ಕಾರವಾರ(KARWAR) :  ತಾಲೂಕಿನ ಶಿರವಾಡ ಬಂಗಾರಪ್ಪ ನಗರದಲ್ಲಿರುವ ಪರಿಶಿಷ್ಟ ಕುಟುಂಬಗಳಿಗೆ(Scheduled Family) ನಿವೇಶನ ನೀಡಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಗಳನ್ನ ಒತ್ತಾಯಿಸಿದೆ.

ಕಳೆದ 30 ವರ್ಷಗಳಿಂದ ಸರ್ವೆ ನಂ 17 ರಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಹಾಗೂ ಇತರ ಜಾತಿಯ ಕುಟುಂಬಗಳು ವಾಸಿಸುತ್ತಿದೆ. ಆದರೆ ಈ ಭೂಮಿಯು ಬೈತಕೋಲ(Baitkol) ನಿರಾಶ್ರಿತರಿಗೆ ನೀಡಿದ ಭೂಮಿಯಾಗಿದ್ದು ಹಾಗೂ ಅರಣ್ಯ(Forest) ಇಲಾಖೆಯ ಭೂಮಿಯಲ್ಲಿ ಅಕ್ರಮವಾಗಿದ್ದು ಇದಿಗ ಅವರುಗಳು ಬಂದು ನಮಗೆ ಮನೆಗಳಿಂದ ಖಾಲಿಮಾಡಿಸುವ ಭೀತಿಯಲ್ಲಿದ್ದೇವೆ. ಕಾರಣ ನಾವು 30 ವರ್ಷಗಳಿಂದ ಇಲ್ಲಿಯ ಚಿಕ್ಕ ಪುಟ್ಟ ಗುಡಿಸಲುಗಳನ್ನು ಕಟ್ಟಿ ವಾಸಿಸುತ್ತಿದ್ದೇವು. ಹೀಗಾಗಿ  ನಮಗೆ ಸರಕಾರದಿಂದ ಪಕ್ಕದ ಕಂದಾಯ ಭೂಮಿಯಲ್ಲಿ(Revenue Land) ನಿವೇಶನವನ್ನು ನೀಡಬೇಕಾಗಿ ವಿನಂತಿಸಿದ್ದಾರೆ.

ಸುಮಾರು 380-400 ಕುಟುಂಬಗಳು ನಿರಾಶ್ರಿತರಾಗಲಿದ್ದೇವೆ ಕಾರಣ ಸರ್ವೆ ನಂ 17/ಅ ರಲ್ಲಿ ಸರಕಾರಿ ಭೂಮಿ (ಸರಕಾರಿ ಪಡ) 49.26.00 ಭೂಮಿ ಇದ್ದು ನಮಗೆ ಭೂಮಿಯಲ್ಲಿ ನಮ್ಮ ಕುಟುಂಬಗಳಿಗೆ 60+40 ಅಡಿ ಭೂಮಿಯಲ್ಲಿ ಶಾಶ್ವತವಾಗಿ ಆಶ್ರಯ ಮನೆಗಳನ್ನು ನಿರ್ಮಿಸಿ ನೀಡಬೇಕಾಗಿ ದಲಿತ ಸಂಘರ್ಷ ಸಮಿತಿ(Dalita Sangharsha Sameeti) ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಉದಯ ಬಶೆಟ್ಟಿ, ಉತ್ತರಕರ್ನಾಟಕ ಉಪಾಧ್ಯಕ್ಷ ಬಿ ಏನ್ ಸೂರ್ಯಪ್ರಕಾಶ್, ತಾಲೂಕು ಅಧ್ಯಕ್ಷ ಯಲ್ಲಪ್ಪ ವಡ್ಡರ, ರಾಮಪ್ಪ ವಡ್ಡರ ಸೇರಿದಂತೆ ಇತರರು ಇದ್ದರು.

ಇದನ್ನು ಓದಿ : ನಕಲಿ ಜಾತಿ ಪ್ರಮಾಣ ಪತ್ರ ತಡೆಯುವಂತೆ ಪ್ರತಿಭಟನೆ

ಇಂದು ಅಥವಾ ನಾಳೆ ಚಂಡಮಾರುತ ಸಾಧ್ಯತೆ

ಶಿರಸಿಯಲ್ಲಿ ಬಸ್ ಇಲ್ಲದೆ ರಾತ್ರಿ ಹೆಣ್ಣುಮಕ್ಕಳಿಗೆ ತೊಂದರೆ

ಭಟ್ಕಳದಲ್ಲಿ ಗೋವು ಕಳ್ಳರ ಅಟ್ಟಹಾಸ