ಬೆಂಗಳೂರು(BANGLORE) : ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP NUMBER PLATE) ಅಳವಡಿಸದ ವಾಹನ ಸವಾರರಿಗೆ ಇನ್ನೂ ಎರಡು ತಿಂಗಳುಗಳ ಕಾಲ ಅವಕಾಶ ಸಿಕ್ಕಿದೆ. ನವೆಂಬರ್ 20ರ (NOVEMBER 20) ವರೆಗೆ ವಿಸ್ತರಣೆ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಸಾರಿಗೆ ಇಲಾಖೆ(TRANSPORT DEPARTMENT) ಈ ಹಿಂದೆ ತಿಳಿಸಿ ಸಪ್ಟೆಂಬರ್ 16ರಿಂದ ದಂಡ ವಿಧಿಸಲಾಗುತ್ತದೆಯೆಂದು ತಿಳಿಸಿತ್ತು. ಹೈಕೋರ್ಟ್‌ನಲ್ಲಿ (HIGHCOURT) ವಿಚಾರಣೆ ಇದ್ದುದರಿಂದ ಸೆಪ್ಟೆಂಬರ್ 18ರ ವರೆಗೂ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಕರ್ನಾಟಕ ಹೈಕೋರ್ಟ್ ಎಚ್‌ಎಸ್‌ಆರ್‌ಪಿ ನಂಬರ್ ಅಳವಡಿಕೆಗೆ ನವೆಂಬರ್ 20ರವರೆಗೂ ಅಂದರೆ 2 ತಿಂಗಳವರೆಗೂ ಮುಂದೂಡಿಕೆ ಮಾಡಿದೆ. ಇದರಿಂದ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ಅವಕಾಶ ಸಿಕ್ಕಂತಾಗಿದ್ದು, ಇದ್ದ ಆತಂಕ ದೂರವಾದಂತಾಗಿದೆ.
ಕೇಂದ್ರ ಸಾರಿಗೆ ಇಲಾಖೆಯಿಂದ ದೇಶಾದ್ಯಂತ ಎಲ್ಲಾ ಮೋಟಾರು ವಾಹನಗಳಿಗೆ ಒಂದೇ ರೀತಿಯ ನಂಬರ್ ಪ್ಲೇಟ್ ಅಳವಡಿಸುವ ಉದ್ದೇಶದಿಂದ ಎಚ್‌ಎಸ್‌ಆರ್‌ಪಿ ನೋಂದಣಿಗೆ ಆದೇಶ ಹೊರಡಿಸಲಾಗಿತ್ತು. ಆಯಾ ರಾಜ್ಯದ(STATE) ಸಾರಿಗೆ ಇಲಾಖೆಗಳಿಗೆ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿದ್ದು, ಬಳಿಕ ದಂಡ ವಿಧಿಸಲು ಸೂಚನೆ ನೀಡಲಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಈಗಾಗಲೇ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದಕ್ಕೆ ನಾಲ್ಕು ಬಾರಿ ಗಡುವು ನೀಡಿ, ವಿಸ್ತರಣೆ ಅವಧಿಯು ಸೆಪ್ಟೆಂಬರ್ 15ಕ್ಕೆ ಮುಕ್ತಾಯವಾಗಿತ್ತು. ಮತ್ತೆ ಈಗ ನವೆಂಬರ್ 20ರ ವರೆಗೂ ಗಡುವು ನೀಡಲಾಗಿದೆ.
ರಾಜ್ಯದಲ್ಲಿ ಒಟ್ಟು 2 ಕೋಟಿಗೂ ಅಧಿಕ ವಾಹನಗಳಿದ್ದು, ಆದರೆ, ಇಲ್ಲಿಯವರೆಗೆ ಕೇವಲ 51,00,000 ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ನೊಂದಣಿಯಾಗಿದೆ. ಉಳಿದ 1.49 ಕೋಟಿ ವಾಹನಗಳು ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ.
ಹೀಗಾಗಿ ಸಾರಿಗೆ ಇಲಾಖೆಯಿಂದ ಎಲ್ಲಾ ಜಿಲ್ಲೆಗಳಲ್ಲೂ ಸ್ಪೆಷಲ್ ಡ್ರೈವ್(SPECIAL DRIVE) ಮಾಡಿ ಮೊದಲ ಬಾರಿಗೆ 500 ರೂಪಾಯಿ ದಂಡ, ಎರಡನೇ ಬಾರಿಗೆ 1000 ರೂಪಾಯಿ ದಂಡ ಹಾಕಲು ಚಿಂತಿಸಲಾಗಿತ್ತು. ಆದರಿಗ ಮುಂದಿನ ಎರಡು ತಿಂಗಳವರೆಗೂ ಕಾಲಾವಕಾಶ ಸಿಕ್ಕಿದೆ.
ಎಚ್ಎಸ್ಆರ್ಪಿ (HSRP) ನಂಬರ್‌ಪ್ಲೇಟ್‌ಪಡೆಯವವಿಧಾನ: ಮೊದಲು https://transport.karnataka.gov.in ಅಥವಾ www.siam.in ಪೋರ್ಟಲ್‌ನಲ್ಲಿ ಲಾಗಿ ಇನ್ ಆಗಬೇಕು. ನಂತರ Book HSRP ಕ್ಲಿಕ್ ಮಾಡಿ. ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿಕೊಳ್ಳಿ. ನಿಮ್ಮ ವಾಹನದ ಮಾಹಿತಿಯನ್ನು ನಮೂದಿಸಿಕೊಳ್ಳಿ. ನಿಮ್ಮ ಹತ್ತಿರದ ಅಥವಾ ನಿಮ್ಮ ಡೀಲರ್ ಶೋ ರೂಂ ಆಯ್ಕೆ ಮಾಡಿಕೊಳ್ಳಿ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ ಪಾವತಿ ಮಾಡಿ. ಮೊಬೈಲ್ ನಂಬರ್‌ಗೆ ಒಟಿಪಿಯನ್ನು ನಮೂದಿಸಿ. HSRP ನಂಬರ್ ಪ್ಲೇಟ್ ಅಳವಡಿಕೆಗೆ ನಿಮ್ಮ ಅನುಕೂಲದ ದಿನಾಂಕವನ್ನು ನಿಗದಿಪಡಿಸಿಕೊಳ್ಳಬೇಕಾಗುತ್ತದೆ. ಇನ್ನೂ ಗೊಂದಲ ಇದ್ದರೇ HSRP ಮಾಡಿಕೊಂಡವರಿಂದ ಮಾಹಿತಿ ಪಡೆದುಕೊಳ್ಳಿ.
ಇದನ್ನು ಓದಿ : ನಾಳೆಯಿಂದ ಶಿರೂರಿನಲ್ಲಿ ಮತ್ತೆ ಕಾರ್ಯಾಚರಣೆ