ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಜಿಲ್ಲೆಯ ಭಟ್ಕಳ ತಾಲೂಕಿನ ಶಕ್ತಿ ಸ್ಥಳ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ(Mundalli Shri Durgaparameshwari Temple) ಅಷ್ಠಬಂಧ ಹಾಗೂ ಬ್ರಹ್ಮಕಲಶೋತ್ಸವ(Ashtabandha Brahmakalashotsava) ಶ್ರೀ ಮಂಜುನಾಥ ಸ್ವಾಮೀಯ ಕೃಪಾಶೀರ್ವಾದದೊಂದಿಗೆ ಎಪ್ರಿಲ್ ನಾಲ್ಕು ರವಿವಾರದಿಂದ ಎಪ್ರಿಲ್ ಒಂಬತ್ತು ಗುರುವಾರದವರೆಗೆ ಅದ್ದೂರಿಯಿಂದ ನಡೆಯಲಿದೆ.
ಮಂಗಳೂರಿನ ಗುರುಪುರದ ವಜ್ರದೇಹಿ ಮಠ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ಸ್ವಸ್ತಿ ಶ್ರೀ ಶಾಲಿವಾಹನ ಶಕ ೧೯೪೯ನೇ ಪರಾಭವನಾಮ ಸಂವತ್ಸರದ ಚೈತ್ರ ಮಾಸ ಕೃಷ್ಣ ಪಕ್ಷ ೪ಯು ದಿನಾಂಕ: 06-04-2026 ಸೋಮವಾರ ದಿವಾಫಂಟೆ : 10:15ಕ್ಕೆ ಸಲ್ಲುವ ವೃಷಭ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠಾ ಮಹೋತ್ಸವ ಸಹಸ್ರ ಬ್ರಹ್ಮಕಲಶಾಭಿಷೇಕ, ಶತಚಂಡಿಕಾಯಾಗವನ್ನು ಭಕ್ತ ಮಹಾಶಯರ ಸಹಕಾರದೊಂದಿಗೆ ನೆರವೇರಿಸಲಾಗುವುದು. ಭಕ್ತಾದಿಗಳು ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೇವರ ದಿವ್ಯಾನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಾಲಯದ ಆಡಳಿತ ಮಂಡಳಿ ವಿನಂತಿಸಿದೆ.
ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು:
ದಿನಾಂಕ 05-04-2026 ರವಿವಾರ : ಪ್ರಾತಃ : ದೇವತಾ ಪ್ರಾರ್ಥನೆ, ಮಹಾಸಂಕಲ್ಪ, ಗಣೇಶಪೂಜೆ, ದೇವನಾಂದಿ, ಮಾತೃಕಾ ಪೂಜೆ, ಅಷ್ಠಮೂರ್ತಿ ಪ್ರಾರ್ಥನೆ, ಋರ್ತಿಗ್‌ವರ್ಣನೆ, ಮಧುಪರ್ಕ, ಕಚ್ಟ್ರಾಚರಣ, ಕೌತುಕ ಬಂಧನ, ಬ್ರಹ್ಮ ಕೂರ್ಚಹೋಮ, ಅಕ್ಷತಹೋಮ, ಗಣೇಶಯಾಗ ಇತ್ಯಾದಿ.
ಸಾಯಂಕಾಲ : ಯಾಗಶಾಲಾ ಪ್ರವೇಶ, ಗಣೇಶಪೂಜೆ, ಪುಣ್ಯಾಹ, ಸ್ಥಾನಶುದ್ಧಿ, ಪ್ರಸಾದಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ಅಗ್ನಿಜನನ, ಪ್ರತಿಷ್ಠಾ ಪೂರ್ವಾಂಗ ಹೋಮ ಇತ್ಯಾದಿ.
