ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ(Mp Vishweshwar hegade Kageri) ಚರ್ಚೆಗೆ ಆಸ್ಪದವಾಗುವ ಹೇಳಿಕೆಯೊಂದನ್ನ ನೀಡಿದ್ದಾರೆ. ರಾಷ್ಟ್ರಗೀತೆ(National Anthem) ಜನಗಣಮನ ಕುರಿತು ನೀಡಿದ ಅಭಿಪ್ರಾಯ ರಾಜಕೀಯ ವಲಯ ಮತ್ತು ಸಾಮಾಜಿಕ ಮಾಧ್ಯಮದಲ್ಲೂ(Social Media) ವಿವಾದಕ್ಕೀಡಾಗಿದೆ.
ಹೊನ್ನಾವರದಲ್ಲಿ(Honnavar) ಜರುಗಿದ ಸರ್ದಾರ್ ವಲ್ಲಭಭಾಯಿ ಪಟೇಲ್(Sardar Vallabhabai Patel) ಅವರ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಕಾಗೇರಿ ಮಾತನಾಡುತ್ತ, “ಜನಗಣಮನ ಗೀತೆ” ಬ್ರೀಟಿಷ್ ಅಧಿಕಾರಿಗಳ(British Officers) ಸ್ವಾಗತಕ್ಕಾಗಿ ರಚಿಸಲಾಯಿತು. ವಂದೇ ಮಾತರಮ್ ಗೀತೆ(Vance mataram Geeta) ರಾಷ್ಟ್ರಗೀತೆಯಾಗಬೇಕಾಗಿತ್ತು. ಇತಿಹಾಸವನ್ನು ಅವಲೋಕಿಸಿದರೆ ಇದರ ಅರಿವು ನಮಗೆ ದೊರೆಯುತ್ತದೆ ಎಂದಿದ್ದಾರೆ.
ನಮ್ಮ ಪೂರ್ವಜರು(Ancestors) ಸೇರಿ ಜನಗಣಮನವನ್ನು ರಾಷ್ಟ್ರಗೀತೆಯನ್ನಾಗಿ ಮಾಡಿದ್ದಾರೆ. ಆದರೆ ದೇಶದ ಏಕತೆ ಮತ್ತು ಒಗ್ಗೂಡುವಿಕೆಗೆ ವಂದೇ ಮಾತರಮ್ ಗೀತೆ ಹೆಚ್ಚು ಸೂಕ್ತವಾಗಿತ್ತು ಎಂದು ಕಾಗೇರಿ ಹೇಳಿದ್ದಾರೆ.
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ವಂದೇ ಮಾತರಮ್ ಗೀತೆ(Vance Mataram Geeta) ಅತ್ಯಂತ ಇಷ್ಟವಾಗಿತ್ತು. ಈಗ ಆ ಗೀತೆಗೆ 150 ವರ್ಷಗಳು ತುಂಬಿವೆ, ಎಂದು ಅಭಿಪ್ರಾಯಪಟ್ಟರು.
ಕಾಗೇರಿ ಅವರ ಹೇಳಿಕೆಯು ರಾಷ್ಟ್ರಗೀತೆಯ ಗೌರವಕ್ಕೆ ಧಕ್ಕೆ ತರುವಂತದ್ದು ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಕಾಗೇರಿಯ ಹೇಳಿಕೆಗೆ ಪಕ್ಷ ವಲಯದಲ್ಲಿ ಬೆಂಬಲವೂ ವ್ಯಕ್ತವಾಗಿದೆ.
ಇದನ್ನು ಓದಿ : ಅಕ್ರಮ ಗೋವಾ ಸಾಗಾಟ. ಕಾರವಾರದ ಮೂವರ ಬಂಧನ
ಭಟ್ಕಳಕ್ಕೆ ಬಂತು ಹವಾಲ ಹಣ, ಬಂಗಾರ. ಪತ್ತೆ ಮಾಡಿದ ಪೊಲೀಸರು. ಓರ್ವ ಆರೆಸ್ಟ್.
ಹೊನ್ನಾವರ ವಾಣಿಜ್ಯ ಬಂದರು ಯೋಜನೆ. ಸಿಎಂ ಭೇಟಿಯಾದ ಖ್ಯಾತ ಪರಿಸರವಾದಿ ಮೇದಾ ಪಾಟ್ಕರ್.
ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ವೈಭವ
ದಾಂಡೇಲಿಯಲ್ಲಿ ಸ್ಕೂಟಿಗೆ ಟ್ರಾಕ್ಟರ್ ಢಿಕ್ಕಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಗೆ ಗಂಭೀರ ಗಾಯ.

