ಕಾರವಾರ(Karwar) : ಈಜಲು ಹೋಗಿ ಅಪಾಯಕ್ಕೆ(Dangerous) ಸಿಲುಕಿದ  ಯುವಕರಿಬ್ಬರನ್ನ ಆಪಾತ್ಬಂಧವನಂತೆ ಬಂದವರೊಬ್ಬರೂ ರಕ್ಷಣೆ (Rescue) ಮಾಡಿದ ಘಟನೆ ಚಿತ್ತಾಕುಲ(Chittakul) ಸಮೀಪದ ಹೊಳೆ ಗಜನಿಯಲ್ಲಿ (Hole Gajani) ನಡೆದಿದೆ.

ಚಿತ್ತಾಕುಲ ಸಮಿಪದ ಹೊಳೆಯಲ್ಲಿ ಇಬ್ಬರು ಯುವಕರು ಈಜಲು ತೆರಳಿದ್ದರು. ಅಪಾಯಕ್ಕೆ ಸಿಲುಕಿ ಕೂಗಾಡುತ್ತಿದ್ದಾಗ ಅದೇ ವೇಳೆ ಅಲ್ಲೆ ಪಕ್ಕದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ದೇವಭಾಗ ರೆಸಾರ್ಟ್(Devabag Resort ) ಸಿಬ್ಬಂದಿ ಪ್ರವೀಣ ಹರಿಕಾಂತ ಎಂಬುವವರು ಗಮನಿಸಿದ್ದಾರೆ.  ಯುವಕರು ಚಿರಾಡುತ್ತಿರುವುದನ್ನ ಕೇಳಿಸಿಕೊಂಡ ಪ್ರವೀಣ ಹರಿಕಾಂತ ತಕ್ಷಣ ನೀರಿಗೆ ದುಮುಕಿದ್ದಾರೆ.  ಇಬ್ಬರನ್ನ ರಕ್ಷಿಸಿ(Rescue) ಮೇಲಕ್ಕೆ ತಂದಿದ್ದಾರೆ.

ಚಿತ್ತಾಕುಲ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಬ್ಬರು ಯುವಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಇದನ್ನು ಓದಿ : ಖಜಾನೆ ಅಧಿಕಾರಿಗಳ ಮೇಲೆ ಲೋಕಾಯುಕ್ತರ ದಾಳಿ

ಗಾಂಜಾ ಮಾರಾಟಕ್ಕೆ ಯತ್ನ ಮೂವರ ಬಂಧನ