ರಾತ್ರಿ : 7.00 ರಿಂದ 8.00 ಗಂಟೆಯವರೆಗೆ ಶಾಲಾ ಮಕ್ಕಳ ಮನೋರಂಜನೆ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮ (ಭಕ್ತಿಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ). ರಾತ್ರಿ : 8.00 ರಿಂದ 9.00 ಗಂಟೆಯವರೆಗೆ ರಾಮಾಂಜನೇಯ ಭಜನೆ ಮಂಡಳ ಸಣಭಾವಿ ಇವರಿಂದ ಕುಣಿತ ಭಜನೆ. ರಾತ್ರಿ 9.00ರಿಂದ ಉಮೇಶ ಮುಂಡಳ್ಳಿ ಅವರಿಂದ “ಭಾವ ಗಾನ” ಸುಗಮ ಸಂಗೀತ ಕಾರ್ಯಕ್ರಮ. ಪ್ರಸ್ತುತಿ: ನಿನಾದ ಕಲ್ಬರಲ್ ಅಕಾಡೆಮಿ ಭಟ್ಕಳ.
ದಿನಾಂಕ: 06-04-2026 ಸೋಮವಾರ : ಪ್ರಾತಃ : ಗಣೇಶ ಪೂಜೆ, ಪುಣ್ಯಹ, ಸ್ಥಾನಶುದ್ದಿ ಬಿಂಬಶುದ್ಧಿ, ಗೃಹಯಜ್ಞ, ಮೃತ್ಯುಂಜಯ, ಆಧಿವಾಸ ಹೋಮ ಸುಮುಹೂರ್ತದಲ್ಲಿ ಪ್ರತಿಷ್ಠೆ ಅಷ್ಟಬಂಧ ಲೇಪನ ಇತ್ಯಾದಿ. 11.30 ರಿಂದ 12.30ರವರಗೆ ಸಭಾ ಕಾರ್ಯಕ್ರಮ. ಸಭಾ ಕಾರ್ಯಕ್ರಮದ ದಿವ್ಯ ಉಪಸ್ಥಿತಿಯನ್ನು ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ, ಗುರುಪುರ ವಹಿಸಲಿದ್ದಾರೆ.
ಉದ್ಘಾಟಕರಾಗಿ ಮಂಕಾಳ ಎಸ್. ವೈದ್ಯ ಸನ್ಮಾನ್ಯ ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡಳ್ಳಿಯ ಅಧ್ಯಕ್ಷರಾದ ಎಸ್.ಬಿ ಬೊಮ್ಮಾಯಿ (ವಕೀಲರು) ವಹಿಸಲಿದ್ದಾರೆ. ಅತಿಥಿಗಳಾಗಿ ನಾಗಯ್ಯ ಜಿ. ದೊಡ್ಡನೆ ಅಧ್ಯಕ್ಷರು, ಶ್ರೀ ಅಬ್ಬಿಮಹಾರಾಜ ದೇವಸ್ಥಾನ, ಜೋಗಿಮನೆ, ನವನೀತ ಗಣೇಶ ಗರ್ಡಿಕರ್ ಅಧ್ಯಕ್ಷರು, ಶ್ರೀ ಸತ್ಯ ನಾರಾಯಣ ದೇವಸ್ಥಾನ, ನಾಗೇಶ ಮಾಸ್ತಿ ಸಣ್ಣಿಮನೆ ಅಧ್ಯಕ್ಷರು, ಶ್ರೀ ನಾಗಚೌಡೇಶ್ವರಿ ದೇವಸ್ಥಾನ, ಮೊಗೇರಕೇರಿ, ಶಂಕರ ನಾಯ್ಕ ಅಧ್ಯಕ್ಷರು, ಶ್ರೀ ಕುದುರೆಬೀರಪ್ಪ ದೇವಸ್ಥಾನ,, ಚೌಥನಿ, ನಾಗಪ್ಪಯ್ಯ ಶಿವರಾಮ ಆಚಾರ್ಯ ಅಧ್ಯಕ್ಷರು, ಶ್ರೀ ಗಣೇಶೋತ್ಸವ ಸಮಿತಿ, ಮುಂಡಳ್ಳಿ, ಗೋಪಾಲ ವಿ ನಾಯ್ಕ ಅಧ್ಯಕ್ಷರು, ಶ್ರೀ ಶಾರದೋತ್ಸವ ಸಮಿತಿ, ಮುಂಡಳ್ಳಿ ಉಪಸ್ಥಿತರಿರಲಿದ್ದಾರೆ.
