ಇ ಸಮಾಚಾರ ಡಿಜಿಟಲ್ ನ್ಯೂಸ್(esamachara  digital news) ಹಳಿಯಾಳ(Haliyal) : ವಿಚಾರಣಾಧೀನ ಖೈದಿಯ (Prisoner under investigation) ಕೂಲಿ ಹಣಕ್ಕಾಗಿ ಲಂಚ ಕೇಳಿದ ಜೈಲರ್(Jailer) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಳಿಯಾಳದಲ್ಲಿ(Haliyal) ನಡೆದಿದೆ.

ಇಲ್ಲಿನ ತಾಲೂಕು ಉಪ ಕಾರಾಗೃಹದ(Sub jail) ಜೈಲರ್ ಕಲ್ಲಪ್ಪ ಗಸ್ತಿ ಬಲೆಗೆ ಬಿದ್ದ ಅಧಿಕಾರಿ.   ಕೊಲೆ ಆರೋಪಿಯಿಂದ ₹60 ಸಾವಿರ ಲಂಚ ಬೇಡಿಕೆ ಇಟ್ಟ ಪ್ರಕರಣದಲ್ಲಿ ಲೋಕಾಯುಕ್ತರ ಬಲೆಗೆ ಸಿಲುಕಿದ್ದಾರೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಇವರ ವಿರುದ್ಧದ ಆರೋಪ ಇದೀಗ ಗಂಭೀರ ಸ್ವರೂಪ ಪಡೆದಿದೆ.

ಯಡೋಗಾ ಗ್ರಾಮದ ರಾಜಕುಮಾರ ಹುಂದೇಕರ ಎಂಬುವವರು  2022ರಲ್ಲಿ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ವಿಚಾರಣಾಧೀನ ಕೈದಿಯಾಗಿ (Prisoner under investigation) ಸಬ್ ಜೈಲ್‌ನಲ್ಲಿ ಇದ್ದು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಜೈಲಿನಲ್ಲಿ ಕೂಲಿ ಕೆಲಸ ಮಾಡಿ ಗಳಿಸಿದ ಸುಮಾರು 1.40 ಲಕ್ಷ ರೂ. ಹಣವನ್ನು ಪಡೆಯಲು ಮುಂದಾದಾಗ, ಜೈಲರ್ ಕಲ್ಲಪ್ಪ ಗಸ್ತಿ 60 ಸಾವಿರ ರೂ. ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತ ಆರೋಪಿಯು ಒಂದು ತಿಂಗಳ ಹಿಂದೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದ.

ದೂರಿನ ಮೇರೆಗೆ   ಲೋಕಾಯುಕ್ತ ಅಧಿಕಾರಿಗಳು ಸಬ್ ಜೈಲ್ ಮೇಲೆ ದಾಳಿ ನಡೆಸಿದ್ದರು.  ಈ ವೇಳೆ ಅವರ ಮೊಬೈಲ್ ವಶಕ್ಕೆ ಪಡೆದು, ಧ್ವನಿ ಮಾದರಿ ಸೇರಿದಂತೆ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿದರು.

ಹಣ ಸ್ವೀಕರಿಸುವ ವೇಳೆ ಜೈಲರ್ ನೇರವಾಗಿ ಸ್ವೀಕರಿಸಲು ಮುಂದಾಗದೆ ಪದೇಪದೇ ಸ್ಥಳ ಬದಲಾಯಿಸುತ್ತಿದ್ದನೆಂಬ ಮಾಹಿತಿ ಹೊರಬಂದಿದೆ. ಈ ನಡುವೆ ಧಾರವಾಡದ ಮಹಿಳೆಯೋರ್ವರಿಗೆ   10 ಸಾವಿರ ರೂಪಾಯಿಯನ್ನು ಪೋನ್ ಪೇ ಮೂಲಕ ವರ್ಗಾವಣೆ ಮಾಡಲು ಸೂಚಿಸಿದ್ದಾಗಿ ತಿಳಿದುಬಂದಿದ್ದು, ಈ ವ್ಯವಹಾರದ ದಾಖಲೆಗಳು ತನಿಖೆ ವೇಳೆ ಗೊತ್ತಾಗಿದೆ.

ಹಣದ ಬೇಡಿಕೆ ಹಾಗೂ ಡಿಜಿಟಲ್ ವ್ಯವಹಾರಗಳಿಗೆ ಸಂಬಂಧಿಸಿದ ಸಾಕ್ಷಾಧಾರಗಳು ಲಭ್ಯವಾಗಿದ್ದು, ಜೈಲರ್ ಭ್ರಷ್ಟಾಚಾರದಲ್ಲಿ ತೊಡಗಿರುವುದು ದೃಢವಾಗಿದೆ. ಆದಾಗ್ಯೂ, ಇನ್ನಷ್ಟು ದಾಖಲೆ ಸಂಗ್ರಹಕ್ಕಾಗಿ ಎರಡು ತಂಡಗಳನ್ನು ರಚಿಸಿ ತನಿಖೆ ಮುಂದುವರೆಸಲಾಗುತ್ತಿದೆ.

ಇದನ್ನು ಓದಿ : ಸೊಸೈಟಿಯಲ್ಲಿ ₹5 ಕೋಟಿ ಅವ್ಯವಹಾರ. ಬೇಲಿಯೇ ಎದ್ದು ಹೊಲ ಮೇಯ್ದ ಕಥೆ.

ಶಿರಸಿ: ಅಳಿಯನ ಕೊಂದಾತನಿಗೆ ಜೀವಾವಧಿ ಶಿಕ್ಷೆ.

ಹೊನ್ನಾವರದಲ್ಲಿ ಅಪರಿಚಿತ ವಾಹನ ಡಿಕ್ಕಿ: ಕಾಂಗ್ರೆಸ್ ಮುಖಂಡನ ಪುತ್ರ ಸಾವು