಿಯಲ್ಲಿ ಧನಲಕ್ಷ್ಮೀ ಮೊಗೇರ. ಭರತನಾಟ್ಯ ರಂಗಪ್ರವೇಶಕ್ಕೆ ಕ್ಷಣಗಣನೆ.

ವಿಮಾನ ದುರಂತ. ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವು.