ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹುಬ್ಬಳ್ಳಿ(Hubli) :  ಯೂಟ್ಯೂಬ್ ಸ್ಟಾರ್(YouTube Star) ಖ್ವಾಜಾ ಅಲಿಯಾಸ್‌ ಮುಕಳೆಪ್ಪ ಶಿರಹಟ್ಟಿಯ(Mukaleppa Shirahatti) ಲವ್ ಮ್ಯಾರೇಜ್ ಪ್ರಕರಣ ದಿನದಿಂದ ದಿನಕ್ಕೆೆ ಹೊಸ ರೂಪ ಪಡೆದುಕೊಳ್ಳುತ್ತಿದೆ.

ಖ್ವಾಜಾ ವಿರುದ್ಧ ಯುವತಿಯ ಪೋಷಕರು ದೂರು ನೀಡಿದ ಬೆನ್ನಲ್ಲೆ,  ಇದೀಗ ಯುವತಿ ಇನ್‌ಸ್ಟಾಗ್ರಾಂ(Instragram) ವಿಡಿಯೋ ಒಂದನ್ನ ಮಾಡಿ ತಾಯಿಯ ವಿರುದ್ಧವೇ ಗಂಭೀರ ಆರೋಪ ಹೊರಿಸಿದ್ದಾರೆ.

ಯುವತಿ ವಿಡಿಯೋದಲ್ಲಿ ತನ್ನ ತಾಯಿ ಮತ್ತು ಕುಟುಂಬ ನೀಡುತ್ತಿರುವ ಎಲ್ಲಾ ಆರೋಪಗಳನ್ನು ಸುಳ್ಳು ಎಂದು ಹೇಳಿದ್ದು, “ನಾವು ಪ್ರೀತಿಸಿ ಮದುವೆಯಾಗಿದ್ದೇವೆ, ಇದು ಲವ್ ಜಿಹಾದ್(Love Jihad) ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ತಾಯಿ ಈ ಹಿಂದೆ ನಮ್ಮ ಮದುವೆಗೆ ಬೆಂಬಲ ನೀಡಿದ್ದಳು. ಅದಕ್ಕೆ ಸಾಕ್ಷಿಯಾದ ದಾಖಲೆಗಳು ನನ್ನ ಬಳಿ ಇವೆ. ಅವುಗಳನ್ನು ಶೀಘ್ರದಲ್ಲೇ ಅಪ್ಲೋಡ್ ಮಾಡುತ್ತೇನೆ ಎಂದು ಹೇಳಿದ್ದಾಳೆ.

ನನ್ನ ತಾಯಿ ಈಗ ಏಕೆ ಹೀಗಾಗಿದ್ದಾಳೋ ನನಗೆ ತಿಳಿಯುತ್ತಿಲ್ಲ. ಯಾರೋ ಮೈಂಡ್ ವಾಶ್ ಮಾಡಿ ಸುಳ್ಳು ಹೇಳಿಸುತ್ತಿದ್ದಾರೆ. ನಾನು ನನ್ನ ಇಚ್ಛೆಯಿಂದಲೇ ಗಂಡನ ಜೊತೆ ಬಂದಿದ್ದೇನೆ. ಯಾರೂ ನನ್ನನ್ನು ಕಿಡ್ನಾಪ್ ಮಾಡಿಲ್ಲ‌ ಎಂದ ಗಾಯತ್ರಿ ಜಾಲಿಹಾಳ, ನನಗಾಗಲಿ ಅಥವಾ ನನ್ನ ಗಂಡನ ಕುಟುಂಬದವರಿಗೆ ಏನಾದರೂ ಅಪಾಯವಾದರೆ, ಕಾನೂನಾತ್ಮಕವಾಗಿ ನಾವು ನ್ಯಾಯ ಪಡೆಯುತ್ತೇವೆ ಎಂದು ಹೇಳಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ನಿನ್ನೆ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ(Old Hubballi Police Station) ಖ್ವಾಜಾ ವಿರುದ್ಧ ದೂರು ನೀಡಿದ್ದರು. ಈಗ ಯುವತಿಯ ಹೇಳಿಕೆಯಿಂದ ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆದಿದೆ. ಮುಂದೆ ಯಾವ ಹಂತಕ್ಕೆ  ಹೋಗುತ್ತೋ‌ ಕಾದು ನೋಡಬೇಕಾಗಿದೆ.

ಇದನ್ನು ಓದಿ : ಮೋದಿ ಅವರ  ಭಾಷಣ  ರಾಜಕೀಯ ನಾಟಕ.‌ ಜನರ ಗಮನ ಬೇರೆಡೆ ಸೆಳೆಯುವ ಯತ್ನ – ಸೂರಜ್ ನಾಯ್ಕ ಆರೋಪ.

ಆತ್ಮ ನಿರ್ಭರತೆಯೊಂದಿಗೆ ಸಾಗುತ್ತಿರುವ ಭಾರತ. ಸ್ವದೇಶಿ ವಸ್ತು ಬಳಕೆಗೆ ಮೋದಿ ಕರೆ.

ರೀಲ್ಸ್ ಅಂತಾ ರಿಯಲ್‌ ಮದುವೆಯಾದ ಯುಟ್ಯೂಬರ್. ಮತ್ತೊಂದು ದೂರು.

ಕಾರವಾರ ಸಮೀಪವೇ ಓಡಾಡುತ್ತಿದೆ ಚಿರತೆ. ಬಿಣಗಾ ನಾಗರಿಕರ ಆತಂಕ.