ಕಾರವಾರ(Karwar) : ಅಂಕೋಲಾ ತಾಲೂಕಿನ (Ankola Taluku) ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ(Landslide) ನಾಪತ್ತೆಯಾದ ಎರಡು ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ (State Government) ಪರಿಹಾರ ನೀಡಲಾಯಿತು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ(Mankal Vaidya) ಅವರು ಜಗನ್ನಾಥ್ ನಾಯ್ಕ ಮತ್ತು ಲೋಕೇಶ್ ನಾಯ್ಕ ಕುಟುಂಬಕ್ಕೆ ಪರಿಹಾರ ಮಂಜೂರಿ ಪತ್ರ ವಿತರಿಸಿದರು. ತಲಾ ಐದು ಲಕ್ಷ ರೂ ಪರಿಹಾರವನ್ನ ನಾಪತ್ತೆಯಾದವರ ಕುಟುಂಬಕ್ಕೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ ಮಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಉಪಸ್ಥಿತರಿದ್ದರು.
ಜುಲೈ 16ರಂದು ಶಿರೂರು ಗ್ರಾಮದಲ್ಲಿ (Shiruru Village) ಸಂಭವಿಸಿದ ದುರಂತದಲ್ಲಿ ಒಟ್ಟು 11 ಜನ ಮೃತಪಟ್ಟಿದ್ದರು. ಆದರೆ ಶಿರೂರಿನ ಜಗನ್ನಾಥ ನಾಯ್ಕ ಮತ್ತು ಲೋಕೇಶ್ ನಾಯ್ಕ ಮೃತದೇಹ ಇದುವರೆಗೆ ಸಿಕ್ಕಿಲ್ಲ. ಕಾರವಾರ ಶಾಸಕ ಸತೀಶ್ ಸೈಲ್(Mla Satish Sail) ನೇತೃತ್ವದಲ್ಲಿ ಹಲವು ದಿನಗಳ ಕಾರ್ಯಾಚರಣೆ(Operation) ನಡೆಸಲಾಗಿತ್ತಾದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ ಕೇರಳದ ಟ್ರಕ್(Keral Truck) ಚಾಲಕ ಅರ್ಜುನ್ ಅವರ ಮೃತ ದೇಹವನ್ನ ಡ್ರೆಜಿಂಗ್ ಯಂತ್ರಗಳ ಮೂಲಕ ಹೊರ ತೆಗೆಯಲಾಗಿತ್ತು.
ಇದೀಗ ಕಾರ್ಯಾಚರಣೆ ಮತ್ತೆ ನಡೆಯುವ ಲಕ್ಷಣವಿಲ್ಲ. ಆದರೆ ಮೃತ ಕುಟುಂಬದವರು ತಮಗೆ ಮರಣ ದಾಖಲೆ ಪತ್ರ(Death Certificate) ಕಲ್ಪಿಸಿ ಎಂದು ಅಧಿಕಾರಿಗಳಲ್ಲಿ ವಿನಂತಿ ಮಾಡಿದ್ದಾರೆ.
ಇದನ್ನು ಓದಿ : ಭಟ್ಕಳ ಪೊಲೀಸರ ಮಿಂಚಿನ ಕಾರ್ಯಾಚರಣೆ
ಕಾರವಾರದಲ್ಲಿ ರಣಹದ್ದಿನ ಬಗ್ಗೆ ಆತಂಕ