ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ (Sirsi) : ಲೀಸ್ ಮನೆ ಜಾಗದ ವಿಚಾರದಲ್ಲಿ ಲಂಚ ಪಡೆಯುತ್ತಿದ್ದ ಶಿರಸಿ ನಗರಸಭಾ ಸದಸ್ಯ, ಮಾಜಿ ಅಧ್ಯಕ್ಷ ಮತ್ತು ಕಂದಾಯ ಅಧಿಕಾರಿಯನ್ನ ಲೋಕಾಯುಕ್ತ ಪೊಲೀಸರು(Lokayukta Police) ಬಲೆಗೆ ಕೆಡವಿದ್ದಾರೆ.
ಬುಧವಾರ ಶಿರಸಿಯಲ್ಲಿ ದಾಳಿ(Sirsi Raid) ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಇಬ್ಬರನ್ನ ಬಂಧಿಸಿದ್ದಾರೆ. ಬಿಜೆಪಿ ಮುಖಂಡ, ನಗರಸಭೆ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಮತ್ತು ಕಂದಾಯ ಅಧಿಕಾರಿ(Revenue Officer) ಆರ್ ಎಂ ವರ್ಣೆಕರ್ ಬಂಧಿತರಾಗಿದ್ದಾರೆ.
ಜಾಗದ ವಿಷಯಕ್ಕೆ ಸಂಬಂಧಿಸಿ ರಮೇಶ ಹೆಗಡೆ ಎಂಬುವವರಿಂದ ಮೂರು ಲಕ್ಷ ರೂ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿ ಬಂಧಿಸಲಾಗಿದೆ. ಜಾಗದ ವಿಷಯ ಕೋರ್ಟಿನಲ್ಲಿ ಸ್ಟೇ ಇದ್ದಾಗಲೂ ಇವರಿಬ್ಬರು ತಾವು ಸರಿಪಡಿಸಿಕೊಡುತ್ತೇವೆಂದು ನೋಟಿಸ್ ಜಾರಿಗೊಳಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಇಂದು ಹಣ ನೀಡುವ ವೇಳೆ ಲೋಕಾಯುಕ್ತ ಎಸ್ಪಿ ಕುಮಾರಚಂದ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಬಂಧಿತ ನಗರಸಭೆ ಸದಸ್ಯ ಗಣಪತಿ ನಾಯ್ಕ ನಗರಸಭೆಯ ಪೈಪ್ ಕಳ್ಳತನ ಆರೋಪ ಎದುರಿಸುತ್ತಿದ್ದರು. ಇದೀಗ ಲಂಚ ಪ್ರಕರಣದಲ್ಲಿ ಲೋಕಾಯುಕ್ತರಿಂದ ಬಂಧಿತರಾಗಿದ್ದಾರೆ.
ಇದನ್ನು ಓದಿ : ಪುಡಿ ರೌಡಿಯಿಂದ ಆಟಾಟೋಪ. ಸೊಕ್ಕು ಮುರಿಯಲು ಕಾಲಿಗೆ ಗುಂಡು .
ಭಟ್ಕಳ ಸ್ಪೋಟಿಸೋ ಬೆದರಿಕೆ ಸಂದೇಶ ಕಳಿಸಿದ್ದ ಮೋಸ್ಟ್ ವಾಂಟೆಡ್ ಆರೋಪಿ ಆರೆಸ್ಟ್.
	
						
							
			
			
			
			
