ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ(Udupi) : ಉತ್ತರಕನ್ನಡ ಮೂಲದ(Uttarakannada Native) ಆರ್ಟಿಓ(RTO) ಅಧಿಕಾರಿಗೆ ಸಂಬಂಧಿಸಿದ ಮನೆ ಮತ್ತು ಮಳಿಗೆಯ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ(Lokayukta Raid) ನಡೆಸಿದ್ದಾರೆ.
ಹೊನ್ನಾವರ ತಾಲ್ಲೂಕಿನ ಚಂದಾವರ ಮೂಲದ ಉಡುಪಿಯ ಆರ್ಟಿಓ ಅಧಿಕಾರಿಯಾಗಿರುವ ಲಕ್ಷ್ಮೀ ನಾರಾಯಣ ಪಿ. ನಾಯ್ಕ(ಎಲ್ ಪಿ ನಾಯ್ಕ) (L P Naik) ಎಂಬುವರಿಗೆ ಸೇರಿದ ಮನೆ ಮೇಲೆ ಈ ದಾಳಿ ನಡೆಸಲಾಗಿದೆ.
ಉಡುಪಿಯ ಕಿನ್ನಿಮೂಲ್ಕಿಯಲ್ಲಿರುವ(Udupi Kinnimulki) ಫ್ಲ್ಯಾಟ್ ಹಾಗೂ ಉಡುಪಿಯ ಮಣಿಪಾಲದಲ್ಲಿರುವ ಆರ್ಟಿಓ(Manipal RTO) ಕಚೇರಿ, ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ವೈಭವ್ ಕಾಂಪ್ಲೆಕ್ಸ್(Kumta Vaibhav Complex) ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಲಕ್ಷ್ಮೀನಾರಾಯಣ ಅವರು ಆರ್ಟಿಓ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಲಕ್ಷ್ಮೀನಾರಾಯಣ ಅವರಿಗೆ ಸೇರಿದ ಮನೆ, ಕಚೇರಿ ಮಾತ್ರವಲ್ಲ ಉಡುಪಿಯ ಪಡು ಅಲೆವೂರು ಮತ್ತು ಕುಮಟಾದಲ್ಲಿರುವ ಸಂಬಂಧಿಕರ ಮನೆಗಳ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಲಕ್ಷ್ಮೀ ನಾರಾಯಣ ಅವರ ಆಸ್ತಿ ಮತ್ತು ಆದಾಯದಲ್ಲಿ ಹೊಂದಾಣಿಕೆ ಕಂಡು ಬಾರದ ಹಿನ್ನೆಲೆಯಲ್ಲಿ ದೂರುಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ರಾತ್ರಿಯವರೆಗೂ ಲೋಕಾಯುಕ್ತ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕಳ್ಳ ಮಂಡ್ಯದಲ್ಲಿ ಆರೆಸ್ಟ್.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದಿದ್ದರೆ ರಾಜಕೀಯ ನಿವೃತ್ತಿ: ಶಾಸಕ ಸತೀಶ್ ಸೈಲ್