ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋವಾ(Goa) : ಆರ್ಫೋರಾದಲ್ಲಿರುವ ಬಿರ್ಚ್ ಬಾಯ್ ರೋಮಿಯೊ ಲೆನ್ ನೈಟ್ ಕ್ಲಬ್ ನಲ್ಲಿ ( Bircha Boy Romeo Lane Night Club) ಸಂಭವಿಸಿದ   ಭೀಕರ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಕ್ಲಬ್ ಮಾಲೀಕ(Club Owners) ಸಹೋದರರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಡಿಸೆಂಬರ್ ಆರರಂದು ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ(Fire Tragedy) 25 ಜನರು ನೈಟ್ ಕ್ಲಬ್ ನಲ್ಲಿ ಸಾವನ್ನಪ್ಪಿದ್ದರು. ಘಟನೆಯ ಬಳಿಕ  ಕ್ಲಬ್ ಮಾಲೀಕರಾದ(Club Owners) ಸೌರಬ್ ಲುತ್ರಾ  ಹಾಗೂ ಗೌರವ್ ಲುತ್ರಾ ಸಹೋದರರು  ಥೈಲ್ಯಾಂಡ್(Thailand) ದೇಶಕ್ಕೆ ಪರಾರಿಯಾಗಿದ್ದರು. ಪಲಾಯನ(Escape) ಮಾಡಿದ್ದ ಲೂತ್ರಾ ಸಹೋದರರನ್ನು ಥೈಲ್ಯಾಂಡ್(Thailand) ನಲ್ಲಿ  ಬಂಧಿಸಲಾಗಿದೆ.

ನೈಟ್ ಕ್ಲಬ್ ದುರಂತಕ್ಕೆ(Night Club Tragedy) ಸಂಬಂಧಿಸಿ ಗೋವಾ ಪೋಲಿಸರು(Goa Police) ಮಾಲೀಕರ  ಬಂಧನಕ್ಕಾಗಿ ಇಂಟರಪೋಲ್(Interpol) ಸಹಕಾರ ಪಡೆದು ಬ್ಲೂಕಾರ್ನ‌ರ್ ನೋಟಿಸ್‌(Blue corner Notice) ಜಾರಿಗೊಳಿಸಿದ್ದರು. ಅಲ್ಲದೇ  ಮಾಲೀಕರಾಗಿರುವ ಲೂತ್ರಾ  ಸಹೋದರರ ಪಾಸ್ ಪೋರ್ಟ್( Passport) ರದ್ದುಗೊಳಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವವರೆಗೂ  ಪಾಸ್‌ ಪೋರ್ಟ್(Passport) ಸಕ್ರೀಯವಾಗುವುದಿಲ್ಲ. ಹೀಗಾಗಿ ಮತ್ತರ ಇವರಿಬ್ಬರೂ ವಿದೇಶಕ್ಕೆ ಪಲಾಯನಗೈಯ್ಯಲು ಸಾಧ್ಯವಿಲ್ಲ ಎನ್ನಲಾಗಿದೆ.

ಇಂಟರ್ ಪೋಲ್ ಜಾರಿಗೊಳಿಸಿರುವ ಬ್ಲೂ ಕಾರ್ನರ್ ನೋಟಿಸ್‌ ನಿಂದಾಗಿ ಆರೋಪಿಗಳ ಚಲನವಲನ ಪತ್ತೆಹಚ್ಚಲು ಸಹಾಯವಾಗಿದ್ದು. ಈ ನೋಟಿಸ್ ಇಂಟರ್ ಪೋಲ್ ನ 195 ಸದಸ್ಯ ದೇಶಗಳಿಗೆ ಕಳುಹಿಸಲಾಗಿತ್ತು. ಇದರಿಂದಾಗಿ ವಿದೇಶಕ್ಕೆ ಪಲಾಯನಗೈದ 4 ದಿನದಲ್ಲಿ ಈ ಇಬ್ಬರನ್ನೂ ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಇದನ್ನು ಓದಿ : ಬೆಂಕಿ, ಸಿಲಿಂಡರ್ ಸ್ಪೋಟ, ಮನೆ ದ್ವಂಸ. ಆತಂಕ.

ಜಗಲ್‌ಬೆಟ್‌ನಲ್ಲಿ ಮಹಿಳೆಯ ಅಕಾಲಿಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ.

ಗೋವಾ ನೈಟ್ ಕ್ಲಬ್ ದುರಂತ. ಪಾರ್ಟನರ್ ಓರ್ವ ದೆಹಲಿಯಲ್ಲಿ ವಶಕ್ಕೆ.