ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ(Newdelhi) : ಅಕ್ರಮವಾಗಿ ಕಬ್ಬಿಣದ ಆದಿರು(Iron ore) ರಫ್ತು ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ(Illegal Money Laundering) ತನಿಖೆಯ ಭಾಗವಾಗಿ ಕರ್ನಾಟಕದ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್(Congress MLA Satish Krishna Sail) ಅವರಿಗೆ ಸೇರಿದ 21 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು(Property Seaz) ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (Enforcement Department) ಶನಿವಾರ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ನವೆಂಬರ್ 6 ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ಅಡಿಯಲ್ಲಿ ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ.   ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳು(Seaz Property) ಸೈಲ್‌ಗೆ ಸೇರಿವೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ. ಅವರು ಗೋವಾ ಮೂಲದ(Goa Native) ತಮ್ಮ ಕಂಪನಿಯಾದ ಶ್ರೀ ಮಲ್ಲಿಕಾರ್ಜುನ್ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ (ಎಸ್‌ಎಂಎಸ್‌ಪಿಎಲ್) ಮೂಲಕ ಈ ಆಸ್ತಿಗಳನ್ನು ಹೊಂದಿದ್ದಾರೆ. ಅಕ್ರಮ ಹಣ ವರ್ಗಾವಣೆ(Money Laundering) ಪ್ರಕರಣಕ್ಕೆ ಈ ಹಿಂದೆ ಸಂಬಂಧಿಸಿದಂತೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್(Karwar-Ankola MLA Satish Sail) ಅವರನ್ನು ತನಿಖಾ ಸಂಸ್ಥೆ ಬಂಧಿಸಿತ್ತು.

ನಂತರ ಅವರಿಗೆ ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡಲಾಯಿತು. ಇದನ್ನು ಶುಕ್ರವಾರ ವಿಶೇಷ ಪಿಎಂಎಲ್‌ಎ ನ್ಯಾಯಾಲಯ(Special PMLA Court) ರದ್ದುಗೊಳಿಸಿದೆ ಎಂದು ಇಡಿ ಹೇಳಿದೆ. ಮೊರ್ಮುಗೋವೊದ ಚಿಕಾಲಿಮ್ ಗ್ರಾಮದಲ್ಲಿ 12,500 ಚದರ ಮೀಟರ್ ವಿಸ್ತೀರ್ಣದ ಭೂಮಿ, ದಕ್ಷಿಣ ಗೋವಾದ(South Goa) ಮರ್ಮುಗಾವೊ ತಾಲೂಕಿನಲ್ಲಿರುವ “ಪೆಡೊ ಗೇಲ್ ಕೋಟಾ” ಎಂಬ 16,850 ಚದರ ಮೀಟರ್ ವಿಸ್ತೀರ್ಣದ ಕೃಷಿ ಆಸ್ತಿ ಮತ್ತು ಗೋವಾದ ವಾಸ್ಕೋ ಡ ಗಾಮಾದಲ್ಲಿರುವ(Vasco da Gama) ವಾಣಿಜ್ಯ ಕಟ್ಟಡದ(Commercial Building) ಹಲವಾರು ಮಹಡಿಗಳು ಜಪ್ತಿ ಮಾಡಲಾದ ಆಸ್ತಿಗಳಲ್ಲಿ ಸೇರಿವೆ. ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ(Market Value) ಸುಮಾರು ರೂ. 64 ಕೋಟಿ ಎಂದು ಮಾಧ್ಯಮ ವರದಿಯಲ್ಲಿ ತಿಳಿಸಿದೆ.

