ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕೇರಳ(Keral) : ಕುಂಭಮೇಳ (Kumbhamela) ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ(Social Media) ಬಾರೀ ಸೆನ್ಸೇಷನ್ ಸೃಷ್ಟಿ ಮಾಡಿದ್ದ ನೀಲಿ ಕಣ್ಷಿನ ಹುಡುಗಿ ಮೊನಾಲಿಸಾ ಭೋಸ್ಲೆ (Monalisa Bhosle) ಯಾವುದೇ ಸುಳಿವು ನೀಡದೇ ಮದುವೆಯಾಗಿದ್ದಾಳೆ.
ಮುಸ್ಲಿಂ ಸಮುದಾಯದ(Muslim Community) ಮೊಹಮ್ಮದ್ ಫರ್ಮಾನ್ ಜೊತೆ ಮೊನಾಲಿಸಾ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಈಗ ಆಕೆಯ ಮದುವೆಯ (Marriage) ವಿಷಯ ಸಖತ್ ಚರ್ಚೆ ಆಗುತ್ತಿದೆ. ರುದ್ರಾಕ್ಷಿ ಮಾಲೆ(Rudrakhsi Mala) ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಮೊನಾಲಿಸಾ ಭೋಸ್ಲೆಗೆ ಪ್ರಯಾಗರಾಜ್ ನಲ್ಲಿ(Prayagaraj) ನಡೆದ ಕುಂಭಮೇಳದಲ್ಲಿ(Kumbhamela) ಬಾರೀ ಬೇಡಿಕೆ ಸಿಕ್ಕಿತು. ಅದೇ ರೇತಿ ಚಿತ್ರರಂಗದಿಂದ(Cinemas) ಅವಕಾಶ ಲಭಿದಿತ್ತು. ನಟಿಯಾಗಿ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದ ಬಳಿಕ ಅವರಿಗೆ ಉತ್ತರಪ್ರದೇಶ ಮೂಲದ(Uttarapradesha Native) ಮೊಹಮ್ಮದ್ ಫರ್ಮಾನ್ ಪರಿಚಯ ಆಯಿತು. ಮೊಹಮ್ಮದ್ ಫರ್ಮಾನ್ ಕೂಡ ಚಿತ್ರರಂಗ ನಟನಾಗಿ ಮತ್ತು ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾರೆ.
ಮೊಹಮ್ಮದ್ ಫರ್ಮಾನ್(Mohammed Farman) ಮತ್ತು ಮೊನಾಲಿಸಾ ಭೋಸ್ಲೆ(Monalisa Bhosle) ನಡುವೆ ಪರಿಚಯ ಬೆಳೆದಿದ್ದು ಸೋಶಿಯಲ್ ಮೀಡಿಯಾ(Social Media) ಮೂಲಕ. ನಂತರ ಅವರು ಶೂಟಿಂಗ್ ಸೆಟ್ನಲ್ಲಿ ಭೇಟಿಯಾದರು. ಇಬ್ಬರ ನಡುವೆ ಪ್ರೀತಿ ಬೆಳೆಯಿತು. 6 ತಿಂಗಳ ಕಾಲ ಡೇಟಿಂಗ್ ಮಾಡಿದ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದರು. ಬೇರೆ ಬೇರೆ ಧರ್ಮದವರಾದ(Religious) ಕಾರಣ ಅವರ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಅವರು ಮದುವೆ ಆಗಿದ್ದಾರೆ.
ಅಚ್ಚರಿಯೆಂದರೆ ಮೊಹಮ್ಮದ್ ಫರ್ಮಾನ್ಗೆ ಮೊದಲು ಪ್ರೊಪೋಸ್ ಮಾಡಿದ್ದೇ ಮೊನಾಲಿಸಾ ಭೋಸ್ಲೆ ಅಂತೆ. ಮದುವೆ ಬಳಿಕ ನಡೆದ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ. ‘ಮೊನಾಲಿನಾ ಪ್ರೊಪೋಸ್(Minalisa Bhosle) ಮಾಡಿದಳು. ನಾನು ಮೊದಲು ಒಪ್ಪಿಕೊಳ್ಳಲಿಲ್ಲ. ಆಮೇಲೆ ಆಕೆ ನನ್ನ ಮನವೊಲಿಸಿದಳು’ ಎಂದು ಮೊಹಮ್ಮದ್ ಫರ್ಮಾನ್ ಹೇಳಿದ್ದಾನೆ.
‘ಈ ಆರು ತಿಂಗಳು ನಮಗೆ 60 ವರ್ಷದ ಪ್ರೀತಿಯ ಹಾಗೆ ಅನಿಸಿತು. ಆದಕ್ಕಾಗಿಯೇ ನಾವು ಮದುವೆ ಆಗಲು ನಿರ್ಧರಿಸಿದೆವು’ ಎಂದು ಅವರು ಹೇಳಿದ್ದಾರೆ. ಕೇರಳದ ದೇವಸ್ಥಾನವೊಂದರಲ್ಲಿ ಹಿಂದೂ ಧರ್ಮದ(Hindu Religious) ಪ್ರಕಾರ ಈ ಮದುವೆ ನಡೆದಿದೆ.
ಇದನ್ನು ಓದಿ : ಗುಂಡಿಗೆ ಬಿದ್ದು ಮೇಲಕ್ಕೆ ಬಂದ ಆ್ಯಂಬುಲೆನ್ಸ್. ಹೋದ ಮಹಿಳೆಯ ಜೀವ ಮತ್ತೆ ಬಂದಿದ್ದು ಪವಾಡ.