ಮಧ್ಯಾಹ್ನ : 12.30ಕ್ಕೆ ಮಹಾಪೂಜೆ ನಂತರ ಪ್ರಸಾದ ವಿತರಣೆ 1.00 ಗಂಟೆಗೆ ಅನ್ನಸಂತರ್ಪಣೆ. ಸಾಯಂಕಾಲ : ನಿರೀಕ್ಷಾ ಪೂಜೆ, ಅಷ್ಟವಧಾನ ಸೇವೆ, ಇತ್ಯಾದಿ. ಸಂಜೆ 4.00 ಗಂಟೆಯಿಂದ 7.00ಗಂಟೆ ತನಕ ಭಜನೆ ಕಾರ್ಯಕ್ರಮ. ರಾತ್ರಿ : 7.00 ರಿಂದ 8.00 ಗಂಟೆಯವರೆಗೆ ಶಾಲಾ ಮಕ್ಕಳ ಮನೋರಂಜನೆ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮ (ಭಕ್ತಿಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ). ರಾತ್ರಿ : 8.00 ರಿಂದ 9.00 ಗಂಟೆಯವರೆಗೆ ಶ್ರೀ ನಾಗಚೌಡೇಶ್ವರಿ ಮಹಿಳಾ ಭಜನಾ ಮಂಡಳಿ ಮಠದಹಿತ್ತು ಇವರಿಂದ ಕುಣಿತ ಭಜನೆ. ರಾತ್ರಿ : 9.00 ಗಂಟೆಗೆ ‘ಸಂಪೂರ್ಣ ದೇವಿ ಮಹಾತ್ಮೆ‘ ಯಕ್ಷಗಾನ ಇರುತ್ತದೆ.
ದಿನಾಂಕ: 07-04-2026 ಮಂಗಳವಾರ : ಪ್ರಾತಃ : ಗಣೇಶ ಪೂಜೆ, ಪುಣ್ಯಾಹ, ಅಧಿವಾಸ, ಶಕ್ತಿಕಲಾ ಪ್ರಾಣ ಪ್ರತಿಷ್ಠಾ ಹೋಮ, ಸಪ್ತಶತೀ ಪಾರಾಯಣ ಇತ್ಯಾದಿ. ಬೆಳಿಗ್ಗೆ 9.00 ಗಂಟೆಯಿಂದ 1.00 ಗಂಟೆಯವರೆಗೆ ಭಜನೆ ಕಾರ್ಯಕ್ರಮ. ಮಧ್ಯಾಹ್ನ : 12.30ಕ್ಕೆ ಮಹಾಪೂಜೆ ನಂತರ ಪ್ರಸಾದ ವಿತರಣೆ. 1.00 ಗಂಟೆಗೆ ಅನ್ನಸಂತರ್ಪಣೆ. ಸಾಯಂಕಾಲ: ಮಂಡಲ ರಚನೆ, ಸಹಸ್ರ ಬ್ರಹ್ಮ ಕಲಶ ಸ್ಥಾಪನೆ, ಇತ್ಯಾದಿ. ಸಂಜೆ 4.00 ಗಂಟೆಯಿಂದ 7.00ಗಂಟೆ ತನಕ ಭಜನೆ ಕಾರ್ಯಕ್ರಮ.
ರಾತ್ರಿ : 7.00 ರಿಂದ 8.00 ಗಂಟೆಯವರೆಗೆ ಶಾಲಾ ಮಕ್ಕಳ ಮನೋರಂಜನೆ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮ (ಭಕ್ತಿಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ). ರಾತ್ರಿ : 8.00 ರಿಂದ 9.00 ಗಂಟೆಯವರೆಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡ ಕಾನಮದ್ದು ಇವರಿಂದ ಕುಣಿತ ಭಜನೆ. ರಾತ್ರಿ : 9.00 ಗಂಟೆಗೆ ‘ನೃತ್ಯಾರ್ಪಣಂ’ ಭರತನಾಟ್ಯ ಕಾರ್ಯಕ್ರಮ. ಪ್ರಸ್ತುತಿ: ಪದಯಾನ ತಂಡದವರಿಂದ ಬಂಟ್ವಾಳ ತಾಲೂಕು, ದ.ಕ..ನಿರ್ದೇಶಕಿ : ವಿದುಷಿ ಶ್ರೀಮತಿ ಪ್ರಣತಿ ಚೈತನ್ಯ ಪದ್ಯಾಣ.
