ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಕನ್ನಡ ಚಿತ್ರರಂಗದಲ್ಲಿ(Kannada Industry) ತನ್ನದೇ ಆದ ಗುರುತು ಮೂಡಿಸಿರುವ ಭಟ್ಕಳ ಮೂಲದ(Bhatkal Native) ಯುವ ಪ್ರತಿಭೆ ಜಯ್ ಡಿ. ಭಟ್ಕಳ (ಜಗ್ಗು ನಾಯ್ಕ) ಅವರ ಪ್ಯಾನ್ ಇಂಡಿಯಾ(Fan India) ಸಿನೇಮಾ ಅಕ್ಟೋಬರ್ 31ರಂದು ತೆರೆ ಕಾಣಲಿದೆ.
2018ರಲ್ಲಿ ಕುಸುಮ ಕಲಾ ಸಿನಿಮಾದಲ್ಲಿ ಸಹಾಯಕ ಬರಹಗಾರರಾಗಿ ಮೊದಲ ಹೆಜ್ಜೆ ಇಟ್ಟ ಜಯ್.ಡಿ., 2021ರಲ್ಲಿ ಬಿಡುಗಡೆಯಾದ ಮಚ್ಚಾ ನೀನ್ ಬದ್ದುಬ್ಬೇಕ ಟೆಲಿಫಿಲ್ಮ್(Telifilm) ಮೂಲಕ ನಿರ್ದೇಶಕ(Director) ಮತ್ತು ನಟನಾಗಿ(Actor) ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ.
ಮಣ್ಕುಳಿಯ ಮೂಲದ(Mankuli Native) ಜಯ್.ಡಿ. ಪ್ರಸ್ತುತ ಬೆಂಗಳೂರಿನ ಜಿ.ಕೆ.ಡಬ್ಲ್ಯೂ ಲೇಔಟ್‌ನಲ್ಲಿ ವಾಸವಿದ್ದು, ಸಿನಿಮಾ ಲೋಕದ(Cinema Industry) ಮೇಲಿನ ತನ್ನ ಆಸಕ್ತಿಯನ್ನು ಕಾಪಾಡಿಕೊಂಡವರು. ಜಾರುಬಂಡೆ (2021), ರಂಗಿನ ರಾಟೆ (2022), ಬ್ಲ್ಯಾಕ್ ಶೀಪ್ (2022), ಥಾಣೆ (2023), ಸಿ (2023), ತದ್ವಿರುದ್ಧ (2024), ರಾವೆನ್ (2024–2026), ಮಾಸ್ಕ್ (2025–2026) ಸೇರಿ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕ ಹಾಗೂ ತಾಂತ್ರಿಕ ತಂಡದ ಸದಸ್ಯನಾಗಿ ಕೆಲಸ ಮಾಡಿದ್ದಾರೆ. ಮಾಸ್ಕ್, ರಾವೆನ್ ಮತ್ತು ತದ್ವಿರುದ್ಧ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶನದ(Assistant Direction) ಜೊತೆಗೆ ಅಭಿನಯವೂ ಮಾಡಿದ್ದಾರೆ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
ಇತ್ತೀಚೆಗೆ ಖ್ಯಾತ ನಿರ್ದೇಶಕ ಶಶಾಂಕ್(Famous Director Shashanka) ಅವರ ಪ್ಯಾನ್ ಇಂಡಿಯಾ ಸಿನಿಮಾ ಬ್ರ್ಯಾಟ್ನಲ್ಲಿ ಸಹಾಯಕ ನಿರ್ದೇಶಕರಾಗಿ ಅವಕಾಶ ಪಡೆದ ಜಯ್.ಡಿ., ಈ ಚಿತ್ರ ಅಕ್ಟೋಬರ್ 31, 2025ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಚಿತ್ರರಂಗದಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಮುಂದುವರಿಯುತ್ತಿರುವ ಈ ಯುವ ಪ್ರತಿಭೆಗೆ ತವರೂರಿನ ಜನರು ಹಾಗೂ ಅಭಿಮಾನಿಗಳು “ಇನ್ನಷ್ಟು ಎತ್ತರಕ್ಕೇರಲಿ” ಎಂದು ಹಾರೈಸುತ್ತಿದ್ದಾರೆ.
ಇದನ್ನು ಓದಿ : ಬೈಕ್ ನಲ್ಲಿ ಪಟಾಕಿ ಸಿಡಿಸಿ ಸ್ಟಂಟ್. ಕಾರವಾರ ಟ್ರಾಫಿಕ್ ಪೊಲೀಸರಿಂದ ಯುವಕರಿಬ್ಬರು ವಶಕ್ಕೆ.
ಕೆಡಿಸಿಸಿ ಬ್ಯಾಂಕ್ ಚುನಾವಣೆ. ಶಿವರಾಮ್ ಹೆಬ್ಬಾರ್ ಬಣಕ್ಕೆ ಮುನ್ನಡೆ. ಯಾರೆಲ್ಲ ಗೆದ್ದಿದ್ದಾರೆ.

