ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ಎರಡು ವರ್ಷದ ಬಾಲಕಿ ಆಯಾ ತಪ್ಪಿ ಕಾಲುವೆಗೆ ಬಿದ್ದು ಮೃತಪಟ್ಟ ಘಟನೆ ಭಟ್ಕಳ(Bhatkal) ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ (Jali Pattana panchayat) ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ತೌಸೀಫ್ ಮತ್ತು ಅರ್ಜು ದಂಪತಿಯ ಎರಡು ವರ್ಷದ ಪುಟ್ಟ ಮಗು ಸಾವಾನ್ನಪ್ಪಿದೆ. ಮನೆ ಸಮೀಪ ಆಟವಾಡುತ್ತಿದ್ದ ಮಗು ಮುಂಭಾಗದ ಕಾಲುವೆ ಬಳಿ ಹೋದಾಗ ಆಯಾ ತಪ್ಪಿ ಕಾಲುವೆಗೆ ಬಿದ್ದಿದೆ. ಸ್ಥಳೀಯರು ಗಮನಿಸಿ ಕೂಗಿಕೊಂಡಾಗ ಮನೆಯವರು ಓಡಿ ಬಂದಿದ್ದಾರೆ. ತುಂಬಿ ಹರಿಯುತ್ತಿರುವ ಕಾಲುವೆಗೆ ಬಿದ್ದ ಮಗುವನ್ನ ಎತ್ತಿ ಕೂಡಲೆ ಆಸ್ಪತ್ರೆಗೆ ಕರೆದೊಯ್ದದಾದರೂ ಪ್ರಯೋಜನವಾಗಿಲ್ಲ. ಮಗು ಬೀಳುತ್ತಿರುವ ಸಿಸಿಟಿವಿ ದೃಶ್ಯ ವೈರಲ್ ಆಗಿದೆ.
ಕಳೆದ ಕೆಲ ದಿನಗಳಿಂದ ಬಾರೀ ಮಳೆಯ ಬಗ್ಗೆ ಹವಾಮಾನ ಇಲಾಖೆಯ(IMD) ಮುನ್ಸೂಚನೆ ನೀಡಿದೆ. ರೆಡ್ ಅಲರ್ಟ್(Red Alert) ಜಾರಿಯಲ್ಲಿದೆ. ಮಳೆಗಾಲದಲ್ಲಿ ಮಕ್ಕಳ ಬಗ್ಗೆ ಜಾಗೃತೆಯಿಂದಿರುವಂತೆ ತಿಳಿಸಲಾಗಿದೆ. ಒಂಟಿಯಾಗಿ ಹೊರಗೆ ಬಿಡದಂತೆ ಮತ್ತು ಕಾಲುವೆ, ತೊರೆಗಳಂತಹ ಅಪಾಯಕಾರಿ ಸ್ಥಳಗಳಿಂದ ಮಕ್ಕಳನ್ನು ದೂರವಿಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸ್ಥಳೀಯ ಆಡಳಿತವು ಕಾಲುವೆಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನು ಓದಿ : ದಾಂಡೇಲಿಯಲ್ಲಿ ಅತ್ಯಾರ ಆರೋಪಿಗೆ ಪೈರಿಂಗ್. ಓರ್ವ ಪಿಎಸ್ಐ ಸೇರಿ ಇಬ್ಬರು ಪೊಲೀಸರಿಗೆ ಗಾಯ.
ಮನೆಯೊಳಗೆ ಅವಿತುಕೊಂಡ ಚಿರತೆ. ನೋಡಿ ಕೂಗಿದ ಮಹಿಳೆ. ಶಬ್ದಕ್ಕೆ ಹೊರ ಬಂದು ಯುವಕನ ಮೇಲೆ ದಾಳಿ.