ದಿನಾಂಕ 08-04-2026 ಬುಧವಾರ: ಪ್ರಾತಃ : ಗಣೇಶ ಪೂಜೆ, ಪುಣ್ಯಾಹ, ದಿಶಾದಿ ಮಹಾಶಾಂತಿ, ಪ್ರಾಯಶ್ಚಿತ ಹೋಮ. ಸಪ್ತಶತೀ ಪಾರಾಯಣ ಸಹಸ್ರ ಬ್ರಹ್ಮ ಕಲಶಾಭೀಷೇಕ ಮಹಾಪೂಜೆ ಇತ್ಯಾದಿ. ಬೆಳಿಗ್ಗೆ : 9.00 ಗಂಟೆಯಿಂದ 1.00 ಗಂಟೆಯವರೆಗೆ ಭಜನೆ ಕಾರ್ಯಕ್ರಮ ಮಧ್ಯಾಹ್ನ : 12.30ಕ್ಕೆ ಮಹಾಪೂಜೆ ನಂತರ ಪ್ರಸಾದ ವಿತರಣೆ. 1.00 ಗಂಟೆಗೆ ಅನ್ನಸಂತರ್ಪಣೆ.
ಸಾಯಂಕಾಲ : ಗಣೇಶ ಪೂಜೆ, ಮಂಡಲ ರಚನೆ ಶತಚಂಡಿ ಹೋಮಾಂಗ ಕಲಶ ಸ್ಥಾಪನೆ, ಪಲ್ಲಕ್ಕಿ ಉತ್ಸವ ಇತ್ಯಾದಿ ಸಂಜೆ 4.00 ಗಂಟೆಯಿಂದ ಅದ್ದೂರಿಯಿಂದ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ.
ದಿನಾಂಕ: 09-04-2026 ಗುರುವಾರ : ಪ್ರಾತಃ : ಶತಚಂಡೀ ಹೋಮ, ಪುರ್ಣಾಹುತಿ, ಮಹಾಪೂಜೆ ತೀರ್ಥಪ್ರಸಾದ ವಿತರಣೆ, ಆಶೀಗ್ರಹಣ, ಮಂತ್ರಾಕ್ಷತೆ. ಬೆಳಿಗ್ಗೆ: 9.00 ಗಂಟೆಯಿಂದ 1.00 ಗಂಟೆಯವರೆಗೆ ಭಜನೆ ಕಾರ್ಯಕ್ರಮ. ಮಧ್ಯಾಹ್ನ : 12.30ಕ್ಕೆ ಮಹಾಪೂಜೆ ನಂತರ ಪ್ರಸಾದ ವಿತರಣೆ. 1.00 ಗಂಟೆಗೆ ಅನ್ನಸಂತರ್ಪಣೆ. ಸಂಜೆ : 4.00 ಗಂಟೆಯಿಂದ 5.00 ಗಂಟೆಯವರೆಗೆ ಭಜನೆ ಕಾರ್ಯಕ್ರಮ. ಸಂಜೆ : 5.30 ರಿಂದ 6.30ರವರೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮ.
