ಭಟ್ಕಳ : 78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ  ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಭಟ್ಕಳ ತಾಲೂಕಿನ ವಿವಿಧ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ತಂಡ ಭೇಟಿ ನೀಡಿ ತಪಾಸಣೆ ನಡೆಸಿದರು.

ದೇಶದ ವಿವಿಧೆಡೆಯಲ್ಲಿ ಸ್ವಾತಂತ್ರ್ಯದ ಸಂಭ್ರಮ ಮನೆಮಾಡಿದೆ.  ಮೂಲೆ ಮೂಲೆಗಳಲ್ಲೂ ತಿರಂಗ ರಾರಾಜಿಸಲಿದೆ. ಈ ಹಿನ್ನೆಲೆಯಲ್ಲಿ ಭಟ್ಕಳದಲ್ಲಿಯೂ ಕೂಡ ನಾಳೆ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.   ಭಟ್ಕಳ ತಾಲೂಕು ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಕಾರವಾರದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ತಂಡ ಭಟ್ಕಳ ರೇಲ್ವೆ ನಿಲ್ದಾಣ ಹಾಗೂ ಭಟ್ಕಳ ನ್ಯಾಯಾಲಯದ ಒಳ ಭಾಗ ಮತ್ತು ಒಳ ಭಾಗದಲ್ಲಿ ತಪಾಸಣೆ ನಡೆಸಿತು.

ಈ ಸಂದರ್ಭದಲ್ಲಿ ಮೇಲ್ವಿಚಾರಕ ಅನಿಲ ನಾಯ್ಕ, ಸಂಜಯ ಭೋವಿ , ಶ್ವಾನ ನಿರ್ವಾಹಕ ಸಂತೋಷ ನಾಯಕ, ಹಾಗೂ ತಪಾಸಣೆಯಲ್ಲಿ ಪಾಲ್ಗೊಂಡ ಶ್ವಾನ ಮಾರ್ವೆಲ್ ಇದ್ದವು.