ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗದಗ (Gadaga) : ಕುಟುಂಬ ಕಲಹದಿಂದ (Family dispute) ವ್ಯಕ್ತಿಯೊರ್ವ ಮೂವರು ಕಂದಮ್ಮಗಳನ್ನು ನದಿಗೆ ಎಸೆದು ತಾನು ವ್ಯಕ್ತಿ ಆತ್ಮಹತ್ಯೆ (sucide) ಮಾಡಿಕೊಂಡ ಘಟನೆ ಮುಂಡರಗಿ (Mundaragi) ತಾಲೂಕಿನ ಕೊರ್ಲಹಳ್ಳಿ(korlahalli) ಬಳಿಯ ತುಂಗಭದ್ರಾ ನದಿಯಲ್ಲಿ(Tungabhadra River) ನಡೆದಿದೆ.
ಮಂಜುನಾಥ ಅರಕೇರಿ ಎಂಬಾತನೆ ತನ್ನಿಬ್ಬರು ಮಕ್ಕಳು ಹಾಗೂ ಅಳಿಯನ ಮಗನನ್ನು ಎಸೆದು ನದಿಗೆ ಹಾರಿದ ವ್ಯಕ್ತಿ. ಘಟನೆಯಲ್ಲಿ ವೇದಾಂತ (3) ಪವನ್ (4) ಧನ್ಯಾ (6) ನದಿಯಲ್ಲಿ ನಾಪತ್ತೆಯಾಗಿರುವ ಮಕ್ಕಳಾಗಿದ್ದಾರೆ.
ದೀಪಾವಳಿ ಹಬ್ಬಕ್ಕೆ ತವರು ಮನೆಗೆ ಹೋಗಿದ್ದ ಪತ್ನಿಯನ್ನು ಕರೆಯಲು ಮಂಜುನಾಥ್ ಹೋಗಿದ್ದ. ಸಂಬಂಧಿಕರ ಮನೆ ಗೃಹ ಪ್ರವೇಶ ಮುಗಿಸಿಕೊಂಡು ಬರುವದಾಗಿ ಪತ್ನಿ ಹೇಳಿದ್ದಳು. ಸಿಟ್ಟಾದ ಮಂಜುನಾಥ್, ಪುಟ್ಟ ಕಂದಮ್ಮಗಳನ್ನು ನದಿಗೆ ಎಸೆದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಟಿಪ್ಪರ್ ಡ್ರೈವರ್ ಆಗಿರುವ ಮಂಜುನಾಥ್ ಮುಂಡರಗಿ ತಾಲೂಕಿನ ಮಕ್ತುಪೂರ (Maktupura) ಗ್ರಾಮದ ನಿವಾಸಿಯಾಗಿದ್ದಾನೆ. ಸ್ಥಳಕ್ಕೆ ಮುಂಡರಗಿ ಪೊಲೀಸರ (Mundaragi Police) ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೂವರು ಮಕ್ಕಳನ್ನ ನದಿಗೆ ಬಿದ್ದಿರುವ ಘಟನೆಯಿಂದಾಗಿ ಹೃದಯ ಕಲಕುವ ವಾತಾವರಣ ನಿರ್ಮಾಣವಾಗಿದೆ.
ಇದನ್ನು ಓದಿ : ಹೆಜ್ಜೇನು ದಾಳಿ ನಾಲ್ವರು ಆಸ್ಪತ್ರೆಗೆ ದಾಖಲು