ಶಾಸಕ ಸತೀಶ್ ಸೈಲ್(MLA Satish Sail) ವಿರುದ್ಧದ ಪ್ರಕರಣವು ಶಾಸಕರಿಗೆ ಸಂಬಂಧಿಸಿದೆ ಎನ್ನಲಾದ ಕಂಪನಿಯಿಂದ ಕಬ್ಬಿಣದ ಅದಿರನ್ನು “ಅಕ್ರಮ’ವಾಗಿ ರಫ್ತು ಮಾಡಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಇಡಿ‌ ತನಿಖೆಯು 2010 ರಲ್ಲಿ ಕರ್ನಾಟಕ ಲೋಕಾಯುಕ್ತರು ದಾಖಲಿಸಿದ ಪ್ರಕರಣದಿಂದ ಹುಟ್ಟಿಕೊಂಡಿದ್ದು, ಬಳ್ಳಾರಿಯಿಂದ 800,000  ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ತನಿಖೆ ಬಹಿರಂಗಪಡಿಸಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 13-14 ರಂದು ಕಾರವಾರ(Karwar), ಗೋವಾ(Gos), ಮುಂಬೈ(Mumbai) ಮತ್ತು ದೆಹಲಿಯಲ್ಲಿ(Delhi) ಇಡಿ ಅಧಿಕಾರಿಗಳು ದಾಳಿ ಮಾಡಿ  ಶೋಧ ನಡೆಸಿದ್ದರು. ಬೆಲೆಕೇರಿ ಬಂದರಿನಲ್ಲಿ(Belekeri Port) ವಶಪಡಿಸಿಕೊಂಡ ಸುಮಾರು 1.54 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರುನ್ನು SMSPL ವ್ಯವಸ್ಥಾಪಕ ನಿರ್ದೇಶಕ ಸೈಲ್ ವಿವಿಧ ಪೂರೈಕೆದಾರರಿಂದ ಖರೀದಿಸಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.
ಶಾಸಕ ಸತೀಶ ಕೃಷ್ಣ ಸೈಲ್, ಬಂದರು ಕಸ್ಟೋಡಿಯನ್ ನೊಂದಿಗೆ ಸೇರಿ, ಹಾಂಗ್ ಕಾಂಗ್‌ನಲ್ಲಿ ಮತ್ತೊಂದು ಕಂಪನಿಯನ್ನು ಸ್ಥಾಪಿಸಿದರು.  ಅಕ್ರಮವಾಗಿ ವಶಪಡಿಸಿಕೊಂಡ ಕಬ್ಬಿಣದ ಅದಿರನ್ನು ಎಮ್‌ವಿ ಕೋಲಂಬಿಯಾ ಮತ್ತು ಎಂವಿ  ಮ್ಯಾಂಡರಿನ್  ಹಾರ್ವೆಸ್ಟ್‌ನಂತಹ ಹಡಗುಗಳ ಮೂಲಕ   ಚೀನಾಕ್ಕೆ ರಫ್ತು(China Export) ಮಾಡಿದರು” ಎಂದು ಇಡಿ ಆರೋಪಿಸಿದೆ.

ಇದನ್ನು ಓದಿ : ಮಾಜಾಳಿ ಗಡಿಯಲ್ಲಿ ‘ಹರಹರ ಮಹಾದೇವ’. ಹಾರಿದ ವಾಪ್ಹರ್ ಬಲೂನ್.

ಸೋನಾರಕೇರಿಯ ಕೆರೆಯಲ್ಲಿ ಮೀನು‌ ಹಿಡಿಯಲು ಹೋದ  ಬಾಲಕ ದುರ್ಮರಣ.

ಶಾಸಕ ಸತೀಶ ಸೈಲ್ ಗೆ ಮತ್ತೆ ಬೇಲೇಕೇರಿ ಪ್ರಕರಣದ ಉರುಳು. ಬಂಧನ ವಾರಂಟ್.

ಹೆದ್ದಾರಿಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ‌ಬೆಂಕಿ. ಸ್ಥಳದಲ್ಲಿ ಆತಂಕದ ವಾತಾವರಣ.

ಮಾಜಿ ಐಪಿಎಸ್ ಅಧಿಕಾರಿ ಸಿಡಿದಿದ್ಯಾಕೆ. ಸಿಂಗಂ ಖ್ಯಾತಿಯ ಅಣ್ಣಾ ಮಲೈ ಬಿಜೆಪಿಗೆ ಗುಡ್ ಬೈ?