ಕಾರವಾರ(KARWAR) : ಯುರೋಪಿನ ಹಂಗೇರಿಯ(YUROPE HANGERI) ಬುಡಾಪೆಸ್ಟ್ (BUDAFEST)ನಲ್ಲಿ ನಡೆದ ವಾಕೊ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್(WAKO YOUTH WORLD KICK BOXING CHAMPIONSHIP) -2024ರಲ್ಲಿ ಭಟ್ಕಳ ತಾಲೂಕಿನ ಮುಂಡಳ್ಳಿಯ ಪುಟ್ಟ ಪೋರಿ ವರ್ಲ್ಡ್ ಚಾಂಪಿಯನ್ (WORLD CHAMPIONSHIP) ಆಗಿ ಹೊರ ಹೊಮ್ಮಿದ್ದಾಳೆ.

ಭಟ್ಕಳದ ಮುಂಡಳ್ಳಿಯ ಭವಾನಿ ಮತ್ತು ವಾಸು ಮೊಗೇರರವರ ಸುಪುತ್ರಿ ಕುಮಾರಿ ಧನ್ವಿತಾ ವಾಸು ಮೊಗೇರ (DHANVITA VASU MOGER) ವರ್ಲ್ಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಮೊದಲ ಬಾರಿಗೆ ಭಾರತ (INDIA)ದೇಶದ ರಾಷ್ಟ್ರಗೀತೆಯ(NATIONAL ANTHEM) ಜೊತೆಗೆ -18 ಕೆಜಿ ಪಾಯಿಂಟ್ ಫೈಟ್ ವಿಭಾಗದಲ್ಲಿ ಸಾಧನೆ ಮಾಡಿದ ಕೀರ್ತಿ ಗಳಿಸಿದ್ದಾಳೆ. ಅಗಸ್ಟ್ 23 ರಿಂದ ಸಪ್ಟೆಂಬರ್ 1 ರ ತನಕ ಸ್ಪರ್ಧೆ ನಡೆಯುತ್ತಿದ್ದು ಧನ್ವಿತಾ ಅತಿಥೇಯ ಹಂಗೇರಿಯ(HANGERI) ಸ್ಪರ್ದಿಯನ್ನ ಮಣಿಸಿದ್ದಾಳೆ. ಈಕೆ ಭಟ್ಕಳದ ಆನಂದಾಶ್ರಮ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಳೆ.

ಈಕೆಗೆ ನಾಗಶ್ರೀ ಮಾರ್ಷಲ್ ಆರ್ಟ್ಸ್(NAGASHRI MARSHAL ARTS) ಮತ್ತು ಫಿಟ್ನೆಸ್ ನ ಮುಖ್ಯ ತರಬೇತುದಾರರಾದ  ಕುಮಾರಿ ನಾಗಶ್ರೀ ನಾಯ್ಕ, ಭಟ್ಕಳ ತರಬೇತಿಯನ್ನು ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ನಾಯ್ಕ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕುಟುಂಬದವರು, ಭಟ್ಕಳ ತಾಲೂಕಿನ ಜನತೆ ಸಾಧನೆಗೆ ಕೊಂಡಾಡಿದ್ದಾರೆ.

ಇದನ್ನು ಓದಿ : ಆ್ಯಸಿಡ್ ತುಂಬಿದ ಟ್ಯಾಂಕರ್ ಪಲ್ಟಿ

ಬ್ರಹ್ಮಾನಂದ ಶ್ರೀಗಳ ಸೀಮೋಲ್ಲಂಘನ

ಅಳಿವೆಗೆ ಸಿಲುಕಿದ ಯಾಂತ್ರಿಕ ಬೋಟ್