ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಉತ್ತರಕನ್ನಡ ಜಿಲ್ಲೆಯ ಅಂಕೋಲಾ(Ankola) ತಾಲೂಕಿನ ಹಾರವಾಡದ(Harwad) ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡುಗೆ ಎಣ್ಣೆ(Cooling Oil) ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ(Lorry Turnover).

ಪರಿಣಾಮ ನೂರಾರು ಲೀಟರ್ ಅಡುಗೆ ಎಣ್ಣೆ ರಸ್ತೆ ಪಾಲಾಗಿದೆ.  ಘಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಹುಬ್ಬಳ್ಳಿಯಿಂದ ಗೋವಾದತ್ತ(Hubli to Goa) ಸಾಗುತ್ತಿದ್ದ ಪ್ರಿಯಾ ಆಯಿಲ್ ಕಂಪನಿಯ ಗೂಡ್ಸ್ ಲಾರಿ ರಸ್ತೆ ಬದಿಗೆ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಎಣ್ಣೆ ಡ್ರಮ್‌ಗಳು ರಸ್ತೆಗೆ ಬಿದ್ದಿವೆ.

ಘಟನಾ ಸ್ಥಳಕ್ಕೆ ಅಂಕೋಲಾ ಠಾಣೆಯ ಪೊಲೀಸರು(Ankola Station Police) ತಕ್ಷಣವೇ ಭೇಟಿ ನೀಡಿ, ಸಂಚಾರ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ. ಘಟನೆ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಇದನ್ನು ಓದಿ‌ : ಮಾರ್ಚ್ ಒಳಗೆ ಒಕ್ಕಲೆಬ್ಬಿಸಲು ಸಚಿವರ ಟಾರ್ಗೆಟ್. ಅರಣ್ಯ ಇಲಾಖೆಗೆ ಒತ್ತಡ, ಅರಣ್ಯವಾಸಿಗಳಿಗೆ ಕಿರಿಕಿರಿ : ರವೀಂದ್ರ ನಾಯ್ಕ

ಚಲಿಸುತ್ತಿದ್ದ ವಾಹನದ ಹಿಂಬದಿ ಜಿಗಿದು ದರೋಡೆಗೆ ಯತ್ನ

ಕುಮಟಾದಲ್ಲಿ ಕಳ್ಳತನ ಮಾಡಿದ ಭಟ್ಕಳದ ಆರೋಪಿತ ಪೊಲೀಸರ ಕೈಯಿಂದ ಎಸ್ಕೇಪ್.