ಉದ್ಘಾಟಕರಾಗಿ ಸುನೀಲ್ ಬಿ. ನಾಯ್ಕ ಮಾಜಿ ಶಾಸಕರು, ಭಟ್ಕಳ ವಿಧಾನಸಭಾ ಕ್ಷೇತ್ರ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಸ್ ಬಿ ಬೊಮ್ಮಾಯಿ (ವಕೀಲರು) ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡಳ್ಳಿ ವಹಿಸಲಿದ್ದಾರೆ. ಅತಿಥಿಗಳಾಗಿ ಮಂಜುನಾಥ ಈರಪ್ಪ ನಾಯ್ಕ ಅಧ್ಯಕ್ಷರು, ನಾಮಧಾರಿ ಸಮಾಜ, ದಾಸ ಜಟ್ಟಪ್ಪ ಮೊಗೇರ ಅಧ್ಯಕ್ಷರು, ಮೊಗೇರ ಸಮಾಜ, ರಾಮ ವೆಂಕ್ಟಯ್ಯ ದೇವಾಡಿಗ, ಅಧ್ಯಕ್ಷರು, ದೇವಡಿಗ ಸಮಾಜ, ಮಂಜುನಾಥ ಲಕ್ಷ್ಮಣ ಆಚಾರ್ಯ ಅಧ್ಯಕ್ಷರು, ಆಚಾರ್ಯ ಸಮಾಜ, ಲಕ್ಷ್ಮಣ ಅಂಗ ಹಳ್ಳೇರ ಅಧ್ಯಕ್ಷರು, ಹಳ್ಳೇರ ಸಮಾಜ ಇವರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ರಾತ್ರಿ : 7.00 ರಿಂದ 8.00 ಗಂಟೆಯವರೆಗೆ ಶಾಲಾ ಮಕ್ಕಳ ಮನೋರಂಜನೆ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮ (ಭಕ್ತಿಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ). ರಾತ್ರಿ : 8.00 ರಿಂದ 9.00 ಗಂಟೆಯವರೆಗೆ ಮಹಾಸತಿ ಭಜನೆ ಮಂಡಳಿ ಬೆಳ್ಳಿ ಇವರಿಂದ ಕುಣಿತ ಭಜನೆ. ರಾತ್ರಿ : 9.00 ರಿಂದ ‘ಸಂಗೀತ ಗಾನ ಸಂಭ್ರಮ‘ ಕಾರ್ಯಕ್ರಮ. ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಚೆಂದಗಾಣಿಸಿಕೊಡಬೇಕೆಂದು ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್ ಬಿ ಬೊಮ್ಮಾಯಿ, ಉಪಾಧ್ಯಕ್ಷರಾದ ವಿಜಯ ಎಮ್. ಮೊಗೇರ, ಪ್ರಧಾನ ಕಾರ್ಯದರ್ಶಿ ಸುಕ್ರಯ್ಯ ಡಿ. ಹಳ್ಳೇರ, ಸಹಕಾರ್ಯದರ್ಶಿ ದೀಪಕ್ ಎಮ್. ನಾಯ್ಕ, ಖಜಾಂಚಿ ಲೋಕೇಶ ಚಿಕ್ಕಯ್ಯ ಆಚಾರ್ಯ, ಪ್ರಧಾನ ಅರ್ಚಕರಾದ ನಾಗರಾಜ ನರಸಿಂಹ ಭಟ್ಟ ವಿನಂತಿಸಿದ್ದಾರೆ. ಸದಸ್ಯರಾದ ಮಂಜುನಾಥ ಸುಕ್ರಪ್ಪ ಮೊಗೇರ, ಮಂಜುನಾಥ ಬದ್ರಯ್ಯನಮನೆ, ಶ್ರೀಧರ ಶನಿಯಾರ ನಾಯ್ಕ, ಮಂಜುನಾಥ ನಾಗಪ್ಪ ಮೊಗೇರ, ಮಂಜುನಾಥ ಆರ್. ಆಚಾರ್ಯ, ದೇವಿದಾಸ ತಿಮ್ಮಪ್ಪ ದೇವಡಿಗ, ಕೃಷ್ಣಪ್ಪ ಡಿ. ನಾಯ್ಕ, ಮಂಜುನಾಥ ಜಿ. ಆಚಾರ್ಯ ಸರ್ವರಿಗೂ ಸ್ವಾಗತ ಕೋರಿದ್ದಾರೆ.

