ಕಾರವಾರ(Karwar) :  ಕಾಲಿಗೆ ರಿಂಗ್, ಬೆನ್ನಿಗೆ ಯಂತ್ರ(Machine) ಹೊತ್ತು ಬಂದ ರಣಹದ್ದೊಂದು ಕೆಲ ಕಾಲ ಗಾಬರಿ ಮೂಡಿಸಿದ ಘಟನೆ ಕಾರವಾರದಲ್ಲಿ ನಡೆದಿದೆ. 

ಕಾಳಿ ನದಿ ಪಕ್ಕದ ನದಿವಾಡದಲ್ಲಿ ಈ ರಣಹದ್ದು (Volture) ಕಂಡು ಬಂದಿತ್ತು. ಕಳೆದ ಮೂರು ದಿನಗಳಿಂದ ಇದು ಇಲ್ಲೆ ಓಡಾಡಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸೀಬರ್ಡ್ ನೌಕಾನೆಲೆ(Naval Base), ಕೈಗಾ(Kaiga) ಅಣು ವಿದ್ಯುತ್ ಸ್ಥಾವರ ಸೇರಿದಂತೆ ಬೃಹತ್ ಯೋಜನೆಗಳು ಇವೆ. ಇಲ್ಲಿನ ಮಾಹಿತಿ ತಿಳಿಯಲು ರಣಹದ್ದಿಗೆ  ಜಿಪಿಎಸ್ ಟ್ರಾಕರ್(GPS Tracker), ಕಾಲಿನ ರಿಂಗ್ ಅಳವಡಿಸಿ ಗೂಢಚಾರಿಕೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದೆ ಇಲ್ಲಿನ ನೌಕಾನೆಲೆ ಪ್ರದೇಶದ  ಹೆದ್ದಾರಿಯಲ್ಲಿ ರಾತ್ರಿ ಡ್ರೋಣ್(Drone) ಹಾರಾಟ ನಡೆಸಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೆ ಮತ್ತೆ ಈ ರೀತಿ ಹದ್ದಿಗೆ ಜಿಪಿಎಸ್(GPS) ಕಂಡು ಬಂದಿರುವುದು ಸಂಶಯ ಹೆಚ್ಚಾಯಿತು.

ಸ್ಥಳೀಯರು ಅನುಮಾನ ಬಂದು ಅರಣ್ಯ ಇಲಾಖೆಯವರಿಗೆ(Forest Department) ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆಯವರು ಆಗಮಿಸಿ ಪರಿಶೀಲನೆ ಮಾಡಿದರು. ಮಹಾರಾಷ್ಟ್ರ ಅರಣ್ಯ ಇಲಾಖೆಯಿಂದ(Maharashtra Forest Department) ಜಿಪಿಎಸ್ ಟ್ರಾಕರ್(GPS Tracker) ಮತ್ತು ಕಾಲಿಗೆ ರಿಂಗ್ ಹಾಕಿ ಬಿಡಲಾಗಿದೆ. ಈ ರಣಹದ್ದು  ಏಲ್ಲೆಲ್ಲಿ ಹೋಗುತ್ತೆ ಅದರ ಚಲನವಲನ  ಅಧ್ಯಯನ(Study) ಮಾಡೋ ನಿಟ್ಟಿನಲ್ಲಿ ಕಳಿಸಿದ್ದಾರೆನ್ನಲಾಗಿದೆ. ಈ ಬಗ್ಗೆ ಅಲ್ಲಿನ ಅಧಿಕಾರಿಗಳು ಕಾರವಾರ ಅರಣ್ಯಧಿಕಾರಿಗಳನ್ನ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಅತಂಕ ದೂರವಾಗಿದೆ.

 ಹಿಮಾಲಯನ್ ಗ್ರಿಪನ್ ವೋಲ್ಚರ್(Himalayan greepan Volture) ಜಾತಿಯ ಈ ಪಕ್ಷಿ ಚಳಿಗಾಲದಲ್ಲಿ ವಲಸೆ(Migrate) ಬರುತ್ತೆ. ಹಿಮಾಲಯದಲ್ಲಿ ಜಾಸ್ತಿ ಹಿಮ ಬೀಳ್ತಿರೋದ್ರಿಂದ ಈ ಭಾಗಕ್ಕೆ ವಲಸೆ ಬರುತ್ತೆ. . ಅವುಗಳಿಗೆ ಆಹಾರದ ಕೊರತೆಯಾದಲ್ಲಿ ನಿತ್ರಾಣಗೊಂಡು ಸಾವನ್ನಪ್ಪುವ ಸಂಭವವಿದೆ ಎಂದು ಪಕ್ಷಿತಜ್ಞ ಗೋಪಾಲ್ ನಾಯ್ಕ ಹೇಳಿದ್ದಾರೆ.

 ಪ್ರತಿವರ್ಷವೂ ವಲಸೆ ಬರುವ ಈ ಪಕ್ಷಿ ಚಳಿಗಾಲ ಕಡಿಮೆಯಾದ ಬಳಿಕ ತಮ್ಮ ಸ್ಥಾನಕ್ಕೆ ವಾಪಾಸ್ ಮರಳುತ್ತದೆ. ಇವು ಸತ್ತ ಪ್ರಾಣಿಯ ಮಾಂಸವನ್ನಷ್ಟೇ ತಿನ್ನುತ್ತವೆ. ಆದರೆ ಬೇಟೆಯಾಡಿ ತಿನ್ನುವ ಪಕ್ಷಿಯಲ್ಲವೆಂದು ಗೋಪಾಲ್ ಹೇಳಿದ್ದಾರೆ.

ಇದನ್ನು ಓದಿ : ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಯಿಂದ ಎಂಜಲು

ಪ್ರಚೋದನಕಾರಿ ಭಾಷಣ ಮಾಡಿದ ಎಸ್ಡಿಪಿಐ ಮುಖಂಡರ ವಿರುದ್ಧ ದೂರು

ಭಟ್ಕಳ ಪೊಲೀಸರಿಂದ ಭರ್ಜರಿ ಬೇಟೆ

ಕಾಡಾನೆಗಳ ದಾಳಿಯಿಂದ ರೈತರ ಕಂಗಾಲು