ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಬೈ(Mumbai) : ಆಡಿಷನ್ ಆಮಿಷವೊಡ್ಡಿ  ಸಿನಿಮಾ ಸ್ಟುಡಿಯೊದಲ್ಲಿ 17 ಮಕ್ಕಳನ್ನು  ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿಯೋರ್ವನನ್ನ ಪೊಲೀಸರು‌ ಗುಂಡಿನ(Police Operation) ಚಕಮಕಿಯಲ್ಲಿ ಫಿನಿಶ್ ಮಾಡಿದ್ದಾರೆ.

ಗುರುವಾರ ರೋಹಿತ್ ಆರ್ಯ ಎಂಬ ಆರೋಪಿಯು ಮುಂಬೈನ ಪೊವೈ ಪ್ರದೇಶದಲ್ಲಿ(Mumbai Povai Area) ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಅಸುನಿಗಿದ್ದಾನೆ.

ಮಕ್ಕಳ ರಕ್ಷಣಾ ಕಾರ್ಯಾಚರಣೆಯ(Children’s rescue operation) ವೇಳೆ, ಆರೋಪಿ ರೋಹಿತ್ ಆರ್ಯ ಪೊಲೀಸರತ್ತ ಏರ್ ಗನ್ ನಿಂದ ಗುಂಡು ಹಾರಿಸಿದ್ದಾನೆ(Airgun Fire). ಇದಕ್ಕೆ ಪ್ರತಿಯಾಗಿ, ಪೊಲೀಸರೂ ಕೂಡ ಆತನತ್ತ ಒಂದು ಸುತ್ತಿನ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.

ಮಕ್ಕಳ ಗುಂಪೊಂದಕ್ಕೆ ಆರೋಪಿ ರೋಹಿತ್ ಆರ್ಯ, ಆಡಿಷನ್ ಆಮಿಷವೊಡ್ಡಿ ಆರ್‌ಐ ಸ್ಟುಡಿಯೋಸ್(RI Studio) ಎಂಬ ಪುಟ್ಟ ಸಿನಿಮಾ ಸ್ಟುಡಿಯೋವೊಂದರಲ್ಲಿ ಕೂಡಿ ಹಾಕಿದ್ದ.  ಹಲವಾರು ಗಂಟೆಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದ 14-18 ವರ್ಷ ವಯಸ್ಸಿನೊಳಗಿನ ಮಕ್ಕಳನ್ನು ಪೊಲೀಸರು ಸುರಕ್ಷಿತವಾಗಿ  ಹೊರ ತರುವುದು ಸವಾಲಾಗಿತ್ತು.

ಮುಂಬೈನ  ಪೊವೈ ಪೊಲೀಸ್‌ ಠಾಣೆಯ ಪೊಲೀಸರು ಮಧ್ಯಾಹ್ನ ಸುಮಾರು 1.45ರ ವೇಳೆಗೆ ಒತ್ತೆಯಾಳು ಪ್ರಕರಣದ ಕುರಿತು ಮಾಹಿತಿ ಸ್ವೀಕರಿಸಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡ(Police Team) ಆರೋಪಿಯೊಂದಿಗೆ ಸಂಧಾನದ ಮಾತುಕತೆ ಪ್ರಾರಂಭಿಸಿದರು. ಆದರೆ, ಆತ ಮಕ್ಕಳನ್ನು ಬಿಡುಗಡೆಗೊಳಿಸಲು ನಿರಾಕರಿಸಿದ್ದ. ಮಕ್ಕಳಿಗೆ ಅಪಾಯವನ್ನುಂಟು ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಪೊಲೀಸರ ತಂಡವೊಂದು ಸ್ನಾನ ಗೃಹದ ಮೂಲಕ ಬಲವಂತವಾಗಿ ಸ್ಟುಡಿಯೊದೊಳಗೆ ಪ್ರವೇಶಿಸಿ, ಎಲ್ಲಾ 17 ಮಕ್ಕಳನ್ನೂ ಸುರಕ್ಷಿತವಾಗಿ ಪಾರು ಮಾಡಿರುವುದಾಗಿ ಗೊತ್ತಾಗಿದೆ.

ಈ ಘಟನೆಗೂ ಮುನ್ನ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದ ರೋಹಿತ್ ಆರ್ಯ, “ಆತ್ಮಹತ್ಯೆ ಮಾಡಿಕೊಳ್ಳುವ ಬದಲು ನಾನು ಸರಿಯಾಗಿ ಯೋಜಿಸಿ, ಕೆಲವು ಮಕ್ಕಳನ್ನು ಒತ್ತೆ ಇರಿಸಿಕೊಂಡಿದ್ದೇನೆ. ನನ್ನಲ್ಲಿ ಹೆಚ್ಚೇನೂ ಬೇಡಿಕೆಗಳಿಲ್ಲ. ಕೆಲವು ಪ್ರಶ್ನೆಗಳಿವೆ. ಅವು ತುಂಬಾ ಸರಳವಾದ, ನೈತಿಕ ಮತ್ತು ಸೈದ್ಧಾಂತಿಕವಾದವು. ಕೆಲವರೊಂದಿಗೆ ಮಾತನಾಡಲು ಬಯಸುತ್ತೇನೆ. ಅದನ್ನು ಬಿಟ್ಟರೆ ನನಗೆ ಬೇರೇನೂ ಬೇಡ. ನಾನು ಭಯೋತ್ಪಾದಕನಲ್ಲ. ಹಣಕ್ಕಾಗಿ ಬೇಡಿಕೆ ಇಡುತ್ತಿಲ್ಲ. ನಿಮ್ಮ ಕಡೆಯಿಂದ ಒಂದೇ ಒಂದು ತಪ್ಪಾದರೂ, ಎಲ್ಲರಿಗೂ ತೊಂದರೆ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ್ದ.ಆದರೆ ಮಕ್ಕಳ ಜೀವದ ಪ್ರಶ್ನೆ ಎದುರಾಗಿ‌ ಪೊಲೀಸರ ತಮ್ಮಜೀವದ  ಹಂಗು ತೊರೆದು ಕಾರ್ಯಾಚರಣೆ(Operation) ನಡೆಸಿದ್ದರು.

ಇದನ್ನು ಓದಿ : ಸ್ಟೇರಿಂಗ್ ತುಂಡಾಗಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಸರ್ಕಾರಿ ಬಸ್.

ಚಪಲ ಚೆನ್ನಿಗ ರಾಮಚಂದ್ರ ಎಸ್ಕೇಪ್. ಜಸ್ಟ್ ಮಿಸ್. ‌ಉಪನ್ಯಾಸಕನಿಗೆ ಕಾರು ವ್ಯವಸ್ಥೆ ಮಾಡಿಸಿದ್ದ ಇಬ್ಬರು ವಶಕ್ಕೆ.

ಮೀನುಗಾರ ಮಕ್ಕಳ ಪ್ರತಿಭಾ ಪುರಸ್ಕಾರ

ರಫೆಲ್ ಯುದ್ದ ವಿಮಾನದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು.

ಎಮ್ಮೆ ಅಡ್ಡ ಬಂದು ಎಂಬಿಬಿಎಸ್ ವಿದ್ಯಾರ್ಥಿ ದುರ್ಮರಣ. ಇನ್ನೋರ್ವ ಗಂಭೀರ.