ಮುರ್ಡೇಶ್ವರ (MURDESHWAR): ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಯ ಜನತೆಗೆ ಕೇಂದ್ರ ಸರ್ಕಾರ(CENTRAL GOVERNMENT) ವಿಜಯದಶಮಿ(VIJAYADASHAMI) ಕಾಣಿಕೆ ನೀಡಿದೆ. 

ರಾಜ್ಯದ ಕರಾವಳಿಯ ಇನ್ನೆರಡು ಜಿಲ್ಲೆಗೆ ಸಂಪರ್ಕ ಬೆಸೆಯುವ ರೈಲು ಸೇವೆ ಆರಂಭವಾಗಿದೆ. ಉಡುಪಿ ಸಂಸದ(UDUPI MP) ಕೋಟ ಶ್ರೀನಿವಾಸ ಪೂಜಾರಿ(KOTA SRINIVAS POOJARI) ಅವರ ವಿಶೇಷ ಆಸಕ್ತಿಯಿಂದ ಮುರ್ಡೇಶ್ವರದಿಂದ  ತಿರುಪತಿಗೆ(MURDESHWAR to TIRUPATI) ಹೊಸ ರೈಲು ಕಾರ್ಯರಂಭ ಮಾಡಿದೆ.

ಶನಿವಾರ ಮಧ್ಯಾಹ್ನ  ಮೊದಲ ರೈಲು ಸಂಚಾರ ಆರಂಭಿಸಿದ್ದು ಇದಕ್ಕೂ ಮುನ್ನ ಮುರ್ಡೇಶ್ವರ ಮತ್ತು ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಅದ್ದೂರಿ ಪೂಜೆ ಸಲ್ಲಿಸಲಾಯಿತು.

ವಾರದಲ್ಲಿ ಬುಧವಾರ ಮತ್ತು ಶನಿವಾರ ಮಧ್ಯಾಹ್ನ 3-30 ನಿಮಿಷಕ್ಕೆ ರೈಲು ಮುರ್ಡೇಶ್ವರದಿಂದ 3-42ಕ್ಕೆ ಭಟ್ಕಳ ತಲುಪಿ ಅಲ್ಲಿಂದ ಮುಂದೆ ಬೈಂದೂರು(BYNDURU), ಕುಂದಾಪುರ(KUNDAPURA) ಹಾಗೂ ಉಡುಪಿ(UDUPI) ಜಿಲ್ಲೆಯ ಮೂಲಕ ಮಾರನೇ ದಿನ ಬೆಳಿಗ್ಗೆ 11ಗಂಟೆಗೆ ತಿರುಪತಿ ಸಮೀಪ ಇರುವ ರೇಣುಗುಂಟ (RENUGUNTA)ರೈಲ್ವೆ ನಿಲ್ದಾಣ ತಲುಪಲಿದೆ.

ಈಗಾಗಲೇ  ಕಾಚಿಗುಡದಿಂದ ಮಂಗಳೂರಿಗೆ(KACHIGUDA to MANGLORE) ಬರುತ್ತಿದ್ದ ಈ ಎಕ್ಸಪ್ರೆಸ್ ಟ್ರೆನ್(EXPRESS TRAIN) ಇದೀಗ ಮುರ್ಡೆಶ್ವರದವರೆಗೆ ವಿಸ್ತರಣೆಯಾಗಿದೆ. ಹೀಗಾಗಿ ಉತ್ತರಕನ್ನಡ ಜಿಲ್ಲೆಯ ಜನತೆಗೆ ಈ ರೈಲು ಸಂಚಾರದಿಂದ ಅನುಕೂಲವಾಗಲಿದೆ. ಹೀಗಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಜನತೆ ಧನ್ಯವಾದ ಸಲ್ಲಿಸಿದ್ದಾರೆ.

