ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಚಿಕ್ಕಮಗಳೂರು(Chikmanglore) : ಕಾನೂನು ಅಂದರೆ ಎಲ್ಲರಿಗೂ ಸಮಾನ. ನಿಯಮ ಮೀರಿ ವಾಹನ ಸಂಚಾರ , ಫಾರ್ಕಿಂಗ್ ಮಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸೋದು ಸಾಮಾನ್ಯ. ಆದರೆ ಪೊಲೀಸರೇ ತಪ್ಪು ಮಾಡಿದರೂ ಅವರ ಮೇಲೂ ಕ್ರಮ ಆಗುತ್ತೆ ಎಂಬುದಕ್ಕೆ ಸಾಕ್ಷಿ  ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಸಿಕ್ಕಿದೆ.

  ಅಪರೂಪದ ಘಟನೆಯೊಂದರಲ್ಲಿ  ಇಲ್ಲಿನ  ಪಿಎಸ್‌ಐ  ಬಸವರಾಜ್ ಅವರು, ನಿಯಮ ಉಲ್ಲಂಘಿಸಿದ ಪೊಲೀಸ್ ಜೀಪಿಗೇ ದಂಡ ವಿಧಿಸಿ ಕಾನೂನು ಎಲ್ಲರಿಗೂ ಸಮಾನ ಎಂಬ ಸಂದೇಶವನ್ನು ನೀಡಿದ್ದಾರೆ.

ಎನ್.ಆರ್.ಪುರ ತಾಲೂಕಿನ(N R Pura Taluku) ಸಿಪಿಐ ಕಚೇರಿಗೆ ಸೇರಿದ ಜೀಪ್‌ನ್ನು ‘ನೋ ಪಾರ್ಕಿಂಗ್’(No Parking) ಪ್ರದೇಶದಲ್ಲಿ ನಿಲ್ಲಿಸಲಾಗಿತ್ತು. ನಿಯಮಬದ್ಧತೆಯಿಂದ ಕೆಲಸ ಮಾಡುತ್ತಿದ್ದ ಕೊಪ್ಪ ಪಿಎಸ್‌ಐ(Koppa PSI) ಬಸವರಾಜ್ ಅವರು, ಸರಿಯಾದ ಕ್ರಮ ತೆಗೆದುಕೊಂಡು, ಉಲ್ಲಂಘನೆ ಮಾಡಿದ ಜೀಪಿಗೆ ಲಾಕ್ ಹಾಕಿಸಿ ₹500 ದಂಡ ವಿಧಿಸಿದರು. ದಂಡ ಪಾವತಿಸಿದ ನಂತರ ಜೀಪ್‌ನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪಿಎಸ್‌ಐ ಬಸವರಾಜ್ ಅವರ ನಿಷ್ಪಕ್ಷಪಾತ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನು ಓದಿ : ಇಡಗುಂಜಿಯಲ್ಲಿ ಭಕ್ತರ ಮಹಾಪುರ. ದೇವರ ದರ್ಶನ ಪಡೆದ ಸಚಿವ ಮಂಕಾಳ ವೈದ್ಯ.