ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹೊನ್ನಾವರ (Honnavar) :  ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಪ್ರದೇಶಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ(Mines and geology Department)  ಅಧಿಕಾರಿಗಳು ರಾತ್ರಿ ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮರಳು(Sand) ಸಾಗಿಸುತ್ತಿರುವ ಎರಡು ವಾಹನಗಳನ್ನ ಜಪ್ತಿ ಮಾಡಿದ್ದಾರೆ. ಹೊನ್ನಾವರ ತಾಲೂಕಿನ(Honavar Taluku) ಹೊಸಾಡು ಮತ್ತು ಬಳ್ಕೂರುನಲ್ಲಿ ದಾಳಿ ನಡೆಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಆಶಾ ನೇತೃತ್ವದಲ್ಲಿ ದಾಳಿ ನಡೆದಿದೆ.

ಹೊನ್ನಾವರ ಪೊಲೀಸ್ ಠಾಣಾ(Honavar Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರಿಂದ ವ್ಯಾಪಕ ದೂರು ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

ಇದನ್ನು ಓದಿ : ಹೋಮಿಯೋಪಥಿಯಲ್ಲಿ ಎಂಡಿ 2ನೇ Rank ಪಡೆದ ಕಾರವಾರದ ಮಧುರಾ ನಾಯಕ

ಜಿಲ್ಲಾಧಿಕಾರಿ ಹೆಸರಲ್ಲಿ ಫೇಸ್ಬುಕ್ ನಕಲಿ ಖಾತೆ. ಎಚ್ಚರ..ಎಚ್ಚರ.

ಶ್ವಾನವನ್ನ  ಬೈಕ್ ಗೆ ಕಟ್ಟಿ ದರದರನೇ ಎಳೆದೋಯ್ದ ಭೂಪ. ಪೊಲೀಸರಿಂದ ಸೋಮೊಟೊ ಪ್ರಕರಣ.