ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೊಯಿಡಾ(Joida): ಅತಿಥಿ ಶಿಕ್ಷಕರ(Guest Teacher) ಆಯ್ಕೆಯ ವಿಚಾರದಲ್ಲಿ ಪಾಲಕ ಮತ್ತು ಎಸ್ ಡಿ ಎಂ ಸಿ ಕಮಿಟಿಯ(SDMC Comitee) ತೀರ್ಮಾನವನ್ನು ಗೌರವಿಸದಕ್ಕೆ ಎಸ್.ಡಿ.ಎಂ.ಸಿ. ಸದಸ್ಯರು ತಮ್ಮ ಸದಸ್ಯತ್ವಕ್ಕೆ ಶನಿವಾರ ಲಿಖಿತವಾಗಿ ರಾಜಿನಾಮೆ ನೀಡಿದ್ದಾರೆ.
ಶಾಲಾ ವಿಷಯದಲ್ಲಿ ರಾಜಕೀಯ ಸೇರಿರುವ ಕಾರಣದಿಂದ ಬೇಸತ್ತು ನಂದಿಗದ್ದಾ ಹಿರಿಯ ಪ್ರಾಥಮಿಕ ಶಾಲೆಯ ಸದಸ್ಯರು ರಾಜಿನಾಮೆ(Resign) ನೀಡಲು ಕಾರಣವಾಗಿದೆ.
ಈ ವರ್ಷ ನಂದಿಗದ್ದೆ ಶಾಲೆಯ ಮುಖ್ಯೋಪಾಧ್ಯಾಯರು ನಿವೃತ್ತಿಯನ್ನು ಪಡೆದ ಕಾರಣ ಒಬ್ಬ ಶಿಕ್ಷಕರ ಕೊರತೆ ಆಯಿತು. ಅಲ್ಲದೆ ಇನ್ನೊಬ್ಬ ಶಿಕ್ಷಕಿ ತನ್ನ ವೈಯಕ್ತಿಕ ಕಾರಣದಿಂದ ಆಗಸ್ಟ್ ನಂತರ ರಜೆಯನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ ಅನುಭವಿ ಶಿಕ್ಷಕರು ಇರದೇ ಇರುವಂತಹ ಸಂದರ್ಭದಲ್ಲಿ 50 ರಿಂದ 60 ಮಕ್ಕಳನ್ನು ನಿಭಾಯಿಸುವುದು ಪ್ರಸ್ತುತ ಮುಖ್ಯೋಪಾಧ್ಯಾಯರಿಗೆ ಕಷ್ಟವಾಗುತ್ತದೆ. ಹೀಗಾಗಿ ಒಬ್ಬ ಸ್ಥಳೀಯ ಹಾಗೂ ಒಬ್ಬರು ಅನುಭವಿ ಶಿಕ್ಷಕರನ್ನು ನಾವು ಕೇಳಿದ್ದೆವು. ಇದಕ್ಕೆ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಸ್ಪಂದಿಸಲಿಲ್ಲ, ಶಾಲೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಿಲ್ಲ. ಶಾಲಾ ವಿಷಯದಲ್ಲಿ ರಾಜಕಾರಣದವರು ಮಧ್ಯ ಪ್ರವೇಶಿಸಿ ಅವರ ಅಭಿಪ್ರಾಯವನ್ನು ಶಾಲಾ ಅಭಿವೃದ್ಧಿ ಸಮಿತಿಯ ಮೇಲೆ ಹೇರಿದ್ದಾರೆ. ಹೀಗಾಗಿ ವಿರೋಧಿಸಿ ರಾಜೀನಾಮೆ ನೀಡುತ್ತಿದ್ದೇವೆ ಎಂದು ಸದಸ್ಯರು ತಿಳಿಸಿದ್ದಾರೆ.
ರಾಜಕಾರಣ ಶಾಲೆಯವರೆಗೂ ಮುಟ್ಟಿದ್ದು ವಿಪರ್ಯಾಸ. ಈ ಹಿಂದೆ 2 ವರ್ಷ ನಾವೇ ಪಾಲಕರು ಕೈಯಿಂದ ಖರ್ಚು ಮಾಡಿ ಅತಿಥಿ ಶಿಕ್ಷಕರಿಗೆ ವೇತನವನ್ನು ನೀಡಿದ್ದೇವೆ. ಆಗ ಯಾವ ರಾಜಕಾರಣ ಬಂದಿಲ್ಲವಾಗಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ 9 ಸದಸ್ಯರು ರಾಜೀನಾಮೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಜಮೀನಿಗೆ ಬೇಲಿ ಕಟ್ಟುವ ವೇಳೆ ಕರಡಿಗಳ ದಾಳಿ. ವ್ಯಕ್ತಿ ಗಂಭೀರ
ಅಪಘಾತಕ್ಕೆ ಕಾರಣವಾದ ಚಾಲಕನ ಬಂಧಿಸಿದ ಪೊಲೀಸರು. ಸುಳಿವು ನೀಡಿದ ಪೇಂಟ್ ಚೂರು.
ಭಟ್ಕಳ ಕಲ್ಬಂಡಿ ಇಸ್ಪೀಟ್ ಕ್ಲಬ್ ಮೇಲೆ ಪೊಲೀಸರ ದಾಳಿ. ಹಲವರ ಮೇಲೆ ಪ್ರಕರಣ.