ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಮಂಕಿ ಪಟ್ಟಣ ಪಂಚಾಯತಿಯ(Manki TMC) 20 ವಾರ್ಡುಗಳಿಗೆ ಸಾರ್ವತ್ರಿಕ ಚುನಾವಣೆ ಜರುಗಿಸುವ ಕುರಿತು ಚುನಾವಣಾ ವೇಳಾ ಪಟ್ಟಿಯನ್ನು(Election Time Table) ಪ್ರಕಟಿಸಲಾಗಿದೆ.

ಡಿಸೆಂಬರ್ 2 ರಂದು ಚುನಾವಣಾ ಅಧಿಸೂಚನೆ(Election Notification) ಹೊರಡಿಸಲಿದ್ದು, ನಾಮಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 9  ಕೊನೆಯ ದಿನಾಂಕ,  ಡಿಸೆಂಬರ್ 10 ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಯಲಿದ್ದು ,  ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು  ಡಿಸೇಂಬರ್ 12 ಕೊನೆಯ ದಿನಾಂಕವಾಗಿದೆ.

ಮತದಾನದ ಅವಶ್ಯಕವಿದ್ದರೆ ಡಿಸೆಂಬರ್  21 ರಂದು  ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ(Polling) ನಡೆಯಲಿದೆ. ಡಿಸೆಂಬರ್ 25 ರಂದು ಮತಗಳ ಎಣಿಕೆಯ ತಾಲೂಕಿನ ಕೇಂದ್ರ ಸ್ಥಳದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ(DC K Lakshmipriya) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : ಇತಿಹಾಸ ಸೃಷ್ಟಿಸಿದ ಶ್ರೀರಾಮನಾಮ ಜಪ ಅಭಿಯಾನ

ಹೊನ್ನಾವರದಲ್ಲಿ ಮತ್ತೊಂದು ದುರ್ಘಟನೆ. ಗೇರುಸೊಪ್ಪ–ಸೂಳೆಮುರ್ಕಿ ಕ್ರಾಸ್ ಬಳಿ ಪ್ರವಾಸಿ ಬಸ್ ಪಲ್ಟಿ.

ಮನ್ ಕೀ ಬಾತ್ ನಲ್ಲಿ ಮೋದಿ ಕಾರವಾರದ ಚಾಪೆಲ್ ವಾರ್ಶಿಪ್ ಮ್ಯೂಸಿಯಂ ಪ್ರಸ್ತಾಪ.