ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapur) : ಆಸ್ತಿ ವಿಚಾರದಲ್ಲಿ(Property Dispute) ತಂದೆ ಮತ್ತು ಮಗನ ನಡುವೆ ನಡೆದ ಜಗಳ(Clash) ವಿಕೋಪಕ್ಕೆ ಹೋಗಿ ಮಗನೇ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಭೀಬತ್ಸ ಘಟನೆ ತಾಲೂಕಿನ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ(Mavinakatta) ಭಾನುವಾರ ಬೆಳಿಗ್ಗೆ ನಡೆದಿದೆ.
ನಾರಾಯಣ ಪರಶು ಮರಾಠಿ (51) ಕೊಲೆಯಾದ ತಂದೆ ಎಂದು ಗುರುತಿಸಲಾಗಿದೆ. ಪುತ್ರ ಹರೀಶ ಮರಾಠಿ (29) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಮಾವಿನಕಟ್ಟಾ ಗ್ರಾಮದಲ್ಲಿ(Mavinakatta Village) ನಾರಾಯಣ ಮರಾಠಿ ತಮ್ಮ ಮಕ್ಕಳಾದ ಹರೀಶ ಮರಾಠಿ ಮತ್ತು ತಾರಾ ಮರಾಠಿ ಜೊತೆ ವಾಸಿಸುತ್ತಿದ್ದರು. ತೋಟದ ಕೆಲಸ ಮಾಡುತ್ತಿದ್ದ ಹರೀಶ ತನ್ನ ಪತ್ನಿ ಮತ್ತು ಮಗಳ ಜೊತೆಗೆ ಪ್ರತ್ಯೇಕವಾಗಿ ವಾಸವಿದ್ದ. ಹರೀಶ ಸಹೋದರಿ ತಾರಾ ಮತ್ತು ಸವಿತಾ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಕುಟುಂಬದಲ್ಲಿ ಜಗಳ ನಿರಂತರವಾಗಿತ್ತು
ನಿನ್ನೆ ಜಗಳವೊಂದು ನಡೆದು ಇಂದು ಬೆಳಿಗ್ಗೆ ಮತ್ತೆ ಮುಂದುವರಿದು ವಿಕೋಪಕ್ಕೆ ಹೋಗಿದೆ. ಈ ವೇಳೆ ತಂದೆ ನಾರಾಯಣ ಮರಾಠಿ ಮನೆಗೆ ಬಂದಾಗ ಮಗಳು ತಾರಾ, ಅಣ್ಣ ಹರೀಶನಿಂದ ಹೊಡೆದ ವಿಚಾರವನ್ನು ಹೇಳಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಮಗನಿಗೆ ಬುದ್ದಿವಾದ ಹೇಳಿ, ನೀನು ಇದೇ ರೀತಿ ಮಾಡುತ್ತಿದ್ದರೆ “ನಿನ್ನ ವಿರುದ್ಧ ಪೊಲೀಸ್ ಕಂಪ್ಲೆಂಟ್ ಕೊಟ್ಟು ಬರುತ್ತೇನೆ” ಎಂದು ಹೊರ ನಡೆಯಲು ಮುಂದಾದ.
ಇದರಿಂದ ಕೋಪಗೊಂಡ ಹರೀಶ ಮರಾಠಿ ಕೊಡಲಿಯಿಂದ ತಂದೆ ನಾರಾಯಣ ಮರಾಠಿಗೆ ಹೊಡೆದಿದ್ದಾನೆ. “ಮನೆ ಸಾಲ, ಮದುವೆ ಸಾಲ ನಾನೇ ತೀರಿಸಿದೆ, ಆದರೂ ಆಸ್ತಿ ಕೊಡಲಿಲ್ಲ” ಎಂದು ಕೂಗಾಡುತ್ತಾ ಕೊಡಲಿಯನ್ನು ಮತ್ತೆ ಬೀಸಿದ್ದಾನೆ. ಬೀಸಿದ ಕೊಡಲಿ ಎಡ ಕಿವಿ ಭಾಗಕ್ಕೆ ತಾಗಿದ ಪರಿಣಾಮ ನಾರಾಯಣ ಮರಾಠಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.ಕುಸಿದು ಬಿದ್ದ ತಂದೆಯನ್ನು ತಕ್ಷಣ ಯಲ್ಲಾಪುರ ಆಸ್ಪತ್ರೆಗೆ(Yallapur Hospital) ಕರೆದೊಯ್ದರು ಪ್ರಯೋಜನವಾಗದೇ ನಾರಾಯಣ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ(Yallapur Police Station) ಪ್ರಕರಣ ದಾಖಲಾಗಿ, ಆರೋಪಿ ಹರೀಶ ಮರಾಠಿಯ ಬಂಧನಕ್ಕಾಗಿ ಪೊಲೀಸರು ಶೋಧ(Police Search) ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನು ಓದಿ : ಹಾಸ್ಟೆಲ್ ನಿಂದ ಮೂವರು ವಿದ್ಯಾರ್ಥಿನಿಯರು ಕಾಣೆ. ಪತ್ತೆ ಮಾಡಿ ಕರೆ ತಂದ ಪೊಲೀಸರು.
ಕೈಗಾದಲ್ಲಿ ಗೇಟ್ ಮೈಮೇಲೆ ಬಿದ್ದು ಸಿಐಎಸ್ಎಪ್ ಸಿಬ್ಬಂದಿ ದುರ್ಮರಣ.
ಬೇಲೇಕೇರಿ ಕೇಸ್. ಶಾಸಕ ಸತೀಶ್ ಸೈಲ್ ಅವರ 21 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು.

