ಭಟ್ಕಳ(Bhatkal) :  ತಾಲೂಕಿನ ತೆರ್ನಮಕ್ಕಿಯ ಕೆಪಿಎಸ್  ಶಾಲೆಯ(ternamakki kps school) ಹಿರಿಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಂಕರ ನಾರಾಯಣ ಉಪ್ಪರ್ಗಿಮನೆ  ಅವರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕಾರವಾರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ನವೆಂಬರ್ ಒಂದರಂದು ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೆಕರ್, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಎಸ್ಪಿ ಎಂ ನಾರಾಯಣ ಅವರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು.

ಶಿಕ್ಷಣ ಸಂಯೋಜಕರಾಗಿ ಭಟ್ಕಳದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಪ್ರಸ್ತುತ ಕೆ.ಪಿ.ಎಸ್. ತೆರ್ನಮಕ್ಕಿ ಪ್ರಾಥಮಿಕ ವಿಭಾಗದಲ್ಲಿ ಹಿರಿಯ ಮುಖ್ಯ ಶಿಕ್ಷಕರಾಗಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಇವರು ಮಾಡಿದ ಸೇವೆಗಾಗಿ ಈ ಪ್ರಶಸ್ತಿ ದೊರಕಿದೆ. ಈ ಹಿಂದೆ ಇವರು ಸ. ಹಿ. ಪ್ರಾ. ಶಾಲೆ ಕಂಚಿಕೆರಿಯಲ್ಲಿಯೂ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಕಳೆದ 34 ವರ್ಷಗಳಿಂದ ಶಿಕ್ಷಕರಾಗಿ, ಹಿರಿಯ ಮುಖ್ಯ ಶಿಕ್ಷಕರಾಗಿ, ಇಸಿಓ ಭಟ್ಕಳ  ಆಗಿ ಅತ್ಯುತ್ತಮ ಸೇವೆ ಸಲ್ಲಿಸಿರುತ್ತಾರೆ. ಮೊದಲ ಬಾರಿ ಭಟ್ಕಳಕ್ಕೆ  ಈ ಪ್ರಶಸ್ತಿ ಬಂದಿರುವುದು ಭಟ್ಕಳದ ಶಿಕ್ಷಣಭಿಮಾನಿಗಳಿಗೆ ಸಂತಸ  ತಂದಿದೆ. ಶಂಕರ ಸರ್ ಅವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನು ಓದಿ : ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಿದ ಮಾಲೀಕನಿಗೆ ಬಿತ್ತು ಬರೋಬ್ಬರಿ ದಂಡ

ಸಂಬಂಧಿಕರಿಗೆ ಕಾಡುಕುರಿ ಮಾಂಸ ಹಂಚಲು ಹೊರಟಿದ್ದ ಇಬ್ಬರ ಬಂಧನ

ಕರ್ನಾಟಕ ಜಾನಪದ ಪ್ರಶಸ್ತಿ ಘೋಷಣೆ