ಇ ಸಮಾಚಾರ ಡಿಜಿಟಲ್ಮೊ ನ್ಯೂಸ್ಗ್ಗ (esamachara digital news)(Shivamogga) : ವಿಶ್ವಪ್ರಸಿದ್ದ ಜೋಗ ಜಲಪಾತ(Jog Falls) ವೀಕ್ಷಣೆಗೆ ಇನ್ನೂ ಮೂರು ತಿಂಗಳ ಕಾಲ ನಿರ್ಭಂದಿಸಲಾಗಿದೆ.
ಪ್ರವಾಸಿ ತಾಣ ಜೋಗ ಜಲಪಾತದ(Jogfalls) ಮುಖ್ಯದ್ವಾರ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಜನವರಿ ಒಂದರಿಂದ ರಿಂದ ಮಾರ್ಚ್ ಹದಿನೈದರವರೆಗೆ ಮೂರು ತಿಂಗಳುಗಳ ಕಾಲ ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರವೇಶವನ್ನು ನಿರ್ಭಂದಿಸಲಾಗಿದೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಕಾಮಗಾರಿ ನಡೆಯುವಾಗ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ತೊಂದರೆಯಾಗಬಾರದೆಂಬ ಕಾರಣದಿಂದ ಪ್ರವೇಶ ನಿರ್ಭಂದಿಸಲಾಗಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರು ಸಹಕರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : ಪ್ರಸಿದ್ದ ತಬಲಾ ವಾದಕ ಜಾಕಿರ್ ಹುಸೇನ್ ನಿಧನ
ರಸ್ತೆ ಅಪಘಾತದಲ್ಲಿ ಯುವ ಉದ್ಯಮಿ ಗಣಪತಿ ನಾಯ್ಕ ನಿಧನ
ಮುರ್ಡೇಶ್ವರ ಘಟನೆ. ಭಟ್ಕಳ ಮೂಲದ ಹೈಕೋರ್ಟ್ ಹಿರಿಯ ನ್ಯಾಯವಾದಿಯಿಂದ ದೂರು.