ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ತಾಲೂಕಿನ ಭಾವಿಕೇರಿ – ಕೇಣಿ ಗ್ರಾಮದಲ್ಲಿ ವಾಣಿಜ್ಯ ಬಂದರು(Commercial Port) ನಿರ್ಮಾಣ ಕುರಿತು ಅಂಕೋಲಾದ(Ankola) ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಆಗಸ್ಟ್ 22 ರಂದು ಸಾರ್ವಜನಿಕ ಅಹವಾಲು(Public Hearing) ಸ್ವೀಕರಿಸುವ ಸಭೆ ಆಯೋಜಿಸಲಾಗಿದೆ.
ಸಭೆಗೆ ವಾಣಿಜ್ಯ ಬಂದರು(Commercial Port) ನಿರ್ಮಾಣದ ಪರವಾಗಿ ಮತ್ತು ವಿರೋಧವಾಗಿ ಸ್ಥಳೀಯರು ಮತ್ತು ಹೊರಗಿನವರು ಅವರ ಅಹವಾಲುಗಳನ್ನು ಸಲ್ಲಿಸಲು ಅತೀ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಸೇರುವ ಸಾಧ್ಯತೆ ಇದೆ. ಹೀಗಾಗಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಈ ವೇಳೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ದೃಷ್ಠಿಯಿಂದ ಅಂಕೋಲಾ ಶಹರದ(Ankola Town) ಬಸ್ ನಿಲ್ದಾಣ ವೃತ್ತದಿಂದ ಸುಂದರ ನಾರಾಯಣ ದೇವಸ್ಥಾನ ಪಿಕಾಕ್ ಬಾರ್ ವರೆಗಿನ ರಸ್ತೆಯಲ್ಲಿ ಸಂಚಾರ ಮತ್ತು ವಾಹನಗಳ ಪಾರ್ಕಿಂಗ್ ನ್ನು ಆಗಸ್ಟ್ 22 ರ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10ಗಂಟೆಯವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ(DC Lakshmipriya) ಆದೇಶಿಸಿದ್ದಾರೆ.
ಇದನ್ನು ಓದಿ : ಬೈಕ್ ಗೆ ಟಿಪ್ಪರ್ ಲಾರಿ ಢಿಕ್ಕಿ. ಉತ್ತರಕನ್ನಡ ಮೂಲದ ಯುವತಿ ದುರ್ಮರಣ
ಪ್ರೀತಿಸಿ ನಾಲ್ಕು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಯುವತಿ ಆ* ತ್ಯೆ. ತನಿಖೆಗೆ ಪೋಷಕರ ಒತ್ತಾಯ.
	
						
							
			
			
			
			