ವಿಜಯದಶಮಿಯ ಶುಭ ಸಂದರ್ಭದಲ್ಲಿ ರೈಲು ಸೇವೆ ಆರಂಭವಾಗಿದೆ. 15 ವರ್ಷಗಳ ಹಿಂದೆ ಕುಮಟಾ ಶಾಸಕ ದಿನಕರ ಶೆಟ್ಟಿ(KUMTA MLA DINAKAR SHETTY) ಅವರು ಉತ್ತರಕನ್ನಡ ಜಿಲ್ಲೆಯಿಂದ ತಿರುಪತಿಗೆ ರೈಲು ಸೇವೆ ಆರಂಭಿಸುವಂತೆ ಒತ್ತಾಯಿಸಿದ್ದರು. ಇದೀಗ ಕುಂದಾಪುರ ರೈಲ್ವೆ ಸಮಿತಿ ಮತ್ತು ಉತ್ತರಕನ್ನಡ ರೈಲ್ವೆ ಸೇವಾ ಸಮಿತಿ(UTTARKANNADA RAILWAY SEVA SAMITEE) ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಮನವಿ ಮಾಡಿಕೊಂಡಿದ್ದರಿಂದ ಬೇಡಿಕೆ ಈಡೇರಿದೆ. 

ಇಷ್ಟು ದಿನ  ಅಧಿಕ ಹಣ ವ್ಯಯಿಸಿ ಹೋಗುತ್ತಿದ್ದ ಸಾಮಾನ್ಯ ಭಕ್ತರಿಗೆ ತಿರುಪತಿ ರೈಲು ಸಂಚಾರದಿಂದಾಗಿ ಅನುಕೂಲವಾಗಲಿದೆ. ಕಡಿಮೆ ದರ, ಸುರಕ್ಷತೆ ಮತ್ತು ಆರಾಮದಾಯಕವಾಗಿರುವ ರೈಲು ಸೇವೆ ಆರಂಭವಾಗಿರೋದಕ್ಕೆ ರೈಲ್ವೆ ಸಮಿತಿಯವರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಂದೆ ಇಲ್ಲಿಂದ ಅಯೋಧ್ಯೆ ಸೇರಿದಂತೆ ಇತರೆ ರಾಜ್ಯಗಳಿಗೆ ಸಂಪರ್ಕಕ್ಕೆ ರೈಲು ಸೇವೆ ಆರಂಭವಾಗಬೇಕು ಎಂದು ಉತ್ತರಕನ್ನಡ ರೈಲ್ವೆ ಸಮಿತಿya ರಾಜೀವ್ ಗಾಂವಕರ ತಿಳಿಸಿದ್ದಾರೆ.

ಮುರ್ಡೇಶ್ವರ ನಾಗರಿಕ ಸಮಿತಿ ಅಧ್ಯಕ್ಷ ಎಸ್ ಎಸ್ ಕಾಮತ್, ಸುಬ್ರಾಯ ನಾಯ್ಕ, ಕೃಷ್ಣಾ ನಾಯ್ಕ, ಶಂಕರ್ ದೇವಾಡಿಗ, ಜಯಶಂಕರ್ ಸೇರಿದಂತೆ ಇತರರು ಇದ್ದರು.

ಭಟ್ಕಳದಲ್ಲೂ ಸಂತಸ : ಭಟ್ಕಳದಲ್ಲೂ ಸಹ ತಿರುಪತಿ ರೈಲಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಬಿಜೆಪಿಯ ಪ್ರಮುಖರು, ಜಿಎಸ್ಬಿ ಮತ್ತು ನಾಮಧಾರಿ ಸಮುದಾಯದ ನಾಗರಿಕರು ಉಪಸ್ಥಿತರಿದ್ದರು. ಇದೇ ವೇಳೆ ಸದ್ದಿಲ್ಲದೇ ತಮ್ಮ ಸೇವೆಯನ್ನ ಮಾಡುತ್ತಿರುವ ರಾಜೀವ್ ಗಾಂವಕರ ಅವರನ್ನ ಭಟ್ಕಳ ನಾಗರಿಕರ ವತಿಯಿಂದ ಸನ್ಮಾನಿಸಲಾಯಿತು.

ಇದನ್ನು ಓದಿ : ವಾಯುಭಾರ ಕುಸಿತ. ಅಕ್ಟೋಬರ್ 16ರವರೆಗೆ ಮಳೆ

ಕರಾವಳಿಯಲ್ಲಿ ಬಾಂಗ್ಲಾ ದೇಶಿಯರು. ಒಂಬತ್ತು ಜನರ ಬಂಧನ

ಕ್ಷುಲ್ಲಕ ಕಾರಣಕ್ಕೆ ಹತ್ಯೆ. ಆರೋಪಿಗಳ ಮೇಲೆ ಪೊಲೀಸರ ಪೈರಿಂಗ್

ಬೆಣಂದೂರು ಅರಣ್ಯದಲ್ಲಿ ಕಡವೆ ಹಂತಕರು