ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಹೊರಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೊರಟ ಯುವತಿಯೋರ್ವಳು ವಾಪಸಾಗದೆ ಕಾಣೆಯಾದ(Missing) ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ(Ankola Police Station) ದೂರು ದಾಖಲಾಗಿದೆ.

ಚಂದ್ರಕಲಾ ತಂದೆ ನೀಲಕಂಠ ಗೌಡ (20) ನಾಪತ್ತೆಯಾಗಿದ್ದಾಳೆ. ಅಂಕೋಲಾ(Ankola) ತಾಲೂಕಿನ ಅಗ್ರಗೋಣ ಗ್ರಾ.ಪಂಚಾಯತ್(Agragona G.Panchayat)  ವ್ಯಾಪ್ತಿಯ ಅಡಿಗೋಣ ಬೈಲಕೇರಿಯ ನಿವಾಸಿ ಚಂದ್ರಕಲಾ ಗೌಡ  ಸೆ.1 ರಂದು ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವಳು ಈವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ಈವರೆಗೂ ಮನೆಗೂ ಬಾರದೇ, ತನ್ನ ಇರುವಿಕೆ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇ ನಾಪತ್ತೆಯಾಗಿದ್ದಾಳೆ. ತನ್ನ ಮಗಳನ್ನು ಹುಡುಕಿ ಕೊಡುವಂತೆ ಯುವತಿಯ ತಂದೆ ನೀಲಕಂಠ ಗೊಯ್ದು ಗೌಡ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಚಂದ್ರಕಲಾ ಈಕೆ 5 ಫೂಟ್ ಎತ್ತರ ಇದ್ದು ಕನ್ನಡ ಭಾಷೆ ಮಾತನಾಡುತ್ತಾಳೆ. ಎಣ್ಣೆಗೆಂಪು ಮೈಬಣ್ಣ, ಗೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು ಕಾಣೆಯಾದ ದಿನ ಗುಲಾಬಿ ಬಣ್ಣದ ಟಾಪ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಈ ಮೇಲಿನ ಚಹರೆವುಳ್ಳ ಕಾಣೆಯಾದವರ ಬಗ್ಗೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮಾಹಿತಿ ಕಂಡು ಬಂದಲ್ಲಿ ಕೂಡಲೇ ಅಂಕೋಲಾ ಪೊಲೀಸ್ ಠಾಣೆಗೆ ತಿಳಿಸಲು ಕೋರಿದೆ. ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: (08388) 220333 ಮೊ.ನಂ. 9480805250, 9480805268 ಗೆ ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ : ಕಾರವಾರ ಶೈಕ್ಷಣಿಕ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು.

ಶಿರಸಿಯ ನೆಗ್ಗು ಗ್ರಾಮದಲ್ಲಿ ದುಷ್ಕೃತ್ಯ.‌ ದುರುಳರಿಗಾಗಿ ಪೊಲೀಸರಿಂದ ತಲಾಶ್.